Homeಮುಖಪುಟಮೋದಿಯನ್ನು ಮಹಾತ್ಮಾ ಗಾಂಧಿ ಜೊತೆ ಹೋಲಿಸಿದ ಉಪರಾಷ್ಟ್ರಪತಿ: ಪ್ರತಿಪಕ್ಷಗಳಿಂದ ಟೀಕೆ

ಮೋದಿಯನ್ನು ಮಹಾತ್ಮಾ ಗಾಂಧಿ ಜೊತೆ ಹೋಲಿಸಿದ ಉಪರಾಷ್ಟ್ರಪತಿ: ಪ್ರತಿಪಕ್ಷಗಳಿಂದ ಟೀಕೆ

- Advertisement -
- Advertisement -

ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿಯನ್ನು ನಡೆಸಿದೆ.

ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಧನಕರ್, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ಕಳೆದ ಶತಮಾನದ ‘ಮಹಾಪುರುಷ’ ಮಹಾತ್ಮಾ ಗಾಂಧಿ, ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸೆಯಿಂದ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಪ್ರಗತಿಯ ಪಥದಲ್ಲಿ ಸಾಗಿಸುತ್ತಿದ್ದಾರೆ. ಅದನ್ನು ನಾವು ಯಾವಾಗಲೂ ನೋಡಲು ಬಯಸುತ್ತೇವೆ ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಈ ಬಗ್ಗೆ ಉಪರಾಷ್ಟ್ರಪತಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರಪತಿಗಳ ಹೇಳಿಕೆ ನಾಚಿಕೆಗೇಡಿನದ್ದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗೋವಾ ಉಸ್ತುವಾರಿ ಟ್ಯಾಗೋರ್ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ನೀವು ಮೋದಿಯನ್ನು ಮಹಾತ್ಮರೊಂದಿಗೆ ಹೋಲಿಸಿದರೆ ಅದು ನಾಚಿಕೆಗೇಡಿನ ಸಂಗತಿಯಾಗಿದೆ. ಭಟ್ಟಂಗಿತನಕ್ಕೆ ಮಿತಿಯಿದೆ. ನೀವು ಈಗ ಆ ಮಿತಿಯನ್ನು ದಾಟಿದ್ದೀರಿ ಎಂದು ಹೇಳಿದ್ದಾರೆ.

ಜಗದೀಪ್‌ ಧನಕರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನಾ (ಉದ್ದವ್‌ ಬಣದ) ನಾಯಕ ಸಂಜಯ್‌ ರಾವತ್‌, ಇದನ್ನು ಇತಿಹಾಸ ಹಾಗೂ ಜನ ನಿರ್ಧರಿಸುತ್ತಾರೆ. ಮಹಾತ್ಮ ಗಾಂಧಿ ಅವರನ್ನು ಜಗತ್ತು ಪೂಜಿಸುತ್ತದೆ. ಯಾರು ಪುರುಷ, ಯುಗಪುರುಷ ಮತ್ತು ಮಹಾಪುರುಷ ಎಂದು ಇತಿಹಾಸ ಹಾಗೂ ಜನರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಬಿಎಸ್ಪಿ ಸಂಸದ ಡ್ಯಾನಿಶ್‌ ಅಲಿ, ಧನಕರ್‌ ಅವರ ಹೇಳಿಕೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಶತಮಾನದ ಮಾಹನ್‌ ವ್ಯಕ್ತಿ ಮಹಾತ್ಮ ಗಾಂಧಿ, ಈ ಶತಮಾನದ ಮಹಾನ್‌ ವ್ಯಕ್ತಿ ನರೇಂದ್ರ ಮೋದಿ. ಪ್ರಧಾನಿಯವರ ಪಕ್ಷದ ಸದಸ್ಯರು ನಿರ್ದಿಷ್ಟ ಸಮುದಾಯದ ವಿರುದ್ಧ ನಿಂದನೀಯ ಪದಗಳನ್ನು ಬಳಸಲು ಅವಕಾಶ ನೀಡುವ ಮೂಲಕ ಸಂಸತ್ತಿನಲ್ಲಿ ಯಾವ ಯುಗ ಪ್ರಾರಂಭಿಸಲಾಗಿದೆ? ಎಂದು ನಾನು ಉಪರಾಷ್ಟ್ರಪತಿಯವರಲ್ಲಿ ಕೇಳ ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪಾಕ್‌ ಕಲಾವಿದರನ್ನು ನಿಷೇಧಿಸುವಂತೆ ಅರ್ಜಿ: ಸಂಕುಚಿತ ಮನೋಭಾವ ಬೇಡ ಎಂದ ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...