Homeಕರ್ನಾಟಕಬ್ರಾಹ್ಮಣ ವಿರೋಧಿ ಪಠ್ಯಪುಸ್ತಕ ವಿವಾದ: ಸಿಎಂ ವಿರುದ್ದ ಆಕ್ರೋಶ

ಬ್ರಾಹ್ಮಣ ವಿರೋಧಿ ಪಠ್ಯಪುಸ್ತಕ ವಿವಾದ: ಸಿಎಂ ವಿರುದ್ದ ಆಕ್ರೋಶ

ಕೆಲವು ಮೌಢ್ಯಾಚರಣೆಗಳನ್ನೆ ಪರಂಪರೆ ಅಂದರೆ ಹೇಗೆ?? ಶಾಲಾ ಪಠ್ಯ ಪುಸ್ತಕದಿಂದ ಸರ್ಕಾರಕ್ಕೆ ಹೇಳಿ ಇತಿಹಾಸವನ್ನು ತಿರುಚಿದರೆ ಇತಿಹಾಸ ಬದಲಾಗಲ್ಲ.

- Advertisement -
- Advertisement -

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ನಿಯೋಗ ಸಲ್ಲಿಸಿದ ಮನವಿ ಹಿನ್ನಲೆಯಲ್ಲಿ, ’ಆರನೇ ಮತ್ತು ಒಂಬತ್ತನೇ ತರಗತಿಯ ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಅಂಶಗಳಿದ್ದರೆ ಪರಿಶೀಲಿಸಿ, ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ಎದ್ದಿದೆ.

ನಿನ್ನೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ನಿಯೋಗವು, “ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ತನ್ನ ಮನವಿಯಲ್ಲಿ ದೂರಿಕೊಂಡಿತ್ತು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಯಡಿಯೂರಪ್ಪ ಏನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ: ಕ್ರಮಕ್ಕೆ ಸೂಚಿಸಿದ ಮುಖ್ಯಮಂತ್ರಿ 

ಅಶ್ವಥ್ ಪುಟ್ಟಸ್ವಾಮಿ ಅವರು, “ಬಾಬಾಸಾಹೇಬ್‌ ಅಂಬೇಡ್ಕರರಿಗೆ ಸಾರ್ವಜನಿಕ ಬಾವಿಯಲ್ಲಿ ನೀರು ಕುಡಿಯಲು ಬಿಡಲಿಲ್ಲ ಅಂತಲೂ, ಬಾಬಾಸಾಹೇಬರ ಜಾತಿ ಕೇಳಿದ ಗಾಡಿಯವನೊಬ್ಬ ಆ ಕ್ಷಣವೇ ಗಾಡಿಯಿಂದ ಕೆಳಗಿಳಿಸಿದ ಅಂತಲೂ ಪಠ್ಯಪುಸ್ತಕದಲ್ಲೇ ಓದಿದ್ದೆವು. ಆಗ ಯಾರೂ ಅವಹೇಳನಕಾರಿ ಅಂತ ಹೇಳಿರಲಿಲ್ಲ. ಈಗ ಯಾರೋ ಪ್ರಾಣಾಹಾರಿಗಳಿಗೆ ಪಠ್ಯದಲ್ಲಿರುವುದು ಅವಹೇಳನವಾಗಿದೆಯಂತೆ!” ಎಂದು ಹೇಳಿದ್ದಾರೆ.

ಸಂಕೇತ್ ಕರಾವಳಿ, “ಕೆಲವು ಮೌಢ್ಯಾಚರಣೆಗಳನ್ನೆ ಪರಂಪರೆ ಅಂದರೆ ಹೇಗೆ?? ಶಾಲಾ ಪಠ್ಯ ಪುಸ್ತಕದಿಂದ ಸರ್ಕಾರಕ್ಕೆ ಹೇಳಿ ಇತಿಹಾಸವನ್ನು ತಿರುಚಿದರೆ ಇತಿಹಾಸ ಬದಲಾಗಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಬ್ರಾಹ್ಮಣರ ಬಗ್ಗೆ ಸದನಕ್ಕೆ ಪ್ರಶ್ನೆ ಕೇಳಿ ತಮ್ಮದೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ ಶಾಸಕ

ಮಲ್ಲೇಶ್ ಎಲ್ ಅವರು, ಪಠ್ಯಪುಸ್ತಕದಲ್ಲಿ ಇರುವುದು ಕಟು ಸತ್ಯ. ಈಗಲೂ ಹೋಮ ಹವನ ಮಾಡಿದಾಗ ತುಪ್ಪ ಮತ್ತು ಕೆಲವು ಧಾನ್ಯಗಳನ್ನು ಅಗ್ನಿಗೆ ಅರ್ಪಿಸಲಾಗಿತ್ತದೆ, ಹಾಗೂ ಇದು ದುಬಾರಿ ಕೂಡ” ಎಂದು ಹೇಳಿದ್ದಾರೆ.

ಕವಿ ಚಿದಂಬರ ನರೇಂದ್ರ ಅವರು ನಟ ಜಗ್ಗೇಶ್ ಅವರು ಸುದ್ದಿಗೆ ಮಾಡಿದ ಪ್ರತಿಕ್ರಿಯೆನ್ನು ನಕಲು ಮಾಡಿ, “ಹೀಗೆ ಯಾರು ಸ್ಟೇಟಸ್ ಹಾಕಬಹುದು ನಿಮ್ಮ ಎಕ್ಸ್‌ಪೀರಿಯೆನ್ಸ್‌‌‌ಲಿ, ಹೆಸರು ಹಾಕದೆ ಕ್ಲೂ ಮೂಲಕ ಉತ್ತರಿಸಿ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆಯ ಹರಕುಬಾಯಿ, ಜಗ್ಗೇಶ್ ತಾತ್ಕಾಲಿಕವಾಗಿ ಬಿತ್ತು ಬ್ರೇಕ್

ನಟ ಜಗ್ಗೇಶ್ ಟ್ವಿಟ್ಟರ್‌‌ನಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬರೆದು ನಗೆಪಾಟಲಿಗೀಡಾಗಿದ್ದರು.

ಸರೋವರ್‌ ಬೆಂಕಿಕೆರೆ ಅವರು, ಮನುಸ್ಮೃತಿಯ ಅಧ್ಯಾಯದ ಒಂದು ಶ್ಲೋಕವಿರುವ ಚಿತ್ರವನ್ನು ಹಾಕಿ, “ಯಡಿಯೂರಪ್ಪನವರು ಸಮರ್ಥಿಸಿಕೊಳ್ಳುತ್ತಿರುವುದು ಏನನ್ನು?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೋದಿಯನ್ನೂ ಸೋಲಿಸಿದ ಜಡೆಮಾಯಸಂದ್ರ ಜಗ್ಗಣ್ಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...