Homeಮುಖಪುಟರಾಹುಲ್ ಗಾಂಧಿ ಕುರಿತು ಅವಹೇಳನ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ FIR

ರಾಹುಲ್ ಗಾಂಧಿ ಕುರಿತು ಅವಹೇಳನ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ FIR

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಬೆಂಗಳೂರಿನಲ್ಲಿ FIR ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕಾಂಗ್ರೆಸ್ ಮುಖಂಡ ರಮೇಶ್ ಬಾಬುರವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A 120b 505(2), 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಮಿತ್ ಮಾಳವೀಯ ದುರುದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರ ಅನಿಮೇಟೆಡ್ ವಿಡಿಯೋ ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಜೂನ್ 17ರಂದು ಆ್ಯನಿಮೇಟೆಡ್ ವೀಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಲಾಗಿತ್ತು. ಆ ಕುರಿತು ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ್ ಖರ್ಗೆ ಮತ್ತು ರಮೇಶ್ ಬಾಬುರವರು ದೂರು ನೀಡಿದ್ದರು.

ಅಮಿತ್ ಮಾಳವೀಯ ಈ ಹಿಂದೆಯೂ ಹಲವಾರು ಸುಳ್ಳು ಸುದ್ದಿಗಳನ್ನು ಟ್ವೀಟ್ ಮಾಡಿದ್ದರು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ “ಮಾಜಿ ಕೇಂದ್ರ ಸಚಿವ ಭನ್ವರ್ ಜಿತೇಂದ್ರ ಸಿಂಗ್ ಅವರು ತಮಗಿಂತ ಕಿರಿಯರಾದ ರಾಹುಲ್ ಗಾಂಧಿ ಅವರ ಶೂ ಲೇಸ್ ಕಟ್ಟಿದ್ದಾರೆ. ಈ ರಾಹುಲ್ ಗಾಂಧಿ ತನ್ನ ಕೆಲಸ ತಾನು ಮಾಡಿಕೊಳ್ಳದ ದುರಂಕಾರಿ ಸಿಂಗ್ ಅವರ ತನ್ನ ಬೆನ್ನು ತಟ್ಟುತ್ತಾರೆ. ಕಾಂಗ್ರೆಸ್‌ನಲ್ಲಿ ಇಂತವರ ಕೊರತೆಯಿಲ್ಲ” ಎಂದು ಬರೆದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿತೇಂದ್ರ ಸಿಂಗ್‌ರವರು ತಾವು ತಮ್ಮ ಸ್ವಂತ ಶೂ ಲೇಸ್ ಅನ್ನು ಕಟ್ಟುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದರು. ಹಾಗಾಗಿ ಪೋಸ್ಟ್‌ನಲ್ಲಿ ಟ್ವಿಟರ್ ಈ ಮೀಡಿಯಾ ಸಂದರ್ಭಕ್ಕೆ ಹೊರತಾಗಿದೆ ಎಂದು ಎಚ್ಚರಿಕೆ ನೀಡಿತ್ತು.

2020ರ ಜನವರಿ 15 ರಂದು, ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ದೆಹಲಿಯ ಶಾಹೀನ್ ಬಾಗ್ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಿ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಲ್ಟ್ ನ್ಯೂಸ್ ಮತ್ತು ನ್ಯೂಸ್ ಲ್ಯಾಂಡ್ರಿ ತನಿಖೆಯಿಂದ ಮಾಳವಿಯಾ ಅವರ ಆರೋಪವು ಆಧಾರ ರಹಿತವಾಗಿದೆ ಎಂದು ಸಾಬೀತಾಗಿತ್ತು. BJP ಕಾರ್ಯಕರ್ತನ ಅಂಗಡಿಯಲ್ಲಿ ಮಾಡಿದ ವಿಡಿಯೋವನ್ನು ಶಾಹೀನ್‌ ಬಾಗ್‌ ಸ್ಟಿಂಗ್‌ ಎಂದು ಅಮಿತ್‌ ಮಾಳವಿಯ ಸುಳ್ಳು ಹೇಳಿದ್ದರು.

ಇದನ್ನೂ ಓದಿ: Fact check: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಹರಡಿದ 16 ಸುಳ್ಳು ಸುದ್ದಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read