Homeಮುಖಪುಟಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರ್ಪಡೆ

ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರ್ಪಡೆ

- Advertisement -
- Advertisement -

ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆ ಆದರು. ಅವರೊಟ್ಟಿಗೆ ಜೇವರ್ಗಿಯ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಮತ್ತು ಶಹಾಪುರದ ಮಾಜಿ ಗುರುಪಾಟೀಲ ಶಿರವಾಳ ಸಹ ಜೆಡಿಎಸ್ ಪಕ್ಷ ಸೇರಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂರವರು ಈ ಮೂವರನ್ನು ಪಕ್ಷಕ್ಕೆ ಬರಮಾಡಿಕೊಂಡಿಲ್ಲದೆ ಜೆಡಿಎಸ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.

ಚಿತ್ರದುರ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಕೆ.ಸಿ ವೀರೇಂದ್ರ (ಪಪ್ಪಿ) ರವರಿಗೆ ಟಿಕೆಟ್ ನೀಡಿದೆ. ಇದರಿಂದ ಬಂಡಾಯವೆದ್ದಿರುವ ರಘು ಆಚಾರ್ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ.

2008ರಲ್ಲಿ ಜೆಡಿಎಸ್ ಪಕ್ಷದ ಬಸವರಾಜನ್ ಎಂಬುವವರು ಕಾಂಗ್ರೆಸ್‌ನ ತಿಪ್ಪಾರೆಡ್ಡಿ ಮತ್ತು ಬಿಜೆಪಿಯ ಜಿ.ಎಸ್ ಮಂಜುನಾಥ್‌ರವನ್ನು ಮಣಿಸಿ ಚಿತ್ರದುರ್ಗದ ಶಾಸಕರಾಗಿದ್ದರು.

2013ರ ವೇಳೆಗೆ ತಿಪ್ಪಾರೆಡ್ಡಿ ಬಿಜೆಪಿಗೆ ಹೋದರೆ, ಜಿ.ಎಸ್ ಮಂಜುನಾಥ್ ಕಾಂಗ್ರೆಸ್‌ಗೆ ಬಂದಿದ್ದರು. ಬಸವರಾಜನ್ ಜೆಡಿಎಸ್‌ನಲ್ಲಿಯೇ ಇದ್ದರು. ಆ ಚುನಾವಣೆಯಲ್ಲಿ ತಿಪ್ಪಾರೆಡ್ಡಿ ಗೆದ್ದರು.

2018ರಲ್ಲಿ ಬಿಜೆಪಿಯಿಂದ ತಿಪ್ಪಾರೆಡ್ಡಿ, ಕಾಂಗ್ರೆಸ್‌ನಿಂದ ಹೆಚ್.ಎ ಷಣ್ಮುಗಪ್ಪ ಮತ್ತು ಜೆಡಿಎಸ್‌ನಿಂದ ಕೆ.ಸಿ ವೀರೇಂದ್ರ (ಪಪ್ಪಿ) ಸ್ಪರ್ಧಿಸಿದ್ದರು. ಆಗಲೂ ತಿಪ್ಪಾರೆಡ್ಡಿ ಗೆಲುವು ಸಾಧಿಸಿದ್ದರು.

ಈಗ 2023ರಲ್ಲಿ ಬಿಜೆಪಿ ತಿಪ್ಪಾರೆಡ್ಡಿಗೆ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ಕೆ.ಸಿ ವೀರೇಂದ್ರ (ಪಪ್ಪಿ)ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಾಗಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ಜೆಡಿಎಸ್ ಸೇರಿದ್ದು, ಅಭ್ಯರ್ಥಿಯಾಗಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ: ಕೆಆರ್‌ಪಿಪಿಯಿಂದ ಸ್ಪರ್ಧೆ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...