ಹತ್ರಾಸ್ ಕೇಸ್

ಹತ್ರಾಸ್‌‌‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಘಟನೆಯನ್ನು ಇಟ್ಟು ದೇಶದ್ರೋಹ, ಅಂತರಾಷ್ಟ್ರೀಯ ಪಿತೂರಿ, ಧಾರ್ಮಿಕ ದ್ವೇಷ ಹರಡುವುದು ಸೇರಿದಂತೆ ರಾಜ್ಯದ ಬಗ್ಗೆ ಪಿತೂರಿ ಮಾಡಲಾಗುತ್ತಿದೆ ಎಂದು 19 ಆರೋಪಗಳ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಹತ್ರಾಸ್ ಘಟನೆಯನ್ನು ರಾಜ್ಯದ ವಿರುದ್ಧ ಪಿತೂರಿ ನಡೆಸಲು ಬಳಸುತ್ತಿದ್ದಾರೆ ಎಂದು ಹೇಳಿಕೊಂಡ 24 ಗಂಟೆಗಳ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ‘ಯೋಗಿ ಆದಿತ್ಯನಾಥ್’ ಅಲ್ಲ, ಅಜಯ್ ಮೋಹನ್ ಬಿಷ್ಠ್ ಎಂದು ಕರೆಯಿರಿ!

FIR ನಲ್ಲಿ ದೇಶದ್ರೋಹ, ಪಿತೂರಿ, ಜಾತಿಗಳನ್ನು ಪ್ರಚೋದಿಸುವುದು, ಧಾರ್ಮಿಕ ತಾರತಮ್ಯ, ಎಲೆಕ್ಟ್ರಾನಿಕ್ ಪುರಾವೆಗಳನ್ನು ತಿದ್ದುವುದು, ರಾಜ್ಯದ ವಿರುದ್ಧ ಪಿತೂರಿ ಮತ್ತು ಮಾನಹಾನಿ ಸೇರಿದಂತೆ 19 ಆರೋಪಗಳನ್ನು ಪಟ್ಟಿ ಮಾಡಲಾಗಿದೆ.

ಅತ್ಯಾಚಾರದಿಂದಾಗಿ ಕಳೆದ ವಾರ ಮೃತಪಟ್ಟ ದಲಿತ ಯುವತಿಯ ಪ್ರಕರಣದಲ್ಲಿ ಇನ್ನೂ ಬೇರೆಯೆ ಬೆಳವಣಿಗೆ ನಡೆಯುತ್ತಿದೆ ಎಂದು ಆರೋಪಗಳು ಸೂಚಿಸುತ್ತವೆ. “ಹತ್ರಾಸ್‌ನಲ್ಲಿ ಭಾರಿ ಪಿತೂರಿ ಇದೆ, ನಾವು ಸತ್ಯವನ್ನು ತನಿಖೆ ಮಾಡುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಅಭಿವೃದ್ಧಿಯನ್ನು ಇಷ್ಟಪಡದವರು, ಜನಾಂಗೀಯ ಮತ್ತು ಕೋಮು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆದಿತ್ಯನಾಥ್ ನಿನ್ನೆ ಹೇಳಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬದ ಭೇಟಿ: ಭೀಮ್ ಆರ್ಮಿ ಮುಖ್ಯಸ್ಥ ಆಜಾದ್‌ ಮೇಲೆ FIR

ಆದಿತ್ಯನಾಥ್ ಆಡಳಿತವು ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪವಿದ್ದು, ಯುವತಿಯ ಸಾವಿನ ನಂತರ ಯುಪಿ ಪೊಲೀಸರು ಶವವನ್ನು ಕುಟುಂಬಕ್ಕೆ ನೀಡದೆ ತಾವೆ ಸುಟ್ಟು ಹಾಕಿದ್ದರು. ಇದು ದೇಶದಾದ್ಯಂತ ಭಾರಿ ಆಕ್ರೋಶವನ್ನು ಹುಟ್ಟು ಹಾಕಿದೆ.

ವಿಡಿಯೋ ನೋಡಿ: ರಾಮ ರಾಜ್ಯ ಎಂದರೆ ದಲಿತ, ಮಹಿಳೆ, ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ದಾಳಿ ಮಾಡುವಂತದ್ದೇ ?

LEAVE A REPLY

Please enter your comment!
Please enter your name here