Homeಮುಖಪುಟಕವಾಟವಿರುವ ಎನ್-95 ಮಾಸ್ಕ್‌ಗಳ ಬಳಕೆ ಅಪಾಯಕಾರಿ: ಸರ್ಕಾರದ ಎಚ್ಚರಿಕೆ

ಕವಾಟವಿರುವ ಎನ್-95 ಮಾಸ್ಕ್‌ಗಳ ಬಳಕೆ ಅಪಾಯಕಾರಿ: ಸರ್ಕಾರದ ಎಚ್ಚರಿಕೆ

ಮಾಸ್ಕ್ ಧರಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಪ್ರತಿದಿನ ಬಿಸಿನೀರಿನಲ್ಲಿ ಉಪ್ಪಿನೊಂದಿಗೆ ಮಾಸ್ಕ್ ತೊಳೆದು ಒಣಗಿಸಿ ಬಳಸಬೇಕು, ಮಾಸ್ಕ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದೆ.

- Advertisement -
- Advertisement -

ಕವಾಟವಿರುವ ಎನ್-95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧ ಎಚ್ಚರಿಕೆ ನೀಡುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಎಂದು ಕೇಂದ್ರ ಹೇಳಿದೆ.

ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ಗಳ ಬಳಕೆಯಲ್ಲಿ ಲೋಪವಿರುವುದು ಕಂಡುಬಂದಿದೆ. ವಿಶೇಷವಾಗಿ ಉಸಿರಾಟದ ಕವಾಟವಿರುವ ಮಾಸ್ಕ್‌ಗಳ ಬಳಕೆ ಅಪಾಯಕಾರಿ ಎಂದು ತಿಳಿಸಿದೆ.

“ಉಸಿರಾಟದ ಕವಾಟವಿರುವ N-95 ಮಾಸ್ಕ್‌ಗಳ ಬಳಕೆಯು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳಿಗೆ ಹಾನಿಕಾರಕವಾಗಿದೆ ಎಂದು ತಿಳಿಸಲು ಬಯಸುತ್ತೇವೆ. ಏಕೆಂದರೆ ಈ ಮಾಸ್ಕ್‌ಗಳಿಂದ ವೈರಸ್ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಮುಖ/ಬಾಯಿಯನ್ನು ಮುಚ್ಚುವ ಮಾಸ್ಕ್‌ಗಳನ್ನು ಬಳಸುವಂತೆ ಮತ್ತು ಎನ್-95 ಮಾಸ್ಕ್‌ಗಳ ಅನುಚಿತ ಬಳಕೆಯನ್ನು ತಡೆಯಲು ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡುವಂತೆ ನಾನು ವಿನಂತಿಸುತ್ತೇನೆ” ಎಂದು ಡಿಜಿಹೆಚ್ಎಸ್ ರಾಜೀವ್ ಗರ್ಗ್ ಪತ್ರದಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿಯೇ ತಯಾರಿಸಿದ ಮಾಸ್ಕ್‌ಗಳನ್ನು ಬಳಸಿ ಎಂದು ತನ್ನ ವೆಬ್‌ಸೈಟ್‌ನಲ್ಲಿ ಅದು ವಿವರಣೆ ನೀಡಿದೆ. ಮಾಸ್ಕ್ ಧರಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಪ್ರತಿದಿನ ಬಿಸಿನೀರಿನಲ್ಲಿ ಉಪ್ಪಿನೊಂದಿಗೆ ಮಾಸ್ಕ್ ತೊಳೆದು ಒಣಗಿಸಿ ಬಳಸಬೇಕು, ಮಾಸ್ಕ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದೆ.

ಭಾರತಕ್ಕೆ ಕೊರೊನಾ ವೈರಸ್ ಪ್ರವೇಶಿಸಿ ಆರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಅಲ್ಲದೇ ಜನರು ಮಾಸ್ಕ್ ಬಳಸಲು ಆರಂಭಿಸಿ ನಾಲ್ಕು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಇಷ್ಟು ದಿನ ಎನ್‌-95 ಮಾಸ್ಕ್ ಸುರಕ್ಷಿತ ಎಂದು ಹೇಳುತ್ತಿದ್ದ ಸರ್ಕಾರ ಈಗ ಅವು ಅಪಾಯಕಾರಿ ಎಂದು ಹೇಳಿದರೆ ಏನರ್ಥ? ಸರ್ಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿವೆಯೇ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ.


ಇದನ್ನೂ ಓದಿ: ಕೊರೊನಾದಿಂದ ಒಂದೂ ಸಾವು ಕಾಣದ ಭಾರತದ ಅದೃಷ್ಠಶಾಲಿ ರಾಜ್ಯಗಳಿವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...