Homeಕರ್ನಾಟಕದಕ್ಷಿಣ ಕನ್ನಡ: ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ; 2 ಪ್ರಕರಣ ದಾಖಲು

ದಕ್ಷಿಣ ಕನ್ನಡ: ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ; 2 ಪ್ರಕರಣ ದಾಖಲು

- Advertisement -
- Advertisement -

ಬೆಡ್‌ಶೀಟ್‌ ಮಾರಾಟ ಮಾಡಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಬಳಿ ದೋಲ್ಪಾಡಿಗೆ ತೆರಳಿದ್ದ ಮುಸ್ಲಿಂ ಯುವಕರಿಬ್ಬರಿಗೆ ಮಾರಣಾಂತಿಕವಾಗಿ ‘ಗುಂಪು ಹಲ್ಲೆ’ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. ಹಲ್ಲೆ ನಡೆಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ತೀವ್ರ ಆಕ್ರೊಶ ವ್ಯಕ್ತವಾಗಿದೆ.

ವ್ಯಾಪಾರಿಗಳು ಬೆಡ್‌ಶೀಟ್‌ಗಳನ್ನು ಮಾರಾಟ ಮಾಡುವ ವೇಳೆ ಬೆಲೆಯ ವಿಚಾರದಲ್ಲಿ ಕೆಲವು ಮಹಿಳೆಯರೊಂದಿಗೆ ಚೌಕಾಶಿ ನಡೆಸಿ, ಅಲ್ಲಿಂದ ಹೊರಟ ನಂತರ ಗುಂಪೊಂದು ಅವರನ್ನು ಅಡ್ಡಗಟ್ಟಿ ಥಳಿಸಿದೆ. ಘಟನೆಯಲ್ಲಿ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗಾಯಗೊಂಡವರನ್ನು ರಮೀಜುದ್ದೀನ್ (25) ಮತ್ತು ರಫೀಕ್ (30) ಎಂದು ಗುರುತಿಸಲಾಗಿದ್ದು, ಪೊಳಲಿ ಬಳಿಯ ಅಡ್ಡೂರು ನಿವಾಸಿಗಳು ಎಂದು ವರದಿಯಗಿದೆ. ಸಂತ್ರಸ್ತ ಯುವಕರಿಬ್ಬರು ಸಾಮಾನ್ಯವಾಗಿ ವ್ಯಾಪಾರಕ್ಕೆಂದು ಹಳ್ಳಿ ಹಳ್ಳಿಗೆ ಹೋಗುತ್ತಿದ್ದರು ಎಂದು ಸಂತ್ರಸ್ತರ ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯಾ: ಪತಿ ತನ್ನ ಪತ್ನಿಗೆ ‘ಮುತ್ತು’ ಕೊಟ್ಟಿದ್ದಕ್ಕೆ ಗುಂಪು ಹಲ್ಲೆ!

ಯುವಕರಿಬ್ಬರು ಗುಂಪು ಹಲ್ಲೆಗೆ ಒಳಗಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಕಟುಂಬಸ್ಥರು ಹೇಳಿದ್ದು, ಅದರ ಬದಲಾಗಿ ಮಹಿಳೆಯರು ನೀಡಿದ ಸುಳ್ಳು ದೂರಿನ ಮೇರೆಗೆ ಸಂತ್ರಸ್ತರ ವಿರುದ್ಧವೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾಗಿ ವರದಿಯಾಗಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,“ಇದು ಒಂದಕ್ಕೊಂದು ಸಂಬಂಧ ಹೊಂದಿದೆ ಘಟನೆಯಾಗಿದೆ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಇಬ್ಬರು ಕಾರ್ಪೆಟ್‌ ವ್ಯಾಪಾರಿಗಳು ಎಸ್‌ಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ಮನೆ ಪ್ರವೇಶಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಇದರಂದಾಗಿ ಆರೋಪಿಗಳಿಬ್ಬರು ತಮ್ಮ ಆಲ್ಟೋ ಕಾರಿನಿಂದ ಅಲ್ಲಿಂದ ಓಡಿ ಹೋಗಿದ್ದಾರೆ” ಎಂದು ಹೇಳಿದರು.

“ಈ ವೇಳೆ ಅವರನ್ನು ಗುಂಪೊಂದು ಅಟ್ಟಿಸಿಕೊಂಡು ಹೋಗಿ, ಅವರ ಮೇಲೆ ಹಲ್ಲೆ ನಡೆಸಿದೆ” ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮಧ್ಯಪ್ರದೇಶ | ಧಾರ್ಮಿಕ ಗುರುತಿನ ಆಧಾರದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಗುಂಪು ಹಲ್ಲೆ: ಆರೋಪ

“ಈ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣವನ್ನು ಮಹಿಳೆಯೊಬ್ಬರು ದಾಖಲಿಸಿದ್ದು, ದಲಿತ ದೌರ್ಜನ್ಯ ತಡೆ ಮತ್ತು ಲೈಂಗಿಕ ಕಿರುಕುಳದ ಅಡಿಯಲ್ಲಿ ದಾಖಲಾಗಿದ್ದು, ಮತ್ತೊಂದು ಪ್ರಕರಣ ಯುವಕರ ದೂರಿನಂತೆ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಗುರುತಿಸಲಾಗುತ್ತಿದೆ. ದಾಳಿಗೊಳಗಾದ ಯುವಕರಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಎಸ್‌ಪಿ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read