Homeಮುಖಪುಟಕೊರೋನಾ ವೈರಸ್ ಭೀತಿ: ಯುರೋಪ್‌ ಪ್ರವಾಸ ರದ್ದುಗೊಳಿಸಿದ ನರೇಂದ್ರ ಮೋದಿ

ಕೊರೋನಾ ವೈರಸ್ ಭೀತಿ: ಯುರೋಪ್‌ ಪ್ರವಾಸ ರದ್ದುಗೊಳಿಸಿದ ನರೇಂದ್ರ ಮೋದಿ

- Advertisement -
- Advertisement -

ಕೊರೋನವೈರಸ್ ಭೀತಿಯಿಂದಾಗಿ ಬೆಲ್ಜಿಯಂನ ರಾಜಧಾನಿ ಬ್ರಸೆಲ್‌ನಲ್ಲಿ ನಡೆಯಬೇಕಿದ್ದ ಭಾರತ-ಯುರೋಪಿಯನ್ ಯೂನಿಯನ್ (ಇಯು)  ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ.

“ಭಾರತ-ಇಯು ಶೃಂಗಸಭೆಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ಹಾಜರಾಗಬೇಕಾಗಿತ್ತು, ಎರಡೂ ದೇಶಗಳ ಆರೋಗ್ಯ ಅಧಿಕಾರಿಗಳು ಪ್ರಸ್ತುತ ಪ್ರಯಾಣ ನಡೆಯಬಾರದು ಎಂದು ಸೂಚಿಸಿದರು. ಆದ್ದರಿಂದ, ಶೃಂಗಸಭೆಯನ್ನು ಪರಸ್ಪರ ಅನುಕೂಲಕರ ದಿನಾಂಕದಂದು ಮರು ನಿಗದಿಪಡಿಸಲು ಎಂದು ನಿರ್ಧರಿಸಲಾಗಿದೆ, ” ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಇಯು ಮತ್ತು ಭಾರತದ ನಡುವಿನ ನಿಕಟ ಸಹಕಾರದ ಉತ್ಸಾಹದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅವರು ಜಾಗತಿಕ ಆರೋಗ್ಯದ ಬಗ್ಗೆ ಒಂದೇ ರೀತಿಯ ಕಾಳಜಿ ಮತ್ತು ಬದ್ಧತೆಯನ್ನು ಹಂಚಿಕೊಳ್ಳುತ್ತಾರೆ ಮತ್ತು  ಶೀಘ್ರದಲ್ಲೇ ಸಭೆ ನಡೆಯಲಿದೆ ಎಂದು ಭಾವಿಸುತ್ತೇವೆ” ಎಂದು ಅವರು ಹೇಳಿದರು.

ಬ್ರಸೆಲ್ಸ್‌ನಲ್ಲಿನ ಯುರೋಪಿಯನ್ ಯೂನಿಯನ್ ಆಡಳಿತದಲ್ಲಿ ಕೆಲಸ ಮಾಡುತ್ತಿರುವ ಕನಿಷ್ಠ ಇಬ್ಬರು ಸಿಬ್ಬಂದಿಗೆ ಕರೋನವೈರಸ್ ಹರಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಯುರೋಪಿಯನ್ ಅಧಿಕಾರಿಗಳು ಬುಧವಾರ ತಿಳಿಸಿದ್ದರು.

ಮೊದಲ ಪ್ರಕರಣದಲ್ಲಿ ಯುರೋಪಿಯನ್ ಡಿಫೆನ್ಸ್ ಏಜೆನ್ಸಿಯಲ್ಲಿ (ಇಡಿಎ) ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಫೆಬ್ರವರಿ 23 ರಂದು ಇಟಲಿಯಿಂದ ಹಿಂದಿರುಗಿದ್ದರು. ಹಾಗಾಗಿ ವೈರಸ್‌ ಅವರಿಗೆ ತಗುಲಿದ್ದು ಅವರಿಂದ ಯುರೋಪಿಯನ್ ಕೌನ್ಸಿಲ್‌ನ ಭದ್ರತೆಯಲ್ಲಿ ಕೆಲಸ ಮಾಡುವ ಎರಡನೆಯ ವ್ಯಕ್ತಿಗೆ ಹರಡಿದೆ ಎಂದು ಹೇಳಲಾಗಿದೆ.

ಮಾರ್ಚ್ 13 ರವರೆಗೆ ಬ್ರಸೆಲ್ಸ್ ಮೂಲದ ಇಡಿಎಯ ಪ್ರಧಾನ ಕಚೇರಿಯಲ್ಲಿ ನಡೆಯಬೇಕಿದ್ದ ಎಲ್ಲಾ ಸಭೆಗಳನ್ನು ರದ್ದುಪಡಿಸಲಾಗಿದೆ ಎಂದು ಇಡಿಎಯ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಎಲಿಸಬೆತ್ ಸ್ಕೋಫ್ಮನ್ ಹೇಳಿದ್ದಾರೆ.

ದೊಡ್ಡ ಸಭೆಗಳು ಏಕಾಏಕಿ ವೈರಲಸ್‌ ಹರಡುವಿಕೆಯನ್ನು ತ್ವರಿತಗೊಳಿಸಬಹುದೆಂಬ ಆತಂಕದ ನಡುವೆ, ಸಂಸತ್ತು ಈಗಾಗಲೇ ಬ್ರಸೆಲ್ಸ್ ಮತ್ತು ಸ್ಟ್ರಾಸ್‌ಬರ್ಗ್‌ನಲ್ಲಿನ ತನ್ನ ಕಟ್ಟಡಗಳಿಗೆ ಸಾರ್ವಜನಿಕ ಪ್ರವೇಶವನ್ನು ಸೀಮಿತಗೊಳಿಸಿದೆ.

ಚೀನಾದಲ್ಲಿ ವೈರಸ್ ಸ್ಫೋಟಗೊಂಡಾಗಿನಿಂದ ವಿಶ್ವದಾದ್ಯಂತ 90,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸುಮಾರು 3,200 ಜನರು ಸಾವನ್ನಪ್ಪಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...