Homeಕರ್ನಾಟಕಕರ್ನಾಟಕ ಮಾದರಿಯಲ್ಲಿ ತೆಲಂಗಾಣ ಚುನಾವಣೆಗೆ 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

ಕರ್ನಾಟಕ ಮಾದರಿಯಲ್ಲಿ ತೆಲಂಗಾಣ ಚುನಾವಣೆಗೆ 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

- Advertisement -
- Advertisement -

ಕಾಂಗ್ರೆಸ್ ಪಕ್ಷವು ಕೆಲ ತಿಂಗಳುಗಳ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಭರ್ಜರಿ ಗೆಲುವು ಕಂಡಿತ್ತು. ಹಾಗಾಗಿ ಇದೀಗ ಕರ್ನಾಟಕ ಮಾದರಿಯಲ್ಲೇ ತೆಲಂಗಾಣದಲ್ಲೂ ‘ಗ್ಯಾರಂಟಿಗಳ’ ಸೂತ್ರವನ್ನು ಜಾರಿಗೆ ತರಲು ಕಾಂಗ್ರೆಸ್‌ ನಿರ್ಧರಿಸಿದೆ.

ಹೈದರಾಬಾದ್ ಸಮೀಪದ ತುಕ್ಕುಗೂಡದ ‘ವಿಜಯಭೇರಿ’ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಭಾನುವಾರ ತೆಲಂಗಾಣಕ್ಕೆ ಆರು ಗ್ಯಾರಂಟಿಗಳನ್ನು ಪೋಷಿಸಿದರು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಇವುಗಳನ್ನು ಜಾರಿಗೊಳಿಸಲು ಬದ್ಧರಾಗಿರುವುದಾಗಿ ಹೇಳಿದರು.

ತೆಲಂಗಾಣ ವಿಧಾನಸಭೆಯ 119 ಸ್ನಾನಗಳಿಗಾಗಿ ಡಿಸೆಂಬನಲ್ಲಿ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಆರು ಗಂಟೆಗಳನ್ನು ಘೋಷಿಸಿದರು.

ಆರು ಗ್ಯಾರಂಟಿಗಳು ಇಲ್ಲಿವೆ…

1. ಮಹಾಲಕ್ಷ್ಮಿ

• ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು

* 500ರೂ. ಗೆ ಎಲ್ ಪಿಜಿ ಸಿಲಿಂಡರ್

• ಸ್ತ್ರೀಯರಿಗೆ ಅರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

2. ರೈತ ಭರೋಸಾ

  • ರೈತರು ಮತ್ತು ಗೇಣಿದಾರರಿಗೆ ವಾರ್ಷಿಕ 15 ಸಾವಿರ ಆರ್ಥಿಕ ನೆರವು
  • ಕೃಷಿ ಕಾರ್ಮಿಕರಿಗೆ 12,000ರೂ.
  • ಭತ್ತದ ಬೆಳೆಗೆ 500ರೂ. ಬೆಂಬಲ ಬೆಲೆ

 

3. ಗೃಹಜೋತಿ

• ಪ್ರತಿ ಕುಟುಂಬಕ್ಕೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್

4. ಇಂದಿರಮ್ಮ ಮನೆ

• ಸ್ವಂತ ಮನೆ ಇಲ್ಲದವರಿಗೆ ನಿವೇಶನ ಮತ್ತು 5 ಲಕ್ಷ ರೂ. ನಗದು

• ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ

5. ಯುವ ವಿಕಾಸಂ

• ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಮೌಲ್ಯದ ವಿದ್ಯಾ ಭರೋಸಾ ಕಾರ್ಡ್‌ಗಳನ್ನು ನೀಡಲಾಗುವುದು.

  • ಪ್ರತಿ ಮಂಡಲದಲ್ಲಿ ತೆಲಂಗಾಣ ಇಂಟರ್‌ನ್ಯಾಷನಲ್ ಶಾಲೆ

6. ಕೈಮಗ್ಗ

• ಮಾಸಿಕ 400ರೂ. ಪಿಂಚಣಿ

  • 10 ಲಕ್ಷ ರಾಜೀವ್ ಆರೋಗ್ಯ ವಿಮೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...