Homeಮುಖಪುಟಅತೃಪ್ತ ಸೈನಿಕರಿಂದ ಕೊರೊನಾ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

ಅತೃಪ್ತ ಸೈನಿಕರಿಂದ ಕೊರೊನಾ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

- Advertisement -
- Advertisement -

ಕೊರೊನಾ ವಿರುದ್ಧ ಮುನ್ನಲೆಯಲ್ಲಿ ನಿಂತು ಹೋರಾಡುತ್ತಿರುವ ವೈದ್ಯರು, ದಾದಿಯರು ಸೇರಿದಂತೆ ಇತರ ವಾರಿಯರ್‌ಗಳಿಗೆ ಸಮರ್ಪಕ ಸುರಕ್ಷತೆ ಮತ್ತು ಸೂಕ್ತ ಭತ್ಯೆ ನೀಡಲು ವಿಫಲವಾಗಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕುಟುಕಿದೆ. ಅರ್ಜಿದಾರರು ಕೂಡಲೇ ತಮ್ಮ ಹಕ್ಕೊತ್ತಾಯಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಜಸ್ಟೀಸ್‌ ಅಶೋಕ್‌ ಭೂಷಣ್, ಎಸ್‌.ಕೆ ಕೌಲ್ ಮತ್ತು ಎಂ.ಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ವೈದ್ಯರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಕಾಳಜಿ ವಹಿಸಬೇಕೆ ಹೊರತು ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿರಲ್ಲ ಎಂದಿದ್ದು, ಈ ಕುರಿತು ಮಾಹಿತಿ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಅತೃಪ್ತ ಸೈನಿಕರನ್ನಿಟ್ಟುಕೊಂಡು ನಾವು ಕೊರೊನಾ ಯುದ್ದ ಗೆಲ್ಲಲಾಗುವುದಿಲ್ಲ. ವೈದ್ಯರುಗಳಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ ಎಂದರೆ ಏನರ್ಥ? ಎಂದು ಕೋರ್ಟ್‌ ಪ್ರಶ್ನಿಸಿದೆ.

ಡಾ.ಜೆರ್‍ರಿ ಬಾನೈತ್‌ ಮತ್ತು ಡಾ.ಅರುಶಿ ಜೈನ್‌ ಸಲ್ಲಿಸಿರುವ ಸಾರ್ವಜನಿಕ ಹಿತರಕ್ಷಣ ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಕೀಲರಾದ ಅಮಿತ್‌ ಸಹಾನಿಯವರು “ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಕಾರ್ಯಕರ್ತರಿಗೆ ಸೂಕ್ತ ಕ್ವಾರಂಟೈನ್‌ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು” ಒತ್ತಾಯಿಸಿದರು.

ಅಲ್ಲದೇ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಆಂಬುಲೆನ್ಸ್‌ ಚಾಲಕರು ಸೇರಿದಂತೆ ಇತರರು ದಿನದ 24 ಗಂಟೆಯೂ ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯವನ್ನು ಲೆಕ್ಕಿಸದೇ ದುಡಿಯುತ್ತಿದ್ದಾರೆ. ಇಂತವರಿಗೆ ಸಕಾಲದಲ್ಲಿ ವೇತನ ಸೇರಿದಂತೆ ಇತ್ಯಾದಿ ಸೌಲಭ್ಯಗಳು ದೊರೆಯುತ್ತಿಲ್ಲ. ಈ ವಿಚಾರಕ್ಕೆ ಕೋರ್ಟ್‌ ಮಧ್ಯಪ್ರವೇಶಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗಾಗಲಿ, ಅವರ ಕುಟುಂಬದವರಿಗಾಗಲಿ ಸೋಂಕು ಹರಡದಂತೆ ತಡೆಯುವ ಜವಾಬ್ದಾರಿ ಇನ್ಫೆಕ್ಷನ್‌ ಪ್ರಿವೆಂಟಿಂಗ್‌ ಅಂಡ್‌ ಕಂಟ್ರೋಲ್‌ ಸಮಿತಿಯದಾಗಿರುತ್ತದೆ. ಆದರೆ ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಸಮಿತಿ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಅಲ್ಲದೇ ಇಂತಹ ಸಮಯದಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರ ವೇತನದಲ್ಲಿ ಕಡಿತವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವೇತನ ಕಡಿತ, ಸಮರ್ಪಕ ಸಂಬಳ ನೀಡದಿರುವುದು ಸಮಸ್ಯೆಯನ್ನು ಹೆಚ್ಚಿಸುತ್ತದೆ. ವೈದ್ಯರಿಗೆ ಸಂಬಳವಿಲ್ಲ ಎಂದರೆ ಏನರ್ಥ? ಇದು ಮತ್ತೆ ಸಂಭವಿಸುತ್ತದೆ ಎಂದು ನಾವು ಭಾವಿಸುವುದಿಲ್ಲ. ನೀವು ಹೆಚ್ಚಿನದನ್ನು ಮಾಡಬೇಕಾಗುತ್ತದೆ. ಅವರ ಮನವಿಗಳನ್ನು ಸೂಕ್ತವಾಗಿ ಆಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ ಬೀಸಿದೆ. ಮುಂದಿನ ವಿಚಾರಣೆಯನ್ನು ಜೂನ್‌ 17ಕ್ಕೆ ಮುಂದೂಡಿದೆ.

ಕೃಪೆ: ಲೈವ್‌ಲಾ


ಇದನ್ನೂ ಓದಿ: ಟೆಲಿಕಾಂ ಕುರಿತ ನಮ್ಮ ತೀರ್ಪು ದುರುಪಯೋಗವಾಗುತ್ತಿದೆ : ಕೇಂದ್ರಕ್ಕೆ ಸುಪ್ರೀಂ ಚಾಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...