Homeಕರ್ನಾಟಕಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ದಲಿತ ನಾಯಕ ನೇಮಕ

ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ದಲಿತ ನಾಯಕ ನೇಮಕ

- Advertisement -
- Advertisement -

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಕೆಲವು ರಾಜಕೀಯ ನೆಲೆಯನ್ನು ಉಳಿಸಲು ಕಾಂಗ್ರೆಸ್ ಮುಂದಾಗಿದೆ. ಉತ್ತರ ಪ್ರದೇಶದ ಆರು ವಲಯ ಮುಖ್ಯಸ್ಥರ ನೇಮಕದ ಜೊತೆಗೆ ದಲಿತ ನಾಯಕ ಬ್ರಿಜ್‌ಲಾಲ್ ಖಬ್ರಿ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ದಲಿತ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದಲ್ಲಿ ಪಕ್ಷದ ನೇತೃತ್ವ ವಹಿಸುವ ಸಾಧ್ಯತೆ ಹೆಚ್ಚಿದೆ. ಆ ಮೂಲಕ ಮೇಲ್ಜಾತಿ ಪಕ್ಷ ಎಂಬ ತನ್ನ ಇಮೇಜ್ ಅನ್ನು ಕಳಚಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ದಿನೇ ದಿನೇ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿರುವ ಕಾಂಗ್ರೆಸ್ ದಲಿತ ಮತಗಳ ಮೇಲೆ ತನ್ನ ದೃಷ್ಟಿ ಇರಿಸಿದೆ.

ಚುನಾವಣೆಗೂ ಮುನ್ನ ದಲಿತ ನಾಯಕ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಪಂಜಾಬ್‌ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಚುನಾವಣೆ ಹೊಸ್ತಿಲಲ್ಲಿನ ಈ ಪ್ರಯೋಗ ವಿಫಲವಾಗಿತ್ತು. ಅಮರಿಂದರ್ ಸಿಂಗ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕೆಟ್ಟ ಆಡಳಿತವನ್ನು ನೀಡಿತ್ತು. ಇದು ದೊಡ್ಡ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿತು. ಚುನಾವಣೆಗೆ ಕೇವಲ ಮೂರು ತಿಂಗಳ ಮೊದಲು ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ದಲಿತರನ್ನು ಮೂರ್ಖರನ್ನಾಗಿಸುವ ಯೋಜನೆಯಂತೆ ಕಂಡಿತು. ಆದರೆ ಇದೆಲ್ಲದರಿಂದ ಎಚ್ಚೆತ್ತುಕೊಂಡಂತೆ ಕಾಣುತ್ತಿರುವ ಕಾಂಗ್ರೆಸ್, ದಲಿತ ವೋಟ್‌ಬ್ಯಾಂಕ್‌ ಮೇಲೆ ದೃಷ್ಟಿ ಹಾಯಿಸಿರುವುದು ಸ್ಪಷ್ಟವಾಗುತ್ತಿದೆ.

ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮತ್ತು ಖಬ್ರಿ ಅವರನ್ನು ದೇಶದ ಅತಿದೊಡ್ಡ ರಾಜ್ಯದ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವ ಮೂಲಕ ಸಮಾಜದ ದುರ್ಬಲ ವರ್ಗಗಳನ್ನು ಧ್ರುವೀಕರಣ ಮಾಡುವ ತನ್ನ ಯೋಜನೆಯನ್ನು ರೂಪಿಸಿದೆ.

ಖಬ್ರಿ ಮತ್ತು ಅವರ ಪತ್ನಿ ಊರ್ಮಿಳಾ ಸೋಂಕರ್ ಇಬ್ಬರೂ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ತೀವ್ರ ಧ್ರುವೀಕರಣದ ಸ್ಪರ್ಧೆಯಲ್ಲಿ ಕಾಂಗ್ರೆಸ್ ಈ ಸೋಲುಗಳನ್ನು ಲೆಕ್ಕ ಹಾಕಿಲ್ಲ ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತಿವೆ.

ನರೇಂದ್ರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಮಾಯಾವತಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಇರುವುದರಿಂದ ದಲಿತ ಮತಗಳನ್ನು ಕ್ರೂಢೀಕರಿಸಿದರೆ ಕಾಂಗ್ರೆಸ್‌ ಬಲವಾಗಬಹುದು ಎಂಬ ಲೆಕ್ಕಾಚಾರಗಳಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಎಸ್‌ಪಿಯ ಹೆಚ್ಚಿನ ಮತಗಳು ಒಲ್ಲದ ಮನಸ್ಸಿನಿಂದ ಬಿಜೆಪಿಗೆ ಹೋಗಿವೆ ಎಂದು ಕಾಂಗ್ರೆಸ್‌ ನಂಬಿದೆ.

ಬಿಜೆಪಿಯ ಮೇಲಿನ ಅಸಮಾಧಾನದಿಂದ ದಲಿತರು ಕಾಂಗ್ರೆಸ್‌ನತ್ತ ನೋಡುತ್ತಿದ್ದಾರೆ ಎಂದು ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರು ಆಲೋಚಿಸಿದ್ದಾರೆ.

2016ರಲ್ಲಿ ಕಾಂಗ್ರೆಸ್ ಸೇರಿದ ಖಬ್ರಿ ಅವರು ಕಾನ್ಶಿರಾಮ್ ಮತ್ತು ಮಾಯಾವತಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಸಂಘಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಖಬ್ರಿಯವರಿಗೆ ಆರು ವಲಯಗಳ ಮುಖ್ಯಸ್ಥರಾದ ನಸೀಮುದ್ದೀನ್ ಸಿದ್ದಿಕಿ, ಅಜಯ್ ರೈ, ವೀರೇಂದ್ರ ಚೌಧರಿ, ನಕುಲ್ ದುಬೆ, ಅನಿಲ್ ಯಾದವ್ ಮತ್ತು ಯೋಗೇಶ್ ದೀಕ್ಷಿತ್ ಬಲ ತುಂಬಲಿದ್ದಾರೆ. ಸಿದ್ದಿಕಿ ಮತ್ತು ದುಬೆ ಕೂಡ ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ನಾಯಕರಾಗಿದ್ದಾರೆ.

ಇದನ್ನೂ ಓದಿರಿ: 2019ರಲ್ಲಿ ಉದ್ಘಾಟಿಸಿದ್ದ ‘ಅಹಮದಾಬಾದ್ ಮೆಟ್ರೋ ರೈಲು ಮೊದಲ ಹಂತ’ವನ್ನೇ ಮತ್ತೆ ಉದ್ಘಾಟಿಸಿದ ಮೋದಿ! ವಾಸ್ತವವೇನು?

ವಲಯ ಮುಖ್ಯಸ್ಥರು ತಮ್ಮ ಪ್ರದೇಶಗಳಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ವಲಯದ ಮುಖ್ಯಸ್ಥರ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರಗಳು ಮುಖ್ಯವಾಗಿವೆ. ದಲಿತ ನಾಯಕರಾದ ಖಬ್ರಿ ಅವರು ರಾಜ್ಯ ಮುಖ್ಯಸ್ಥರಾಗಿ ಕೆಲಸ ಮಾಡಿದರೆ, ಫರೆಂಡಾ ಶಾಸಕ ವೀರೇಂದ್ರ ಚೌಧರಿ ಅವರು ಪೂರ್ವಾಂಚಲ ಜಿಲ್ಲೆಗಳಾದ ಫೈಜಾಬಾದ್, ಅಂಬೇಡ್ಕರ್ ನಗರ, ಬಸ್ತಿ, ಮಹಾರಾಜ್‌ಗಂಜ್, ಸಿದ್ಧಾರ್ಥನಗರ ಮತ್ತು ಕುಶಿನಗರದ ಉಸ್ತುವಾರಿ ವಹಿಸಲಿದ್ದಾರೆ.

ಭೂಮಿಹಾರ್ ಆಗಿರುವ ಅಜಯ್ ರೈ ಅವರು ಪ್ರಯಾಗವನ್ನು ನೋಡಿಕೊಳ್ಳುತ್ತಾರೆ. ನಕುಲ್ ದುಬೆ ಅವಧ್‌ನ ಉಸ್ತುವಾರಿ ವಹಿಸಲಿದ್ದಾರೆ. ಯೋಗೇಶ್ ದೀಕ್ಷಿತ್ ಅವರಿಗೆ ಬುಂದೇಲ್‌ಖಂಡ್ ಜವಾಬ್ದಾರಿ ನೀಡಲಾಗಿದೆ. ಪಶ್ಚಿಮ ಉತ್ತರ ಪ್ರದೇಶವನ್ನು ಸಿದ್ದಿಕಿ ನೋಡಿಕೊಳ್ಳಲಿದ್ದಾರೆ. ಅನಿಲ್ ಯಾದವ್ ಅವರು ಯಾದವ್ ಪ್ರಾಬಲ್ಯ ಹೊಂದಿರುವ ಬ್ರಜ್‌ನಲ್ಲಿ ಕೆಲಸ ಮಾಡಲಿದ್ದಾರೆ.

ಕೃಪೆ: ಟೆಲಿಗ್ರಾಫ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...