Homeಮುಖಪುಟ"ನ್ಯಾಯವು ವಿಜಯ ಸಾಧಿಸಬೇಕಾದಾಗ, ಅದು ವಿಜಯಶಾಲಿಯಾಗುತ್ತದೆ... ಸತ್ಯದೊಂದಿಗೆ ಇರಿ, ನ್ಯಾಯವು ದೊರೆಯುತ್ತದೆ." ನ್ಯಾ.ಎಸ್ ಮುರಳೀಧರ್‌

“ನ್ಯಾಯವು ವಿಜಯ ಸಾಧಿಸಬೇಕಾದಾಗ, ಅದು ವಿಜಯಶಾಲಿಯಾಗುತ್ತದೆ… ಸತ್ಯದೊಂದಿಗೆ ಇರಿ, ನ್ಯಾಯವು ದೊರೆಯುತ್ತದೆ.” ನ್ಯಾ.ಎಸ್ ಮುರಳೀಧರ್‌

ನ್ಯಾ.ಎಸ್ ಮುರಳೀಧರ್‌ಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕಿಕ್ಕಿರಿದ ವಕೀಲರು..

- Advertisement -
- Advertisement -

ದೆಹಲಿಯಿಂದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌‌ಗೆ ವರ್ಗಾವಣೆಯಾದ ಖ್ಯಾತ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರಿಗೆ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ವತಿಯಿಂದ ಕಿಕ್ಕಿರದ ಸಭಾಂಗಣದಲ್ಲಿ ಅಭೂತಪೂರ್ವ ಬೀಳ್ಕೊಡುಗೆ ನೀಡಲಾಯಿತು. ಕಟ್ಟಡದ ಎಲ್ಲಾ ಅಂತಸ್ತುಗಳಲ್ಲಿಯೂ ವಕೀಲರು ಕಿಕ್ಕಿರಿದು ನೆರೆದು ಶುಭಾಶಯ ಕೋರಿದರು.

“ಯಾವುದೇ ಕಾನೂನಿನ ವಿಷಯದ ಬಗ್ಗೆ ಚರ್ಚಿಸಬಹುದಾದ ಮತ್ತು ಯಾವುದೇ ರೀತಿಯ ವಿಷಯಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಪ್ರಖ್ಯಾತ ನ್ಯಾಯಾಧೀಶರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಇಂದು ಮಧ್ಯಾಹ್ನ ನಡೆದ ವಿದಾಯ ಸಮಾರಂಭದಲ್ಲಿ ಹೇಳಿದ್ದಾರೆ.

ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಕಾರ್ಯದರ್ಶಿ ಅಭಿಜತ್ ಮಾತನಾಡಿ “ಹೈಕೋರ್ಟ್‌ನ ಕೊಹಿನೂರ್‌, ಕೇವಲ 100 ಕಿಲೋ ಮೀಟರ್ ದೂರಕ್ಕಷ್ಟೇ ಹೋಗುತ್ತಿದೆ” ಎಂದಿದ್ದಾರೆ.

ನಂತರ ನ್ಯಾಯಮೂರ್ತಿ ಮುರಳೀಧರ್‌ರವರು ಮಾತನಾಡಿ, “ನಾನು ವಕೀಲ ಅಥವಾ ನ್ಯಾಯಾಧೀಶನಾಗಬೇಕೆಂದು ಚಿಕ್ಕವನಿದ್ದಾಗ ತೀರ್ಮಾನಿಸಿರಲಿಲ್ಲ. ಈ ನ್ಯಾಯಾಲಯಕ್ಕೆ ಬಂದಿರುವುದು ನಂಬಲಾಗದ ವ್ಯಂಗ್ಯವಾಗಿದೆ” ಎಂದಿದ್ದಾರೆ.

“ನಾನು ಕಾನೂನು ವ್ಯಾಸಂಗ ಮಾಡಲು ಉದ್ದೇಶಿಸಿರಲಿಲ್ಲ. ಎಂಎಸ್ಸಿಗೆ ಸೇರಿದ್ದ ನಾನು ವಕೀಲರ ಮಗನೊಂದಿಗೆ ಕ್ರಿಕೆಟ್ ಆಡುತ್ತಿದ್ದೆ ಮತ್ತು ನನ್ನ ಕ್ರಿಕೆಟ್ ಚೀಲವನ್ನು ಅವನ ಕೋಣೆಗಳಲ್ಲಿ ಬಿಡುತ್ತಿದ್ದೆ. ನಂತರ ನಾನು ಆತನೊಂದಿಗೆ ಕಾನೂನು ಓದಬೇಕಾಯಿತು” ಎಂದು ತಿಳಿಸಿದರು.

ಅಂತಿಮವಾಗಿ 1984 ರ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದ ಅವರು 1987 ರಲ್ಲಿ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ದೆಹಲಿಗೆ ತೆರಳಿದರು. ಮಾಜಿ ಅಟಾರ್ನಿ ಜನರಲ್ ಜಿ ರಾಮಸ್ವಾಮಿ ಅವರ ಅಡಿಯಲ್ಲಿ ಜೂನಿಯರ್ ಆಗಿ ಕೆಲಸ ಮಾಡಿದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಯುವ ವಕೀಲರ ಕುರಿತು ಮಾತನಾಡಿದ ಅವರು “ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ, ಕೇವಲ ಚೀಟಿಯೊಂದನ್ನು ಇಟ್ಟುಕೊಂಡು ಕೋರ್ಟ್‌‌ಗೆ ಬರುವ ಯುವಜನರನ್ನು ನೋಡಿದರೆ ನನಗೆ ಕಿರಿಕಿರಿಯಾಗುತ್ತದೆ. ಕಿರಿಯರು ಸಮರ್ಪಕವಾಗಿ ಸಿದ್ಧರಾಗಿ ಬಂದು ವಾದಿಸಲು ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ.” ಎಂದಿದ್ದಾರೆ.

“ನ್ಯಾಯವು ವಿಜಯ ಸಾಧಿಸಬೇಕಾದಾಗ, ಅದು ವಿಜಯಶಾಲಿಯಾಗುತ್ತದೆ… ಸತ್ಯದೊಂದಿಗೆ ಇರಿ, ನ್ಯಾಯವು ದೊರೆಯುತ್ತದೆ.” ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...