Homeಅಂತರಾಷ್ಟ್ರೀಯಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಟ್ರಂಪ್ ವೀಡಿಯೊ ನಿರ್ಬಂಧಿಸಿದ ಫೇಸ್‌ಬುಕ್!

ಕೊರೊನಾ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಟ್ರಂಪ್ ವೀಡಿಯೊ ನಿರ್ಬಂಧಿಸಿದ ಫೇಸ್‌ಬುಕ್!

ಎರಡೂ ಸಾಮಾಜಿಕ-ಮಾಧ್ಯಮ ಕಂಪನಿಗಳು‌, ʼಜನರಿಗೆ ಹಾನಿ ಉಂಟುಮಾಡುವ ಕೊರೊನಾ ವೈರಸ್ ಬಗ್ಗೆ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹಂಚಿಕೊಳ್ಳುವುದನ್ನುʼ ನಿಷೇಧಿಸುವ ನೀತಿಗಳನ್ನು ಹೊಂದಿವೆ ಎಂದು ಹೇಳಿಕೊಂಡಿದೆ.

- Advertisement -
- Advertisement -

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಕುರಿತು ಹಂಚಿಕೊಂಡಿರುವ ವಿಡಿಯೋ ತಪ್ಪು ಮಾಹಿತಿ ಹೊಂದಿದೆ. ಇದು ತಮ್ಮ ನೀತಿಗಳನ್ನು ಉಲ್ಲಂಘಿಸಿದೆ ಎಂದು ಆ ವೀಡಿಯೋವನ್ನು ಟ್ವಿಟರ್ ಇಂಕ್ ಮತ್ತು ಫೇಸ್‌ಬುಕ್ ಇಂಕ್ ನಿರ್ಬಂಧಿಸಿದೆ. ಅಲ್ಲದೇ ಟ್ರಂಪ್ ಚುನಾವಣಾ ಪ್ರಚಾರದ ಟ್ವಿಟ್ಟರ್ ಖಾತೆಯಿಂದ ಹೊಸ ಟ್ವೀಟ್‌ ಕಳುಹಿಸುವುದನ್ನು ನಿಷೇಧಿಸಲಾಗಿದೆ.

ಟ್ರಂಪ್ ಬುಧವಾರ ಫಾಕ್ಸ್ ನ್ಯೂಸ್‌ನೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಾ, ‘ಶಾಲೆಗಳನ್ನು ಏಕೆ ತೆರೆಯಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ, ವಾಸ್ತವದಲ್ಲಿ ಮಕ್ಕಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ’ ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ಟ್ರಂಪ್ ಅದೇ ವೀಡಿಯೊವನ್ನು ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲಿ ತಮ್ಮ ಖಾತೆಯಿಂದ ಪೋಸ್ಟ್ ಮಾಡಿದ್ದರು. ಟ್ವಿಟರ್ ಟ್ರಂಪ್‌ ಪ್ರಚಾರದ ಖಾತೆಯನ್ನು ಸ್ಥಗಿತಗೊಳಿಸುವ ಸ್ವಲ್ಪ ಸಮಯದ ಮೊದಲು ಈ ಕ್ಲಿಪ್ ಅನ್ನು ಫೇಸ್ಬುಕ್ ತೆಗೆದುಹಾಕಿದೆ.

ಎರಡೂ ಸಾಮಾಜಿಕ-ಮಾಧ್ಯಮ ಕಂಪನಿಗಳು‌, ʼಜನರಿಗೆ ಹಾನಿ ಉಂಟುಮಾಡುವ ಕೊರೊನಾ ವೈರಸ್ ಬಗ್ಗೆ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹಂಚಿಕೊಳ್ಳುವುದನ್ನುʼ ನಿಷೇಧಿಸುವ ನೀತಿಗಳನ್ನು ಹೊಂದಿವೆ ಎಂದು ಹೇಳಿಕೊಂಡಿದೆ.

ಟ್ರಂಪ್‌ ಅವರು ತಮ್ಮ ವೈಯಕ್ತಿಕ ಖಾತೆಯಿಂದ ಪೋಸ್ಟ್ ಮಾಡುವುದನ್ನು ಟ್ವಿಟರ್ ನಿರ್ಬಂಧಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ಆರಂಭದಲ್ಲಿ ವರದಿ ಮಾಡಿತು. ಆದರೆ ನಂತರ ತಾತ್ಕಾಲಿಕ ನಿಷೇಧವು @TeamTrump ಪ್ರಚಾರ ಖಾತೆಯ ಮೇಲೆ ಮಾತ್ರ ಪರಿಣಾಮ ಬೀರಿದೆ ಎಂದು ಹೇಳಿತು.

ವೀಡಿಯೊವನ್ನು ತೆಗೆದುಹಾಕಲಾಗಿದೆ ಎಂದು ಕಂಡುಬಂದ ನಂತರ @TeamTrump ಖಾತೆ ಬುಧವಾರ ಸಂಜೆ ಪೋಸ್ಟ್ ಮಾಡುವುದನ್ನು ಪುನರಾರಂಭಿಸಿತು.

ಟ್ವಿಟರ್ ವಕ್ತಾರ ನಿಕ್ ಪ್ಯಾಸಿಲಿಯೊ ಅವರ ಪೋಸ್ಟ್ ಪ್ರಕಾರ, “eTeamTrump ನ ಮೂಲ ಟ್ವೀಟ್, ಕೊರೊನಾ ತಪ್ಪು ಮಾಹಿತಿಯ ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದೆ. ಅಧ್ಯಕ್ಷರು ತಮ್ಮ ವೈಯಕ್ತಿಕ ಖಾತೆಯಾದ @realDonaldTrump ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರೂ, ಆ ಖಾತೆಯನ್ನು ನಿರ್ಬಂಧಿಸಿಲ್ಲ ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷರ ವಿವಾದಾತ್ಮಕ ಟ್ವೀಟ್‌ಗಳ ವಿರುದ್ಧ ಕ್ರಮಗಳ ಕೊರತೆಯಿಂದಾಗಿ ಹಲವಾರು ವರ್ಷಗಳಿಂದ ಟೀಕೆಗೆ ಗುರಿಯಾಗಿದ್ದ ಟ್ವಿಟರ್, ಇತ್ತೀಚಿನ ತಿಂಗಳುಗಳಲ್ಲಿಅವರ ವಿರುದ್ಧ ಹೆಚ್ಚು ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುತ್ತಿದೆ.

ಮೇ ಅಂತ್ಯದಲ್ಲಿ, ಕಂಪನಿಯು ಮೇಲ್-ಇನ್ ಮತಪತ್ರಗಳ ಬಗ್ಗೆ ಎರಡು ಟ್ರಂಪ್ ಪೋಸ್ಟ್‌ಗಳನ್ನು ತೆಗೆದುಹಾಕಿತು. ಇದು ಮತದಾನಕ್ಕೆ ಸಂಬಂಧಿಸಿದ ಸುಳ್ಳು ಅಥವಾ ಗೊಂದಲಮಯ ಮಾಹಿತಿಯನ್ನು ತಡೆಯುವ ಹೊಸ ನೀತಿಯ ಭಾಗವಾಗಿದೆ.

ಕೆಲವು ದಿನಗಳ ನಂತರ, ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸ್ ದೌರ್ಜನ್ಯ ಮತ್ತು ವರ್ಣಭೇದ ನೀತಿಯ ವಿರುದ್ಧದ ಪ್ರತಿಭಟನೆಗಳ ಉಲ್ಲೇಖವಾಗಿ “ಲೂಟಿ ಪ್ರಾರಂಭವಾದಾಗ, ಶೂಟಿಂಗ್ ಪ್ರಾರಂಭವಾಗುತ್ತದೆ” ಎಂದು ಟ್ರಂಪ್ ಟ್ವೀಟ್ ಮಾಡಿದಾಗ ʼಹಿಂಸಾಚಾರವನ್ನು ವೈಭವೀಕರಿಸುವುದರ ವಿರುದ್ಧ ತನ್ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿʼ ಟ್ವಿಟರ್ ಮತ್ತೊಂದು ಟ್ವೀಟ್ ಅನ್ನು ನಿರ್ಬಂಧಿಸಿತ್ತು.

ಟ್ರಂಪ್ ವಿರುದ್ಧ ತನ್ನ ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ವಿಮರ್ಶಕರು ಹೇಳಿದ್ದಕ್ಕಾಗಿ ಫೇಸ್‌ಬುಕ್ ಕೂಡ ಈ ಕ್ರಮವನ್ನು ತೆಗೆದುಕೊಂಡಿದೆ.

WHO ವೆಬ್‌ಸೈಟ್‌ನ ಪ್ರಕಾರ, “ಮಕ್ಕಳು ಮತ್ತು ಹದಿಹರೆಯದವರು ಯಾವುದೇ ವಯಸ್ಸಿನವರಂತೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಮತ್ತು ರೋಗವನ್ನು ಹರಡಬಹುದು. ಕೆಲವು ಮಕ್ಕಳು ವೈರಸ್‌ಗೆ ತುತ್ತಾಗಿದ್ದಾರೆ. ಹಾಗಾಗಿ ಅವರಿಗೂ ವಯಸ್ಕರಂತೆಯೇ ಸಾಮಾಜಿಕ ದೂರ ಮಾರ್ಗಸೂಚಿಗಳನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ” ಎಂದು ಹೇಳಿದೆ.


ಇದನ್ನೂ ಓದಿ: ಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...