Homeಕರ್ನಾಟಕಅಸಮಾನತೆಯ ಕುದುರೆಯನ್ನು ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ: ದೇಮ

ಅಸಮಾನತೆಯ ಕುದುರೆಯನ್ನು ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ: ದೇಮ

ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಮಾನತೆಗಾಗಿ ಓಟಕ್ಕೆ ಚಾಲನೆ

- Advertisement -
- Advertisement -

ಇಂದು ದೇಶದಲ್ಲಿ ಅಸಮಾನತೆ ಹೆಚ್ಚಿದ್ದು, ಈ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ, ಅಸಹನೆಯ ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಟಕಿಯಾಡಿದರು. ಭಾರತೀಯ ಪರಿವರ್ತನ ಸಂಘವು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಗುರುವಾರ ಮುಂಜಾನೆ ಮೈಸೂರಿನ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿದ್ದ ಸಮಾನತೆಗಾಗಿ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಇಂದು ಅಂಬೇಡ್ಕರ್ ಅವರು ಹುಟ್ಟಿದ ದಿನ. ಈ ನೆನಪಿಗಾಗಿ ‘ಸಮಾನತೆಗಾಗಿ ಓಟ’ ನಡೆಯುತ್ತಿದೆ. ಅದಕ್ಕೆ ಚಾಲನೆ ಕೊಡಲು ಬಂದಿದ್ದೇನೆ. ನೋಡುವುದಕ್ಕೆ ಮಾಜಿ ಆಟಗಾರ, ಹಾಲಿ ಕೋಚ್‌ನಂತೆ ಡ್ರೆಸ್‌ಕೋಡ್‌ನಲ್ಲೇನೋ ಬಂದಿದ್ದೇನೆ. ಕ್ಷಮೆ ಇರಲಿ. ನಾನು ಎಂದೂ ಓಡಿದವನು ಅಲ್ಲ, ನಿಮ್ಮೊಡನೆ ನಿಮ್ಮ ಹಿಂದೆ ಹಿಂದೆಯಾದರೂ ಓಡುವ ಚೈತನ್ಯವೂ ಈಗ ನನಗಿಲ್ಲ. ಓಡುತ್ತಿರುವ ಎಳೆಯರ ಬೆನ್ನು ತಟ್ಟಲು ಬಂದಿದ್ದೇನೆ. ಯಾಕೆಂದರೆ ನೀವು ಇಂದು ಓಡುತ್ತಿರುವುದು ಸಮಾನತೆಗಾಗಿ ಓಟ” ಎಂದು ದೇವನೂರ ಮಹಾದೇವ ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸಮಾನತೆಗಾಗಿ ಓಡುತ್ತಿರುವ ಎಳೆಯ ಸ್ನೇಹಿತರೆ ಇಂದು ನೀವು ತುಂಬಾ ವೇಗವಾಗಿ ಓಡಬೇಕಾಗಿದೆ. ಯಾಕೆಂದರೆ ಅಸಮಾನತೆ ಇಂದು ಎಂದೂ ಇಲ್ಲದಷ್ಟು ಹುಚ್ಚು ಕುದುರೆಯಂತೆ ಓಡುತ್ತಿದೆ. ಇದಾಗಲೇ ಅದು ತುಂಬ ದೂರ ಓಡಿದೆ. ಈ ದೇಶಕ್ಕೆ ದಿಕ್ಕು ತೋರಿಸುತ್ತಿರುವ ಚಿಂತಕ, ಹೋರಾಟಗಾರ ಯೋಗೇಂದ್ರ ಯಾದವ್ ಮೊನ್ನೆ ಮೊನ್ನೆ ತಾನೇ ಮೈಸೂರಿಗೆ ಬಂದಿದ್ದರು. ಅವರು ಮಾತಾಡುತ್ತ ಒಂದು ನುಡಿಗಟ್ಟು ಹೇಳಿದ್ದರು. ‘ಭಾರತದ ಪ್ರಧಾನಿ ಮೋದಿಯವರ ಬಾಯಲ್ಲಿ ಸೀತಾಪತಿ ಅಂದರೆ- ರಾಮ, ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿ ನೀತಾಪತಿ ಅಂದರೆ- ಅಂಬಾನಿ’” ಎಂದು ಅವರು ನೆನಪಿಸಿಕೊಂಡರು.

ಇದನ್ನೂ ಓದಿ: ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

“ಭಾರತದ ಪ್ರಧಾನಿ ಮೋದಿಯವರ ಹೃದಯದಲ್ಲಿರುವ ಅಂಬಾನಿ ಲಕ್ಷಾಂತರ ಕೋಟಿಗಳ ಒಡೆಯ. ಭಾರತದಲ್ಲಿ ಇಂತಹ ನೂರಾರು ಬಿಲಿಯರ್ ಕುಟುಂಬಗಳ ಸಂಪತ್ತು ಒಟ್ಟಾದರೆ ಅದು ದೇಶದ ಒಟ್ಟು ಸಂಪತ್ತಿನ ಅರ್ಧಭಾಗದಷ್ಟು ಆಗುತ್ತದಂತೆ. ಬಡವರ ಸಂಖ್ಯೆ ದಿನ ದಿನವೂ ಹೆಚ್ಚುತ್ತಿದೆ. ಇಷ್ಟೊಂದು ಅಸಮಾನತೆ ಇಂದು ದೇಶದಲ್ಲಿದೆ. ಈ ಅಸಮಾನತೆಯ ಹುಚ್ಚು ಕುದುರೆಯನ್ನು ದ್ವೇಷ ಅಸಹನೆಯ ಕೋಮುವಾದದ ಹೆಂಡ ಕುಡಿದ ಜಾಕಿ ಓಡಿಸುತ್ತಿದ್ದಾನೆ. ಅಸಮಾನತೆಯ ಹುಚ್ಚು ಕುದುರೆ ಹುಚ್ಚೆದ್ದು ಓಡುತ್ತಿದೆ. ಆದರಿಂದ ಕಚ್ಚಿಸಿಕೊಳ್ಳದೆ ನೀವು ಎಚ್ಚರ ವಹಿಸಿ ಓಡಬೇಕಾಗಿದೆ. ನೀವು ಎಳೆಯರಾದ್ದರಿಂದ ನೀವು ಗೆಲ್ಲುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಗೆಲ್ಲಲೇ ಬೇಕು” ಎಂದು ಅವರು ಕರೆ ನೀಡಿದರು.

ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಎಸಿಪಿ ಎಸ್.ಗಂಗಾಧರಸ್ವಾಮಿ, ಕೇಂದ್ರ ಅಬಕಾರ ಮತ್ತು ಸುಂಕ ಇಲಾಖೆಯ ಅಧೀಕ್ಷಕ ಎಂ.ಯೋಗೇಂದ್ರ, ಆದಾಯ ತೆರಿಗೆ ಇಲಾಖೆಯ ಆಡಳಿತಾಧಿಕಾರಿ ಮಹದೇವಯ್ಯ, ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಮಲ್ಲಿಕಾರ್ಜುನ್, ಅರವಳಿಕೆ ತಜ್ಞ ಡಾ.ಶ್ಯಾಮ್ ಪ್ರಸಾದ್, ಜಾತ್ಯಾತೀತ ಜನತಾದಳ ಮುಖಂಡ ದೇವರಾಜ್ ಒಡೆಯರ್, ಸಾಹಿತಿ ಸೋಸಲೆ ಗಂಗಾಧರ್, ದುರ್ಗಾಂಬ ಎಂಟರ್‌ಪ್ರೈಸಸ್‌ನ ಎನ್.ಶಂಕರ, ಶ್ರೀಕಂಠೇಶ್ವರ ಎಂಟರ್‌ಪ್ರೈಸಸ್‌ನ ಜಗದೀಶ್, ತೇಜಸ್ವಿನಿ ಎಂಟರ್‌ಪ್ರೈಸಸ್‌ನ ರಾಮಕೃಷ್ಣ, ಬಿಪಿಎಸ್ ಜಿಲ್ಲಾ ಸಂಚಾಲಕ ಸೋಸಲೆ ಸಿದ್ದರಾಜು, ಜಿಲ್ಲಾಧ್ಯಕ್ಷ ಭೀಮನಹಲ್ಳಿ ಸೋಮೇಶ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಜಯಶಂಕರ್ ಮೇಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು.

ಸಮಾನತೆಗಾಗಿ ಓಟದಲ್ಲಿ ಪಾಲ್ಗೊಂಡ ಕಿರಿ-ಹಿರಿಯರು

ಭಾರತೀಯ ಪರಿವರ್ತನ ಸಂಘ ಆಯೋಜಿಸಿದ್ದ ಸಮಾನತೆಗಾಗಿ ಓಟದಲ್ಲಿ ಕಿರಿಯರು- ಹಿರಿಯರು ಪಾಲ್ಗೊಂಡಿದ್ದರು. ಪುರಭವನದಿಂದ ಆರಂಭವಾದ ಓಟ ಹಾರ್ಡಿಂಜ್ ವೃತ್ತ, ಗನ್‌ಹೌಸ್, ರಾಮಸ್ವಾಮಿ ವೃತ್ತ, ಆರ್‌ಟಿಓ, ಅಶೋಕ ವೃತ್ತ, ಕೃಷ್ಣ ಬುಲೇವಾರ್ಡ್ ರಸ್ತೆ, ಕಲಾಮಂದಿರ ರಸ್ತೆ, ರೈಲ್ವೆ ವೃತ್ತ, ಇರ್ವಿನ್ ರಸ್ತೆ ಮಾರ್ಗವಾಗಿ ಪುರಭವನದಲ್ಲಿ ಅಂತ್ಯವಾಯಿತು. ಸುಮಾರು 12 ಕಿ.ಮೀ. ಓಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಪ್ರಲಾಕ್ಷ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ತೇಜಸ್ವಿನಿ ಎಂಟರ್‌ಪ್ರೈಸಸ್‌ನಿಂದ ಟಿ-ಷರ್ಟ್ ವಿತರಿಸಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...