HomeUncategorizedಹಲವು ಪ್ರತಿಭಟನೆಗಳ ನಂತರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ ಚೀನಾ

ಹಲವು ಪ್ರತಿಭಟನೆಗಳ ನಂತರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ ಚೀನಾ

- Advertisement -
- Advertisement -

ಚೀನಾ ದೇಶದ ನಗರಗಳಲ್ಲಿ ಕೋವಿಡ್ ಲಾಕ್‌ಡೌನ್ ವಿರುದ್ಧ ನಡೆದ ಹಲವು ನಾಗರಿಕ ಪ್ರತಿಭಟನೆಗಳ ನಂತರ, ಕೆಲವು ನಗರಗಳಲ್ಲಿ ಲಾಕ್‌ಡೌನ್  ನಿರ್ಬಂಧಗಳನ್ನು ಚೀನಾ ಸರ್ಕಾರ ಸಡಿಲಿಸಿರುವ ಬಗ್ಗೆ ಬ್ರಿಟನ್-ಯುಎಸ್‌ಎಯ ಇಂಗ್ಲಿಷ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ‘ಜೀರೋ ಕೋವಿಡ್ ನೀತಿ’ಯ ಬಗ್ಗೆ ಚೀನಾ ಸರ್ಕಾರ ಧೃಢವಾಗಿದ್ದು, ಹಲವೆಡೆ ಪ್ರತಿಭಟನಕಾರರ ಮೇಲೆ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ವರದಿಗಳಿವೆ.

ಬೀಜಿಂಗ್, ಶಾಂಗೈ, ಜೆಂಗ್‌ಜೌ ಮುಂತಾದ ನಗರಗಳಲ್ಲಿ ಕೋವಿಡ್ ನಿರ್ಬಂಧಗಳ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಿದ ಬಗ್ಗೆ ಫೈನಾನ್ಷಿಯಲ್ ಟೈಮ್ಸ್, ಗಾರ್ಡಿಯನ್ ಮುಂತಾದ ಸುದ್ದಿ ಮಾಧ್ಯಗಳು ವರದಿ ಮಾಡಿದ್ದವು. ಈ ಪ್ರತಿಭಟನೆಗಳ ಮೇಲೆ ಚೀನಾ ಪೊಲೀಸರು ದಮನಕಾರಿ ಕ್ರಮಗಳನ್ನು ತೆಗೆದುಕೊಂಡಿರುವುದಲ್ಲದೆ, ಹಲವು ಪ್ರತಿಭಟನಕಾರರನ್ನು ಬಂಧಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಲವು ಪ್ರತಿಭಟನೆಗಳಲ್ಲಿ ಖಾಲಿ ಹಾಳೆಗಳನ್ನು ಪ್ರದರ್ಶಿಸುವ ಮೂಲಕ ನಾಗರಿಕರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಾ ಸರ್ಕಾರ ತನ್ನ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇರುವ ತೀವ್ರ ಸೆನ್ಸಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿದಲು ಪ್ರತಿಭಟನಕಾರರು ಖಾಲಿ ಹಾಳೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರತಿಭಟನಕಾರರನ್ನು ದಮನಿಸಲಾಗುತ್ತಿರುವುದರ ವಿರುದ್ಧ ಹಲವು ದೇಶಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಕೆನಡಾ ಮತ್ತು ಯುಎಸ್‌ಎ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಂಡಬೇಕೆಂದು ಚೀನಾವನ್ನು ಆಗ್ರಹಿಸಿವೆ.

ಮಂಗಳವಾರ ಮತ್ತು ಬುಧವಾರ ಚೀನಾದಲ್ಲಿ ಕ್ರಮವಾಗಿ 37,828 ಮತ್ತು 36,601 ವ್ಯಕ್ತಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದನ್ನು ಚೀನಾ ಪ್ರಭುತ್ವದ ಮಾಧ್ಯಮ ವರದಿಮಾಡಿದೆ. ಆದರೂ, ‘ಹೈ ರಿಸ್ಕ್’ ಎಂದು ಪರಿಗಣಿಸಲಾಗಿದ್ದ ಶಾಂಗೈನಲ್ಲಿ ಪ್ರತಿಭಟನೆಗಳನ್ನು ತಣ್ಣಗಾಗಿಸುವ ಸಲುವಾಗಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಗೌಂಗ್‌ಝೌನ ಸುಮಾರು 11 ಜಿಲ್ಲೆಗಳಲ್ಲಿ ಕೂಡ ಇದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಚೀನಾದ ವೈಸ್ ಪ್ರೀಮಿಯರ್ ಸನ್ ಚುನ್ಲಾನ್, ಒಮಿಕ್ರಾನ್ ಕೊರೊನಾ ವೈರಸ್ ಹರಡುತ್ತಿರುವ ಸಮಯದಲ್ಲಿ ಚೀನಾ ಕೋವಿಡ್ ತಡೆಗಟ್ಟುವಿಕೆಯಲ್ಲಿ ಹೊಸ ಹಂತಕ್ಕೆ ಬಂದಿರುವುದಾಗಿ ತಿಳಿಸಿದ್ದು, ಈ ನಿರ್ಬಂಧಗಳನ್ನು ಸಡಿಸಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಮುಖಂಡ ಜಿಯಾಂಗ್ ಝೆಮಿನ್ ಅವರು ಬುಧವಾರ ಮೃತಪಟ್ಟಿದ್ದರು. ಈ ಶೋಕಾಚರಣೆಯ ಸಮಯದಲ್ಲಿ ಪ್ರತಿಭಟನೆಗಳು ಹೆಚ್ಚಬಹುದು ಎಂಬ ಕಾರಣಕ್ಕಾಗಿಯೂ ಚೀನ ನಿರ್ಬಂಧಗಳನ್ನು ಸಡಿಲಿಸುವ ಕ್ರಮಕ್ಕೆ ಮುಂದಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ದಲಿತ-ದಮನಿತರನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರ: ಸ್ಕಾಲರ್‌ಶಿಪ್ ನಿಲ್ಲಿಸಿದ ಕೇಂದ್ರದ ಕ್ರಮಕ್ಕೆ AIFRTE ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...