ದಿಶಾ ರವಿ ಜಾಮೀನು ವಿಚಾರಣೆಯಲ್ಲಿ ಕೋರ್ಟ್ ಹೇಳಿದ್ದೇನು? 10 ಪಾಯಿಂಟ್ಸ್

ರೈತ ಹೋರಾಟದ ಕುರಿತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಹಂಚಿಕೊಂಡಿದ್ದ ಟೂಲ್‌ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ಇಂದು ಬೆಂಗಳೂರಿನಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ 4 ಗಂಟೆಗೆ ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ದಿಶಾ ರವಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. “ಬೆಂಗಳೂರಿನ ಯುವತಿಯನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿರುವುದನ್ನು ಖಂಡಿಸೋಣ! ಅನ್ನದಾತ ರೈತರ ಹೋರಾಟಕ್ಕೆ ಬೆಂಬಲ ಸೋಚಿಸಿದವರನ್ನು ದೇಶದ್ರೋಹಿ ಎನ್ನಬಹುದೇ? #DishaRavi ಅವರಿಗೆ ಬೆಂಬಲ ಸೂಚಿಸೋಣ” ಎಂದು ಸಂಘಟಕರು ಕರೆ ನೀಡಿದ್ದಾರೆ.

ಸತ್ಯವನ್ನು ದಮನಿಸಲು ಸಾಧ್ಯವಿಲ್ಲ, ಪ್ರಜಾಪ್ರಭುತ್ವವನ್ನು ಬಂಧಿಸಲು ಸಾಧ್ಯವಿಲ್ಲ ಎಂದು, AISA, ಸಂಯುಕ್ತ ಹೋರಾಟ – ಕರ್ನಾಟಕ, AICCTU ಮುಂತಾದ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.

ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ದೇಶ-ವಿದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ದೆಹಲಿ ಪೊಲೀಸರು ಇನ್ನಿಬ್ಬರು ಕಾರ್ಯಕರ್ತರ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದಾರೆ. ವಕೀಲರಾದ ನಿಕಿತ ಜಾಕೋಬ್ ಮತ್ತು ಕಾರ್ಯಕರ್ತ ಶಾಂತನು ವಿರುದ್ಧ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರೈತ ಹೋರಾಟ ಬೆಂಬಲಿಸಿ ಗ್ರೆಟಾ ಹಂಚಿಕೊಂಡಿದ್ದ ಟೂಲ್‌ಕಿಟ್ ಅನ್ನು ಪೊಯಟಿಕ್ ಜಸ್ಟೀಸ್ ಎಂಬ ಸಂಘಟನೆ ಸಿದ್ದಪಡಿಸಿದೆ. ಇದು ಖಲಿಸ್ತಾನಿ ಸಂಘಟನೆಯಾಗಿದೆ. ಇದರೊಂದಿಗೆ ಸಂಬಂಧ ಹೊಂದಿರುವ ಮುಂಬೈ ಮೂಲದ ವಕೀಲರಾದ ನಿಕಿತ ಜಾಕೋಬ್ ಜನವರಿ 26 ರಂದು ಟ್ವಿಟರ್ ಆಂದೋಲನಕ್ಕೆ ಕರೆ ನೀಡಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ದಿಶಾ ರವಿ ಬೆನ್ನಲ್ಲೆ ಇನ್ನಿಬ್ಬರು ಕಾರ್ಯಕರ್ತರ ಬಂಧನಕ್ಕೆ ವಾರೆಂಟ್!

LEAVE A REPLY

Please enter your comment!
Please enter your name here