Homeಮುಖಪುಟಅಧ್ಯಕ್ಷೀಯ ಚುನಾವಣೆಯಿಂದ ಟ್ರಂಪ್ ಅನರ್ಹ: ಕೊಲೊರಡೊ ಕೋರ್ಟ್‌ ತೀರ್ಪು

ಅಧ್ಯಕ್ಷೀಯ ಚುನಾವಣೆಯಿಂದ ಟ್ರಂಪ್ ಅನರ್ಹ: ಕೊಲೊರಡೊ ಕೋರ್ಟ್‌ ತೀರ್ಪು

- Advertisement -
- Advertisement -

ಅಮೆರಿಕದ ಕ್ಯಾಪಿಟೋಲ್ (ಸಂಸತ್) ಕಟ್ಟಡದ ಮೇಲೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದ ಪ್ರಕರಣದಲ್ಲಿ ಟ್ರಂಪ್ ಪಾತ್ರ ಕಂಡು ಬಂದ ಹಿನ್ನೆಲೆ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಂತೆ ಅನರ್ಹಗೊಳಿಸಿ ಕೊಲೊರಡೊ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಸೆಕ್ಷನ್ 3ರ ಅಡಿಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರನ್ನು ಇದೇ ಮೊದಲ ಬಾರಿಗೆ ಅನರ್ಹಗೊಳಿಸಲಾಗಿದೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ 2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್ ಸಿದ್ದತೆ ನಡೆಸಿದ್ದರು. ಆದರೆ, ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಕೋರ್ಟ್‌ ನಿರ್ಬಂಧ ಹೇರಿದೆ.

ಕೊಲೊರಡೊ ಸುಪ್ರೀಂ ಕೋರ್ಟ್‌ ನಿನ್ನೆ(ಡಿ.19) ತೀರ್ಪು ನೀಡಿದೆ. ಆದರೆ, ಯುಎಸ್ ಸುಪ್ರೀಂ ಕೋರ್ಟ್ ಮೊರೆ ಹೋಗಲು ಜನವರಿ 4ವರೆಗೆ ಟ್ರಂಪ್ ಅವರಿಗೆ ಸಮಯ ನೀಡಿದೆ. ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ನಡೆಸುತ್ತಿರುವ ತಯಾರಿ ನೋಡಿದರೆ ಅವರು ಖಂಡಿತವಾಗಿಯೂ ಯುಎಸ್ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹಿನ್ನಡೆ ಅನುಭವಿಸಿದ ಬಳಿಕ ಜನವರಿ 6, 2021ರಂದು ಅವರ ಬೆಂಬಲಿಗರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಇದರ ಹಿಂದೆ ಟ್ರಂಪ್ ಅವರ ಪ್ರಚೋದನೆ ಇದೆ ಎಂದು ಆರೋಪಿಸಲಾಗಿತ್ತು.

ಕೊಲೊರಡೊ ಮತದಾರರ ಗುಂಪೊಂದು ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿತ್ತು. 2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವರಿಗೆ ನಿರ್ಬಂಧ ಹೇರುವಂತೆ ಕೋರಿತ್ತು. ವಾಷಿಂಗ್ಟನ್ ಸಿಟಿಝನ್ ಫಾರ್ ರೆಸ್ಪಾನ್ಸಿಬಿಲಿಟಿ ಅಂಡ್ ಎಥಿಕ್ಸ್ ಈ ಪ್ರಕರಣವನ್ನು ಬೆಂಬಲಿಸಿತ್ತು.

ಟ್ರಂಪ್ ವಿರುದ್ಧದ ತೀರ್ಪು ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆ ಮಾತ್ರವಲ್ಲದೆ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಏನಿದು 14 ನೇ ತಿದ್ದುಪಡಿಯ ಸೆಕ್ಷನ್ 3?

ಅಮೆರಿಕದ ಸಂವಿಧಾನದ 14 ನೇ ತಿದ್ದುಪಡಿಯ ಸೆಕ್ಷನ್ 3 ಅಡಿಯಲ್ಲಿ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲಾಗಿದೆ. ಈ ಸೆಕ್ಷನ್ ದಂಗೆ, ಹಿಂಸಾಚಾರ ಆರೋಪ ಹೊತ್ತಿರುವ ಜನರು ಅಧ್ಯಕ್ಷೀಯ ಪದವಿಯಂತಹ ಉನ್ನತ ಹುದ್ದೆಗೆ ಏರುವುದನ್ನು ತಡೆಯುತ್ತದೆ.

ಇದನ್ನೂ ಓದಿ: ಅಮಾನತುಗೊಂಡ ಸಂಸದರು ಸಂಸತ್ತಿನ ಚೇಂಬರ್, ಲಾಬಿ, ಗ್ಯಾಲರಿಗಳಿಗೆ ಪ್ರವೇಶಿಸದಂತೆ ನಿರ್ಬಂಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...