Homeಮುಖಪುಟಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಜನವರಿ 14 ರಂದು ತೀರ್ಪು ಪ್ರಕಟ

ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಜನವರಿ 14 ರಂದು ತೀರ್ಪು ಪ್ರಕಟ

- Advertisement -
- Advertisement -

ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೋ ಮುಲಕ್ಕಲ್ ವಿಚಾರಣೆಯನ್ನು ಕೇರಳದ ಕೊಟ್ಟಾಯಂನ ವಿಚಾರಣಾ ನ್ಯಾಯಾಲಯವು ಮುಕ್ತಾಯಗೊಳಿಸಿದೆ. ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಜಿ.ಗೋಪಕುಮಾರ್ ಸೋಮವಾರದಂದು ತೀರ್ಪು ಕಾಯ್ದಿರಿಸಿದ್ದು, ಜನವರಿ 14ರ ಶುಕ್ರವಾರದಂದು ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಜಲಂಧರ್ ಡಯಾಸಿಸ್‌ನ ಬಿಷಪ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಫ್ರಾಂಕೋ ಮೇಲೆ ಹೊರಿಸಲಾಗಿತ್ತು. 2014 ಮತ್ತು 2016 ರ ನಡುವೆ ಕೇರಳಕ್ಕೆ ಭೇಟಿ ನೀಡಿದಾಗ, 43 ವರ್ಷದ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಆರೋಪದ ನಂತರ ಫ್ರಾಂಕೊ ಅವರನ್ನು ಜಲಂಧರ್ ಡಯಾಸಿಸ್ ಉಸ್ತುವಾರಿಯಿಂದ ತೆಗೆದುಹಾಕಲಾಗಿತ್ತು.

ಇದನ್ನೂ ಓದಿ:ಅತ್ಯಾಚಾರ ಆರೋಪಿ ಬಿಷಪ್‌ ಫ್ರಾಂಕೊ ಮುಲಕ್ಕಲ್‌ನ ಅರ್ಜಿ ವಜಾ ಮಾಡಿದ ಸುಪ್ರೀಂ‌‌

ಬಿಷಪ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಜೂನ್ 2018 ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ದಾಖಲಿಸಲಾಗಿತ್ತು. ಇದರ ನಂತರ ಆರೋಪಿಯನ್ನು ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು. ಅಕ್ಟೋಬರ್ 16, 2018 ರಂದು ಜಾಮೀನು ಪಡೆದಿದ್ದರು.

ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಬಿಷಪ್ ಅವರನ್ನು ಬಂಧಿಸಿ ಅಕ್ರಮ ಬಂಧನ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಹೊರಿಸಿತ್ತು. ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತನ್ನ ಅನುಮತಿಯಿಲ್ಲದೆ ಪ್ರಕಟಿಸದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

ಇದನ್ನೂ ಓದಿ:ನಾವು ಹೇಳಿದ್ದನ್ನು ನೀವಂದೇ ಕೇಳಿದ್ದರೆ ಕೊರೊನಾದಿಂದ ಇಷ್ಟು ಕಷ್ಟ ಆಗುತ್ತಿರಲಿಲ್ಲ: ಏನು ಹೇಳುತ್ತಿದ್ದಾರೆ ಫ್ರಾಂಕ್ ಸ್ನೋಡೆನ್?

ಪ್ರಕರಣದ ವಿಚಾರಣೆ ನವೆಂಬರ್ 2019 ರಲ್ಲಿ ಪ್ರಾರಂಭವಾಯಿತು. ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿ, ಮೂವರು ಬಿಷಪ್‌ಗಳು, 11 ಪಾದ್ರಿಗಳು ಮತ್ತು 22 ಸನ್ಯಾಸಿನಿಯರು ಸೇರಿದಂತೆ 83 ಸಾಕ್ಷಿಗಳನ್ನು ಚಾರ್ಜ್‌ಶೀಟ್‌‌ ಹೆಸರಿಸಿದೆ. 83 ಸಾಕ್ಷಿಗಳ ಪೈಕಿ 39 ಮಂದಿಯನ್ನು ಕರೆಸಿ ವಿಚಾರಣೆ ನಡೆಸಲಾಯಿತು.

ಈ ಮಧ್ಯೆ, ಫ್ರಾಂಕೋ ತನ್ನ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ ಎರಡೂ ನ್ಯಾಯಾಲಯಗಳು ಇದನ್ನು ನಿರಾಕರಿಸಿದ್ದವು.

ಇದನ್ನೂ ಓದಿ: ಮಧ್ಯಪ್ರದೇಶ-ದೇವಸ್ಥಾನಕ್ಕೆ ಸಂಪೂರ್ಣ ಭೂಮಿ ನೀಡಿದ ಕುಟುಂಬಕ್ಕೆ ಬಹಿಷ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...