Homeದಲಿತ್ ಫೈಲ್ಸ್ಊನಾ ಪ್ರಕರಣದ ಆರೋಪಿಗಳಿಂದ ದಲಿತ ಸಂತ್ರಸ್ತರಿಗೆ ಜೀವ ಬೆದರಿಕೆ; ಎಫ್‌ಐಆರ್‌

ಊನಾ ಪ್ರಕರಣದ ಆರೋಪಿಗಳಿಂದ ದಲಿತ ಸಂತ್ರಸ್ತರಿಗೆ ಜೀವ ಬೆದರಿಕೆ; ಎಫ್‌ಐಆರ್‌

ಗುಜರಾತ್‌ನ ಊನಾದಲ್ಲಿ ದಲಿತರನ್ನು ಬೆತ್ತಲು ಮಾಡಿ ಭೀಕರವಾಗಿ ಥಳಿಸಿದ್ದ ನಕಲಿ ಗೋರಕ್ಷಕರಿಗೆ ಜುಲೈನಲ್ಲಿ ಜಾಮೀನು ಸಿಕ್ಕಿತ್ತು.

- Advertisement -
- Advertisement -

ಬೆತ್ತಲೆ ಮಾಡಿ ಭೀಕರವಾಗಿ ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಸಂತ್ರಸ್ತ ದಲಿತರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಊನಾ ಥಳಿತ ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

2016ರಲ್ಲಿ ಗುಜರಾತ್‌ನಲ್ಲಿ ಬೃಹತ್‌ ಹೋರಾಟಗಳಿಗೆ ಕಾರಣವಾಗಿದ್ದ ಊನಾ ಪ್ರಕರಣದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕ ತಮ್ಮ ಕ್ರಿಮಿನಲ್‌ ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಆರೋಪಿಗಳಾದ ಪ್ರಮೋದಗಿರಿ ಗೋಸ್ವಾಮಿ, ಬಲವಂತ ಗೋಸ್ವಾಮಿ ಮತ್ತು ಒಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಊನಾದಲ್ಲಿ ಭೀಕರ ಥಳಿತಕ್ಕೆ ಒಳಗಾದವರಲ್ಲಿ ಒಬ್ಬರಾದ ವಶ್ರಾಮ್ ಸರ್ವಯ್ಯ ಮತ್ತು ಅವರ ತಂದೆ ಬಾಲುಭಾಯಿ ಅವರು ನೀಡಿದ ದೂರಿನ ಮೇರೆಗೆ ಊನಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೇಲಿನ ದೌರ್ಜನ್ಯ ತಡೆ ಕಾಯಿದೆ 1989ರ ಸೆಕ್ಷನ್‌ಗಳ ಜೊತೆಗೆ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 114 (ಅಪರಾಧ ನಡೆದಾಗ ಉಪಸ್ಥಿತರಿರುವವರು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

“2016ರಲ್ಲಿ ಈ ಆರೋಪಿಗಳಿಂದ ಸಾರ್ವಜನಿಕವಾಗಿ ಥಳಿಸಲ್ಪಟ್ಟವರಲ್ಲಿ ನಾನು ಮತ್ತು ತನ್ನ ಸೋದರಸಂಬಂಧಿ ಅಶೋಕ್ ಇದ್ದೇವೆ. ನಾವಿಬ್ಬರೂ ಊನಾ ಪಟ್ಟಣದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಮೋದ್, ಬಲ್ವಂತ್ ಮತ್ತು ಅಪರಿಚಿತ ವ್ಯಕ್ತಿಯೊಬ್ಬರು ಅಡ್ಡಗಟ್ಟಿದ್ದರು” ಎಂದು ವಶ್ರಾಮ್ ಅವರು ದೂರಿನಲ್ಲಿ ಉಲ್ರೆಲೇಖಿಸಿದ್ದಾರೆ. “ಈ ಮೂವರೂ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಂದು ಹೇಗೆ ಹೊಡೆದಿದ್ದೆವು ಎಂಬುದನ್ನು ನೆಪಿಸಿಕೊಳ್ಳಿ ಎಂದು ಸರ್ವಯ್ಯನವರಿಗೆ ಈ ಆರೋಪಿಗಳು ಹೆದರಿಸಿದ್ದಾರೆ” ಎಂಬುದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಾಲ್ವರು ಪ್ರಮುಖ ಆರೋಪಿಗಳಾದ ರಮೇಶ್ ಜಾದವ್, ಪ್ರಮೋದಗಿರಿ ಗೋಸ್ವಾಮಿ, ಬಲವಂತಗಿರಿ ಗೋಸ್ವಾಮಿ ಮತ್ತು ರಾಕೇಶ್ ಜೋಶಿ ಅವರಿಗೆ ಜುಲೈನಲ್ಲಿ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವುದನ್ನು ಹೊರತುಪಡಿಸಿ ಗಿರ್ ಸೋಮನಾಥ್ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಗಳನ್ನು ಹೇರಿ ಜಾಮೀನು ಮಂಜೂರು ಮಾಡಲಾಗಿದೆ.

ದೇಶವನ್ನು ತಲ್ಲಣಗೊಳಿಸಿದ್ದ ಊನಾ ಘಟನೆ

ಜುಲೈ 11, 2016ರಂದು ’ಗಿರ್ ಸೋಮನಾಥ’ ಜಿಲ್ಲೆಯ ’ಊನಾ’ದ ಬಳಿಯಲ್ಲಿರುವ ’ಮೋಟ ಸಮಾಧಿಯಾಲ’ ಎಂಬ ಹಳ್ಳಿಯಲ್ಲಿ ಸತ್ತ ದನದ ಚರ್ಮವನ್ನು ತಲತಲಾಂತರದಿಂದ ಸುಲಿಯುವ ದಲಿತ ಕುಟುಂಬದ ಏಳು ಯುವಕರು ಎಂದಿನಂತೆ ತಮ್ಮ ಕಾಯಕ ಮಾಡುತ್ತಿದ್ದರು. ಆ ಸತ್ತ ದನವನ್ನವರು ಬೇಡಿಯಾ ಜಿಲ್ಲೆಯಿಂದ ತಂದಿದ್ದರು. ಆಗ ಅಲ್ಲಿಗೆ ಎರಡು ಕಾರಿನಲ್ಲಿ ಬಂದ ಒಂದಷ್ಟು ಜನ ಕೆಳಗಿಳಿದು ಅವರ ಬಳಿ ಬಂದು ’ನಾವು ಗೋ ರಕ್ಷಕರು’ ಎಂದರು. ’ದನವನ್ನು ಕೊಂದು ಚರ್ಮ ಸುಲಿಯುತ್ತಿದ್ದೀರಿ’ ಎಂದು ದಲಿತರ ಮೇಲೆ ಆರೋಪ ಹೊರಿಸಿದರು. ಆ ದಲಿತ ಯುವಕರು ’ತಾವು ಸತ್ತ ದನದ ಚರ್ಮ ಸುಲಿಯುತ್ತಿರುವುದಾಗಿ’ ಎಷ್ಟೇ ಹೇಳಿದರೂ ಧರ್ಮಾಂಧತೆಯ ಅಮಲಿನಲ್ಲಿದ್ದ ಆ ಗೋ ರಕ್ಷಕರೆಂಬ ಭಯೋತ್ಪಾದಕರು ಏಳು ಜನ ದಲಿತರನ್ನೂ ಕಾರಿಗೆ ಕಟ್ಟಿಹಾಕಿ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛ ಥಳಿಸಿದರು. ಅದಷ್ಟಕ್ಕೆ ಅವರ ವಿಕೃತಿ ಸಮಾಧಾನವಾಗಲಿಲ್ಲ. ಎರಡೂ ಕಾರಿನಲ್ಲಿ ನಾಲ್ವರನ್ನು ತುಂಬಿಕೊಂಡು ಊನಾ ಪಟ್ಟಣಕ್ಕೆ ಬಂದರು. ಅಲ್ಲಿ ಬೃಹತ್ ಸರ್ಕಲ್‌ನಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾಗಿಸಿ ಮತ್ತೆ ಥಳಿಸಿದರು. ಇದನ್ನು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿಕೊಂಡರು. ಪೊಲೀಸರು ಅಲ್ಲಿಗೆ ಬರುವುದನ್ನು ಕಂಡು ಗೋರಕ್ಷಕ ಭಯೋತ್ಪಾದಕರು ನಂತರ ಓಡಿಹೋದರು.

ನಂತರ ಆ ಏಳು ದಲಿತರಿಗೆ ಊನಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಮೇಲೆ ಹೆಚ್ಚಿನ ಚಿಕಿತ್ಸೆಗೆ ರಾಜಕೋಟ್‌ನ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ದಲಿತರನ್ನು ಮಾರಣಾಂತಿಕವಾಗಿ ಥಳಿಸಿದ್ದ ವಿಡಿಯೋ ಇಡೀ ಗುಜರಾತಿನ ದಲಿತರ ನಿದ್ದೆಗೆಡಿಸಿತು. ರಾಜ್ಯಾದ್ಯಂತ ಸರಣಿ ಹೋರಾಟಗಳು ಜರುಗಿದವು. ಜುಲೈ 12ರಂದೇ ಗುಜರಾತಿನ ಅಹಮದಾಬಾದ್‌ನಲ್ಲಿ ಹಲವು ದಲಿತ ನಾಯಕರು ಬೀದಿಗಿಳಿದ ಪರಿಣಾಮ ದಲಿತ ಯುವಕರು ಸಿಟ್ಟಿಗೆದ್ದು ಪ್ರತಿಭಟಿಸಿದರು. ರಾಜ್ಯ ಹೆದ್ದಾರಿಯನ್ನು ತಡೆಹಿಡಿದರು. ಸತ್ತ ಪ್ರಾಣಿಗಳ ಕಳೇಬರಗಳನ್ನು ಸರ್ಕಾರಿ ಕಚೇರಿಗಳ ಮುಂದೆ ಎಸೆದರು. ರಸ್ತೆರಸ್ತೆಯಲ್ಲಿ ಕಳೇಬರಗಳನ್ನು ಬಿಸಾಡಿದರು. ಅಕ್ಷರಶಃ ಗುಜರಾತ್ ಒಂದು ವಾರ ಗಬ್ಬು ನಾರುತ್ತಿತ್ತು. ದಲಿತರು ರೊಚ್ಚಿಗೆದ್ದರೆ ಆಗುವ ಪರಿಣಾಮವನ್ನು ಗುಜರಾತ್ ಕಂಡಿತ್ತು. 12 ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸಿದರು. ಅದರಲ್ಲಿ ಒಬ್ಬ ಯುವಕ ಅಸುನೀಗಿದನು. ಇದರ ಪರಿಣಾಮವಾಗಿ ಜುಲೈ 21ರಂದು ರಾಜ್ಯಸಭೆಯಲ್ಲಿ ಈ ಘಟನೆ ಪ್ರತಿಧ್ವನಿಸಿತು.

ಇದನ್ನೂ ಓದಿರಿ: ಜಾತಿ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ವಿಳಂಬ: ಮನನೊಂದು ದಲಿತ ಯುವಕ ಸಾವಿಗೆ ಶರಣು

ದಲಿತ ಯುವಕ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ ಆಗಸ್ಟ್ 15, 2016ರ ಸ್ವಾತಂತ್ರ್ಯ ದಿನಾಚರಣೆಯಂದು ಅಹಮದಾಬಾದ್‌ನಿಂದ ಊನಾದವರೆಗೆ ದಲಿತ ಅಸ್ಮಿತೆ ಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಯಾತ್ರೆಯಲ್ಲಿ ಸುಮಾರು 20,000 ಹೋರಾಟಗಾರರು ಭಾಗವಹಿಸಿದ್ದರು. ಅತಿ ಪ್ರಮುಖವಾಗಿ ಈ ಯಾತ್ರೆಯಲ್ಲಿ ಭಾಗವಹಿಸಿದ್ದ ದಲಿತರು ’ಇನ್ನು ಮುಂದೆ ಸಾಂಪ್ರದಾಯಿಕ ವೃತ್ತಿಯಾದ ಸತ್ತ ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ಮಾಡಲಾರೆವು’ ಎಂಬ ಪ್ರತಿಜ್ಞೆಯನ್ನು ಕೈಗೊಂಡರು. ಆ ಹೋರಾಟದಲ್ಲಿಯೇ ’ದಲಿತರಿಗೆ ಉಳುಮೆ ಮಾಡಲು ಭೂಮಿ ಕೊಡಿ’ ಎಂಬ ಘೋಷವಾಕ್ಯವೂ ಮೊಳಗಿತು. ಬರೋಬ್ಬರಿ ಹತ್ತು ದಿನಗಳು ನಡೆದ ಈ ಯಾತ್ರೆಯಿಂದ ಮನೆಗೆ ಮರಳುತ್ತಿದ್ದಾಗ ದಲಿತರ ಮೇಲೆ ಬಾಂಬ್ ದಾಳಿ ಮಾಡಲಾಯಿತು. 10 ಜನರು ಗಂಭೀರವಾಗಿ ಗಾಯಗೊಂಡರು. ಆಶ್ಚರ್ಯವೆಂದರೆ ಅಲ್ಲಿನ ಬಿಜೆಪಿ ಸರ್ಕಾರ ದಲಿತರ ಮೇಲೆ ಬಾಂಬು ಹಾಕಿದವರನ್ನು ಬಂಧಿಸದೇ, ಅದನ್ನು ಸುಳ್ಳು ಸುದ್ದಿಯೆಂದು ಪ್ರಚಾರಮಾಡಿತು. ಮುಂದುವರೆದು ದಲಿತರ ಮೇಲೆಯೇ 74 ಕೇಸುಗಳನ್ನು ದಾಖಲಿಸಿತು. ಮುಂದುವರೆದು ದಲಿತರ ಮೇಲೆಯೇ 74 ಕೇಸುಗಳನ್ನು ದಾಖಲಿಸಿತು. (ಹೆಚ್ಚಿನ ವಿವರಗಳಿಗೆ ಓದಿರಿ: ‘ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು’ ಲೇಖನ ಓದಬಹುದು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಐದು ವರ್ಷಗಳಾದರೂ, ಅಲ್ಲಿಯ ಸರ್ಕಾರದಿಂದ ನಿಜವಾಗಿಯೂ ದಲಿತರ ರಕ್ಷಣೆ ಆಗಿದೆಯೇ? ಈ ಸರ್ಕಾರಗಳಿಗೆ ಸಂಬಂದಿಸಿದ ನ್ಯಾಯಾಲಯಗಳಿಗೆ ಕಿಂಚಿತ್ತಾದರು ಮಾನ ,ಮರ್ಯಾದೆ ಇದೆಯೇ?
    ಬಾಬಾಸಾಹೇಬರು ಜೀವಿತ ಅವಧಿಯಲ್ಲಿ ದಲಿತರಿಗೆ ಹೇಳುತ್ತಿದ್ದುದು ,ಸ್ವಾಭಿಮಾನಕ್ಕಾಗಿ ಬದುಕಿ ಎಂದು ಆದ್ದರಿಂದ ಒಂದು ವೇಳೆ ಸರ್ಕಾರ ಇಲ್ಲವೇ ನ್ಯಾಯಾಲಯಗಳು ನಿಮಗೆ ನ್ಯಾಯ ದೊರಕಿಸಿಕೊಡಲಿಲ್ಲವೆಂದಾದರೆ,ನೀವೇ ಸಂಘಟಿತರಾಗಿ ಜೀವಬೆದರಿಕೆ ಹಾಕಿದವರಿಗೆ ಯೋದರಾಗಿ ಜನ ಮೆಚ್ಚುವಂತೆ ಬುದ್ದಿ ಕಲಿಸಿ.

  2. Yes I am in line with u and future also I have no confidence that the present regime would give justice to it so also the court, as I could see the judgement for other similar cases of this nature sorry where are they leading us

LEAVE A REPLY

Please enter your comment!
Please enter your name here

- Advertisment -

Must Read