Homeಮುಖಪುಟಕೊನೆಗೂ ಆಯ್ತು ಡಿ.ಕೆ ಶಿವಕುಮಾರ್ ಬಂಧನ

ಕೊನೆಗೂ ಆಯ್ತು ಡಿ.ಕೆ ಶಿವಕುಮಾರ್ ಬಂಧನ

- Advertisement -
- Advertisement -

ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ ಶಿವಕುಮಾರ್ ರವರನ್ನು ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ಕೊನೆಗೂ ದೆಹಲಿಯಲ್ಲಿ ಬಂಧಿಸಿದ್ದಾರೆ. ದೆಹಲಿಯ ಅವರ ಮನೆಯಲ್ಲಿ ದೊರೆತ 8.60 ಕೋಟಿ ಅನುಮಾನಸ್ಪದ ಹಣದ ವಿಚಾರಕ್ಕೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಅವರ ವಿಚಾರಣೆಯು ಬಂಧನದಲ್ಲಿ ಕೊನೆಗೊಂಡಿದೆ.

ಪಿ.ಎಂ.ಎಲ್.ಎ (ಪ್ರವೆಂಕ್ಷನ್ ಆಪ್ ಮನಿ ಲಾಂಡರಿಂಗ್ ಆಕ್ಟ್) ಅಡಿಯಲ್ಲಿ ಡಿ.ಕೆ ಶಿವಕುಮಾರ್ ರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರು ಮನೆಯಲ್ಲಿ ಹಿರಿಯರ ಪೂಜೆ ಮಾಡಬೇಕು ಬಿಡಿ ಎಂದರೂ ಕೇಳದ ಇ.ಡಿ ಅಧಿಕಾರಿಗಳು ಅವರ ಕಣ್ಣಲ್ಲಿ ನೀರುಬರುವಂತೆ ಮಾಡಿದ್ದರು. ಇಂದು ಮಧ್ಯಾಹ್ನ ಊಟಕ್ಕೆ ಬಿಡದಂತೆ ವಿಚಾರಣೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ.

ದೆಹಲಿಯ ಮನೆಯಲ್ಲಿ ಸಿಕ್ಕಿರುವ ಹಣ ನಮ್ಮದೆ. ಇದರ ಕುರಿತು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ದನಿದ್ದೇನೆ. ಆದರ ದೊಡ್ಡ ಷಡ್ಯಂತ್ರ ಮಾಡಿ, ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ಈ ರೀತಿಯ ದಾಳಿ ಮಾಡಲಾಗುತ್ತಿದೆ ಎಂದು ಡಿ.ಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆತನ್ನಿ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

0
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ...