Homeರಂಜನೆಕ್ರೀಡೆಹೀನಾಯವಾಗಿ ಸೋತ ಬೆಂಗಳೂರು ಬುಲ್ಸ್: ಕ್ಷೀಣಿಸಿದ ನೇರ ಸೆಮಿಫೈನಲ್ ತಲುಪುವ ಸಾಧ್ಯತೆ

ಹೀನಾಯವಾಗಿ ಸೋತ ಬೆಂಗಳೂರು ಬುಲ್ಸ್: ಕ್ಷೀಣಿಸಿದ ನೇರ ಸೆಮಿಫೈನಲ್ ತಲುಪುವ ಸಾಧ್ಯತೆ

- Advertisement -
- Advertisement -

ಬುಧವಾರ ರಾತ್ರಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಎದುರು 20 ಪಾಯಿಂಟ್‌ಗಳ ಅಂತರದಿಂದ ಬೆಂಗಳೂರು ಬುಲ್ಸ್ ತಂಡ ಹೀನಾಯ ಸೋಲು ಕಂಡಿತು. ಆ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ನೇರ ಸೆಮಿಫೈನಲ್ ತಲುಪುವುದು ಅವಕಾಶದಿಂದ ದೂರ ಸರಿಯುತ್ತಿದೆ.

ಈ ಹಿಂದೆ ಬೆಂಗಾಲ್ ವಾರಿಯರ್ಸ್ ಮತ್ತು ಪುಣೇರಿ ಪಲ್ಟಾನ್ ವಿರುದ್ಧ ಸೋತಿದ್ದ ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ ವಿರುದ್ಧ ಗೆದ್ದು ಎರಡನೇ ಸ್ಥಾನ ಪಡೆದಿತ್ತು. ಆದರೆ ಬುಧವಾರ ಎಲ್ಲಾ ಡಿಫೆಂಡರ್‌ಗಳು ವಿಫಲರಾದ ಕಾರಣ 25-45 ಅಂತರದಲ್ಲಿ ಸೋಲು ಕಂಡಿತು. ರೈಡಿಂಗ್‌ನಲ್ಲಿ ಭರತ್ ಸೂಪರ್ ಟೆನ್ ಗಳಿಸಿದರೂ ಸಹ ಡೆಫೆಂಡರ್‌ಗಳು ಕೈಚೆಲ್ಲಿ ಅಂಕಗಳು ಸೋರಿ ಹೋದವು. ಗೆದ್ದ ಜೈಪುರ್ ತಂಡ 69 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಅಷ್ಟೇ ಅಂಕ ಪಡೆದಿರುವ ಪುಣೇರಿ ಪಲ್ಟಾನ್ ಎರಡನೇ ಸ್ಥಾನಲ್ಲಿದೆ. ಈ ಎರಡೂ ತಂಡಗಳು ಗೆಲವಿನ ಲಯದಲ್ಲಿರುವ ಕಾರಣ ಇವು ಕೊನೆಯವರೆಗೂ ಅಂಕಪಟ್ಟಿಯಲ್ಲಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿಯೇ ಉಳಿಯುವ ಸಾಧ್ಯತೆಯಿದ್ದು, ಒಂದಕ್ಕಿಂತ ಹೆಚ್ಚು ಪಂದ್ಯ ಸೋಲದಿದ್ದರೆ ನೇರವಾಗಿ ಸೆಮಿಫೈನಲ್ ತಲುಪುವ ಅವಕಾಶ ಹೊಂದಿವೆ.

ಪ್ರೊ ಕಬಡ್ಡಿಯ ಲೀಗ್‌ ಹಂತ ಡಬಲ್ ರೌಂಡ್ ರಾಬಿನ್ ಆಧಾರದಲ್ಲಿ ನಡೆಯುತ್ತದೆ. ಪ್ರತಿ ತಂಡಕ್ಕೂ 22 ಪಂದ್ಯಗಳು ಸಿಗುತ್ತವೆ. ಅಂಕಪಟ್ಟಿಯಲ್ಲಿ ಮೊದಲ ಆರು ಸ್ಥಾನ ಪಡೆದ ತಂಡಗಳು ಪ್ಲೇಆಫ್ ಪ್ರವೇಶಿಸಿದರೆ, ಉಳಿದ 6 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಅದರಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ. ಉಳಿದ ನಾಲ್ಕು ತಂಡಗಳು ಪ್ಲೇ ಆಫ್‌ನಲ್ಲಿ ಕ್ವಾಲಿಫೈಯರ್ ಪಂದ್ಯ ಎದುರಿಸಿ ಗೆದ್ದ ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸುತ್ತವೆ. ಸೋತ ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಹಾಗಾಗಿ ಮೊದಲ ಎರಡು ಸ್ಥಾನ ಪಡೆಯುವುದು ಉತ್ತಮ. ಇಷ್ಟು ದಿನ ಮೊದಲು ಮತ್ತು ಎರಡನೇ ಸ್ಥಾನದಲ್ಲಿರುತ್ತಿದ್ದ ಬೆಂಗಳೂರು 3 ಸೋಲಿನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ಇದುವರೆಗೆ ಆಡಿದ 19 ಪಂದ್ಯಗಳಲ್ಲಿ 11 ಗೆಲುವು, 7 ಸೋಲು ಮತ್ತು ಒಂದು ಟೈನೊಂದಿಗೆ 63 ಅಂಕ ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇನ್ನೂ ಲೀಗ್ ಹಂತದಲ್ಲಿ ಮೂರು ಪಂದ್ಯಗಳು ಉಳಿದಿದ್ದು ಎರಡು ಪಂದ್ಯ ಗೆದ್ದರೆ ಸುಲಭವಾಗಿ ಪ್ಲೇ ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ಮೂರಕ್ಕೆ ಮೂರನ್ನು ಸೋತರೆ ಅದು ಪ್ಲೇ ಪ್ರವೇಶಿಸುವುದು ಕಷ್ಟವಾಗುತ್ತದೆ. ಆಗ ಉಳಿದ ತಂಡಗಳು ಸೋಲನ್ನು ಬಯಸಬೇಕಾಗುತ್ತದೆ.

ಪ್ಲೆ ಆಫ್‌ ರೇಸ್‌ನಲ್ಲಿ 8 ತಂಡಗಳು

ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟಾನ್ ಈಗಾಗಲೇ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿವೆ. ಉಳಿದ ನಾಲ್ಕು ಸ್ಥಾನಗಳಿಗಾಗಿ ಬೆಂಗಳೂರು ಬುಲ್ಸ್ (63 ಅಂಕ), ಯುಪಿ ಯೋಧ (60 ಅಂಕ), ತಮಿಳು ತಲೈವಾಸ್ (56 ಅಂಕ), ದಬಾಂಗ್ ಡೆಲ್ಲಿ (54 ಅಂಕ), ಯು ಮುಂಬಾ (50 ಅಂಕ), ಬೆಂಗಾಲ್ ವಾರಿಯರ್ಸ್ (49 ಅಂಕ) ಪಟ್ನಾ ಪೈರೇಟ್ಸ್ (48 ಅಂಕ) ಮತ್ತು ಹರ್ಯಾಣ ಸ್ಟೀಲರ್ಸ್ (46 ಅಂಕ) ಸೇರಿ ಒಟ್ಟು 8 ತಂಡಗಳು ಸೆಣಸಾಟ ನಡೆಸುತ್ತಿವೆ. ಕೆಲವು ತಂಡಗಳಿಗೆ ಇನ್ನೂ 4 ಪಂದ್ಯಗಳಿದ್ದು ಎಲ್ಲವನ್ನು ಗೆದ್ದವರು ಪ್ಲೇ ಆಫ್ ಪ್ರವೇಶಿಸಬಹುದಾಗಿದೆ. ಆದರೆ 41 ಅಂಕ ಗಳಿಸಿರುವ ಗುಜರಾತ್ ಜೈಂಟ್ಸ್ ಮತ್ತು 15 ಅಂಕ ಗಳಿಸಿರುವ ತೆಲುಗು ಟೈಟನ್ಸ್ ಮಾತ್ರ ಪ್ಲೇ ಆಪ್‌ ರೇಸ್‌ನಿಂದ ಹೊರಬಿದ್ದಿವೆ.

ಡಿಸೆಂಬರ್ 13ರಂದು 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸಿದರೆ ಮತ್ತೊಂದು ಪಂದ್ಯದಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸುತ್ತವೆ. ಗೆದ್ದವರು ಸೆಮಿಫೈನಲ್ ಪ್ರವೇಶಿಸುತ್ತಾರೆ. ಸೋತವರು ಮನೆಗೆ ನಡೆಯುತ್ತಾರೆ.

ಡಿಸೆಂಬರ್ 15ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಮತ್ತೆ ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದಕ್ಕೆ ಅಭಿಮಾನಿಗಳ ಆಕ್ರೋಶ: ಸಂಸದ ಶಶಿ ತರೂರ್ ಸಾಥ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...