Homeಮುಖಪುಟದಂಪತಿಗಳು ವಿಚ್ಚೇದನಕ್ಕೆ ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ: ಸುಪ್ರೀಂ ತೀರ್ಪು

ದಂಪತಿಗಳು ವಿಚ್ಚೇದನಕ್ಕೆ ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ: ಸುಪ್ರೀಂ ತೀರ್ಪು

- Advertisement -
- Advertisement -

ವಿಚ್ಛೇದನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಮಹತ್ವದ ತೀರ್ಪುನ್ನು ನೀಡಿದೆ. ವಿಚ್ಚೇದನೆ ಪಡೆಯಲು ಆರು ತಿಂಗಳು ಕಾಯಬೇಕಿತ್ತು, ಆದರೆ ಇದೀಗ ದಂಪತಿಗಳು ಆರು ತಿಂಗಳು ಕಾಯುವ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ತೀರ್ಪು ನೀಡಿದೆ.

ದಂಪತಿಗಳು ವಿಚ್ಛೇದನ ಪಡೆಯಲು ಬಯಸಿದರೆ ಅವರಿಗೆ ಒಟ್ಟಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದಾಗ ಅವರು ಒತ್ತಾಯ ಪೂರಕವಾಗಿ ಕಾನೂನಿನ ನಿಯಮದ ಪ್ರಕಾರ 6 ತಿಂಗಳು ಒಟ್ಟಿಗೆ ಇರಬೇಕು ಎಂಬುದು ಇನ್ನೂ ಮುಂದೆ ಇರುವುದಿಲ್ಲ. ಒಪ್ಪಿಗೆ ಕಾನೂನು ನಿಯಮದ ಪ್ರಕಾರ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ಸುಪ್ರೀಂ ಪರಿಚ್ಛೇದ 142ರ ಅಡಿಯಲ್ಲಿ ಅಧಿಕಾರವನ್ನು ಹೊಂದಿದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನ ಪೀಠ ಹೇಳಿದೆ.

ವಿಚ್ಛೇದನ ಪಡೆಯುವ ಪತಿ ಮತ್ತು ಪತ್ನಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆ ಪ್ರತ್ಯೇಕವಾಗಿ ವಾಸಿಸಲು ಅವಕಾಶ ನೀಡಬಹುದು. ಪರಸ್ಪರ ಒಪ್ಪಿಗೆ ಇದ್ದರೆ, ವಿಚ್ಛೇದನಕ್ಕೆ ಕಡ್ಡಾಯವಾಗಿ 6 ​​ತಿಂಗಳ ಕಾಯುವ ಅವಶ್ಯಕತೆ ಇರುವುದಿಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13-ಬಿ ಅಡಿಯಲ್ಲಿ ಸೂಚಿಸಲಾದ ಕಡ್ಡಾಯ ಅವಧಿಗಾಗಿ ಕಾಯಲು ಕುಟುಂಬ ನ್ಯಾಯಾಲಯಗಳಿಗೆ ರೆಫರಲ್ ಮಾಡದೆ, ಇಬ್ಬರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಚೇದನೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಪ್ರಕರಣವನ್ನು ವಿಭಾಗೀಯ ಪೀಠವು ಜೂನ್ 29, 2016 ರಂದು ಐವರು ನ್ಯಾಯಾಧೀಶರ ಪೀಠಕ್ಕೆ ಉಲ್ಲೇಖಿಸಿತ್ತು.

ಪೀಠವು 2014ರಲ್ಲಿ ಶಿಲ್ಪಾ ಸೈಲೇಶ್ ಸಲ್ಲಿಸಿದ್ದ ಪ್ರಮುಖ ಅರ್ಜಿ ಸೇರಿದಂತೆ ಐದು ಅರ್ಜಿಗಳ ತೀರ್ಪನ್ನು 2022ರ ಸೆಪ್ಟೆಂಬರ್ 29ರಂದು ಕಾಯ್ದಿರಿಸಿತ್ತು. ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸುವಾಗ, ಸಾಮಾಜಿಕ ಬದಲಾವಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾನೂನು ತರುವುದು ಸುಲಭ, ಆದರೆ ಅದರೊಂದಿಗೆ ಸಮಾಜವನ್ನು ಬದಲಾಯಿಸಲು ಮನವೊಲಿಸುವುದು ಕಷ್ಟ ಎಂದು ಹೇಳಿತ್ತು.

ವಿಚ್ಚೇದನೆ ಪಡೆಯು ದಂಪತಿಗಳು ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ಆರು ತಿಂಗಳವರೆಗೂ ಜೊತೆಯಾಗಿಯೇ ಇರಬೇಕು ಎನ್ನುವುದು ಈ ಹಿಂದಿನ ಕಾನೂನಿನ ನಿಯಮವಾಗಿತ್ತು. ಇದು ಕಾನೂನಿನ ನಿಮಯದ ಜತೆಗೆ ಇಬ್ಬರ ನಡುವೆ ಒಂದು ಹೊಂದಾಣಿಕೆಯಾಗಿ ಜತೆಯಾಗಿ ಜೀವನ ನಡೆಸುತ್ತಾರೆ ಎನ್ನುವ ಕಾಳಜಿಗೆ ಈ ರೀತಿಯ ಕಾನೂನುಗಳನ್ನು ಮಾಡಿತ್ತು, ಆದರೆ ಈಗ ಒತ್ತಡದ ಆಧಾರದಲ್ಲಿ ಜೀವನ ನಡೆಸುವ ಅಗತ್ಯ ಇಲ್ಲ ಎನ್ನುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ನ ಪೀಠ ಈ ಆದೇಶವನ್ನು ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...