ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿ ಪ್ರಧಾನಿ ಭೇಟಿಗೆ ಸಜ್ಜಾದ ತಮಿಳುನಾಡು ಸಿಎಂ ಸ್ಟಾಲಿನ್ | NaanuGauri

ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ರಾಜ್ಯ ವಿಧಾನಸಭೆಗೆ ಗುರುವಾರ ಹೇಳಿದ್ದು, ಸಾರ್ವಜನಿಕ ಆಸ್ತಿಯಾಗಿರುವ ‘ಸಾರ್ವಜನಿಕ ಉದ್ದಿಮೆ’ಗಳನ್ನು ಖಾಸಗೀಕರಣಗೊಳಿಸುವ ಒಕ್ಕೂಟ ಸರ್ಕಾರದ ಪ್ರಯತ್ನಗಳನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ದ ತಮ್ಮ ಸರ್ಕಾರದ ವಿರೋಧವನ್ನು ವ್ಯಕ್ತಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ: ಮಾನಿಟೈಸೇಶನ್‌‌ ಹೆಸರಿನಲ್ಲಿ 70 ವರ್ಷಗಳ ಆಸ್ತಿ ಮಾರಾಟ ಮಾಡಲಾಗುತ್ತಿದೆ: ಪಿ. ಚಿದಂಬರಂ

ಭಾರತದ ಸಾರ್ವಜನಿಕ ಉದ್ದಿಮೆಗಳನ್ನು ಕಟ್ಟಿದ್ದು, ಆರ್ಥಿಕ ಬೆಳವಣಿಗೆಯನ್ನು ಪೋಷಿಸಲು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಿಕ್ಕಾಗಿ ಆಗಿದೆ ಎಂದು ಹೇಳಿರುವ ಅವರು, “ಈ ಸಾರ್ವಜನಿಕ ಉದ್ದಿಮೆಗಳು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳ ತಳಪಾಯ. ಈ ಸಾರ್ವಜನಿಕ ವಲಯದ ಉದ್ದಿಮೆಗಳ ಉದ್ದೇಶ ಕೇವಲ ಲಾಭವಲ್ಲ. ಅದರ ಉದ್ದೇಶ ಸಾರ್ವಜನಿಕ ಹಿತ ಮತ್ತು ಕಲ್ಯಾಣ. ಅದನ್ನು ಪರಿಗಣಿಸಿ ಅವುಗಳು ಕಾರ್ಯನಿರ್ವಹಿಸಬೇಕು” ಎಂದು ಸೂಚಿಸಿದ್ದಾರೆ.

ಈ ಮಧ್ಯೆ, ಇಂದು ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಕೂಡಾ ಒಕ್ಕೂಟ ಸರ್ಕಾರದ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ್ದಾರೆ. “ಒಕ್ಕೂಟ ಸರ್ಕಾರ ತನ್ನ ಆಸ್ತಿಯನ್ನು ಮಾನಿಟೈಸೇಶನ್‌‌ ಪಾಲಿಸಿಯ ಹೆಸರಿನಲ್ಲಿ ಮಾರಾಟ ಮಾಡಲು ಯೋಜಿಸುತ್ತಿದ್ದು, ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾಗಿರುವ ಎಲ್ಲವನ್ನೂ ಆಯ್ದ ಕೆಲವರ ಕೈಗೆ ಒತ್ತೆ ಇಡಲಾಗುತ್ತಿದೆ” ಎಂದು ಅವರು ಕಿಡಿ ಕಾರಿದ್ದಾರೆ.

ಒಕ್ಕೂಟ ಸರ್ಕಾರ ಇತ್ತೀಚೆಗೆ, ನ್ಯಾಷನಲ್‌‌ ಮಾನಿಟೈಸೇಶನ್‌‌ ಪೈಪ್‌ಲೈನ್ (NMP) ನೀತಿಯನ್ನು ಅನಾವರಣಗೊಳಿಸಿದೆ. ಕಂದಾಯ ಹಕ್ಕುಗಳನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವ ಮೂಲಕ ಬ್ರೌನ್ ಫೀಲ್ಡ್ ಯೋಜನೆಗಳಲ್ಲಿ ಮೌಲ್ಯವನ್ನು ಅನ್ಲಾಕ್ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ. ಆಸ್ತಿಗಳ ಮಾಲೀಕತ್ವವು ಸರ್ಕಾರದಲ್ಲಿ ಉಳಿಯುತ್ತದೆ ಎಂದು ಸರ್ಕಾರ ಹೇಳಿದೆ. ಪಾಲಿಸಿಯ ಮೂಲಕ ಉತ್ಪತ್ತಿಯಾದ ಹಣವನ್ನು ದೇಶದಲ್ಲಿ ಮೂಲಸೌಕರ್ಯ ಸೃಷ್ಟಿಗೆ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಇನ್ಫೋಸಿಸ್‌ ವಿರುದ್ಧ ಲೇಖನ ಪ್ರಕಟಿಸಿದ ಆರ್‌ಎಸ್‌ಎಸ್‌ನ ‘ಪಾಂಚಜನ್ಯ’

LEAVE A REPLY

Please enter your comment!
Please enter your name here