Homeಮುಖಪುಟಕೃಷಿ ಕಾನೂನುಗಳು ಅದಾನಿ ಪರವಾಗಿವೆಯೆಂದು ದಾಖಲೆ ಬಿಡುಗಡೆ ಮಾಡಿದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

ಕೃಷಿ ಕಾನೂನುಗಳು ಅದಾನಿ ಪರವಾಗಿವೆಯೆಂದು ದಾಖಲೆ ಬಿಡುಗಡೆ ಮಾಡಿದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

ಅದಾನಿ ಗ್ರೂಪ್ಸ್‌ನ ರಹಸ್ಯ ಕಾರ್ಯಾಚರಣೆಗಳ ಕುರಿತು ಅನ್ವೇಷಣೆ ಮಾಡಿದ ಇವರು ಈಗ ಐಸಿಯುನಲ್ಲಿದ್ದಾರೆ. ಇವರ ಮೇಲೆ ಕಬ್ಬಿಣದ ರಾಡ್ ಮತ್ತು ತೀಕ್ಷ್ಣವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ.

- Advertisement -
- Advertisement -

“ಅದಾನಿ ಕಂಪನಿಯು ನೂರಾರು ಎಕರೆ ಭೂಮಿಯನ್ನು ಖರೀದಿಸಿ, ಅಲ್ಲಿ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಕೋಲ್ಡ್‌ ಸ್ಟೋರೇಜ್ ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಿದೆ” ಎಂಬ ವಿಷಯವನ್ನು ಬಹಿರಂಗಪಡಿಸಿದ ‘IBN24’ನ ಪತ್ರಕರ್ತ ಆಕರ್ಷನ್ ಉಪ್ಪಲ್ ಮೇಲೆ ಹರಿಯಾಣದಲ್ಲಿ ಇತ್ತೀಚೆಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಹೊಸ ಕೃಷಿ ಮಸೂದೆಗಳನ್ನು ಅಂಗೀಕರಿಸುವ ಮೊದಲು ನೂರಾರು ಎಕರೆ ಭೂಮಿಯನ್ನು ಖರೀದಿಸಿರುವ ಅದಾನಿ ಗುಂಪಿನ ರಹಸ್ಯ ಮಾರ್ಗಗಳನ್ನು ಪತ್ರಕರ್ತ ಆಕರ್ಷನ್ ಉಪ್ಪಲ್ ಬಹಿರಂಗಪಡಿಸಿದ್ದರು. ಕೇಂದ್ರ ಸರ್ಕಾರ ಈಗ ಜಾರಿಗೆ ತಂದಿರುವ ಕೃಷಿ ಕಾನೂನುಗಳು ನಿಜಕ್ಕೂ ಅಂಬಾನಿ-ಅದಾನಿಯ ಪರವಾಗಿವೆ ಎಂಬುದಕ್ಕೆ ಇದು ಬಲವಾದ ಸಾಕ್ಷ್ಯವಾಗಿತ್ತು. ಈ ಸಾಕ್ಷ್ಯವನ್ನು ಬಹಿರಂಗಪಡಿಸಿದ ಪತ್ರಕರ್ತನ ಮೇಲೆ ಹರಿಯಾಣದ ಕರ್ನಾಲ್‌ನಲ್ಲಿ ಅಪರಿಚಿತರು ಹಲ್ಲೆ ನಡೆಸಿದ್ದು, ಪ್ರಸ್ತುತ ಪತ್ರಕರ್ತರ ಸ್ಥಿತಿ ಗಂಭೀರವಾಗಿದೆ ಎಂದು ಇನ್‌ಫೀಡ್ ವರದಿ ಮಾಡಿದೆ.

ಇದನ್ನೂ ಓದಿ: ರೈತ ವಿರೋಧಿ ಶಾಸನಗಳು ಮತ್ತು ಬಿಜೆಪಿಯ ಹತ್ತು ಸುಳ್ಳುಗಳು: ಶಿವಸುಂದರ್

ಅದಾನಿ ಗ್ರೂಪ್ಸ್‌ನ ರಹಸ್ಯ ಕಾರ್ಯಾಚರಣೆಗಳ ಕುರಿತು ಅನ್ವೇಷಣೆ ಮಾಡಿದ ಇವರು ಈಗ ಐಸಿಯುನಲ್ಲಿದ್ದಾರೆ. ಇವರ ಮೇಲೆ ಕಬ್ಬಿಣದ ರಾಡ್ ಮತ್ತು ತೀಕ್ಷ್ಣವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ಇದರಿಂದ ತಲೆಗೆ ತೀವ್ರವಾದ ಪೆಟ್ಟಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, “ಪತ್ರಕರ್ತನನ್ನು ಕೊಲ್ಲುವ ಸಲುವಾಗಿ ಕಾಲುವೆಗೆ ಎಸೆಯಲು ಪ್ರಯತ್ನಿಸಿದರು. ಆದರೆ ಜನಸಮೂಹ ಸೇರುತ್ತಿದ್ದಂತೆ ಹಲ್ಲೆಕೋರರು ಓಡಿಹೋದರು” ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ್ದ ಟ್ರೂಡೊ: ಭಾರತ-ಕೆನಡಾ ರಾಜಕೀಯ ಸಂಬಂಧದಲ್ಲಿ ಬಿರುಕು!

ಸುರೇಖ ಗುಪ್ತ ಎಂಬುವವರು ಟ್ವೀಟ್ ಮಾಡಿ, “ಹರಿಯಾಣದ ಕರ್ನಾಲ್‌ನ ಪತ್ರಕರ್ತರಾದ ಆಕರ್ಷ್‌ ಉಪ್ಪಲ್ ಎಂಬುವವರು 2 ದಿನಗಳ ಹಿಂದೆ, ಅದಾನಿ ಗ್ರೂಪ್ 100 ಎಕರೆ ಭೂಮಿಯನ್ನು ಖರೀದಿಸಿದ್ದು, ಇಲ್ಲಿ 4 ಕೃಷಿ ಉತ್ಪನ್ನಗಳ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ. ಅದಾನಿಯ ಸೈಟ್‌ವರೆಗೆ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿದ್ದರು. ಈಗ ಅವರು ಕ್ರೂರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

 

ಇದನ್ನೂ ಓದಿ: ರೈತ ಹೋರಾಟವನ್ನು ಹತ್ತಿಕ್ಕಲು ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷ ಹರಡಲು ಪ್ರಯತ್ನ – ಸುಖ್‌ಬೀರ್ ಸಿಂಗ್

ಈ ಕೃಷಿ ಕಾನೂನುಗಳು ನೇರವಾಗಿ ಕಾರ್ಪೊರೇಟ್‌ಗಳಿಗೆ ಸಹಕಾರಿಯಾಗಿವೆ ಎಂಬುದನ್ನು ದೇಶದಾದ್ಯಂತ ಇರುವ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸುತ್ತಲೇ ಇತ್ತು. ಜೊತೆಗೆ ಇದನ್ನು ವಿರೋಧ ಪಕ್ಷಗಳ ರಾಜಕೀಯ ಕುತಂತ್ರ ಎಂದು ಬಿಂಬಿಸುತ್ತಿದೆ.


ಇದನ್ನೂ ಓದಿ: ನಮಗೆ ಜಿಯೋ ಬೇಡ, BSNLಗೆ ಪೋರ್ಟ್ ಆಗಲು 4G ಸೇವೆ ಕೊಡಿ: KVS ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...