Homeಮುಖಪುಟಚುನಾವಣೆಯಲ್ಲಿ ಟಿಕ್‌ಟಾಕ್‌ ಸ್ಟಾರ್‌ ಸೋನಾಲಿಗೆ ಸೋಲು: ಮತದಾರರ ಮನ ಗೆದ್ದ ಕುಲ್ದೀಪ್‌

ಚುನಾವಣೆಯಲ್ಲಿ ಟಿಕ್‌ಟಾಕ್‌ ಸ್ಟಾರ್‌ ಸೋನಾಲಿಗೆ ಸೋಲು: ಮತದಾರರ ಮನ ಗೆದ್ದ ಕುಲ್ದೀಪ್‌

- Advertisement -
- Advertisement -

ಟಿಕ್‌ಟಾಕ್‌ ವಿಡಿಯೋ ಮೂಲಕ ಲಕ್ಷ ಲಕ್ಷ ಜನತೆಯ ಮನ ಗೆದ್ದಿದ್ದ ಟಿಕ್‌ಟಾಕ್‌ ಸ್ಟಾರ್‌, ಬಿಜೆಪಿ ಅಭ್ಯರ್ಥಿ ಸೋನಾಲಿ ಪೋಗಟ್‌ ಚುನಾವಣೆಯಲ್ಲಿ ಹರಿಯಾಣ ಜನತೆಯ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಹರ್ಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೋನಾಲಿ ಪೋಗಟ್, ಕಾಂಗ್ರೆಸ್‌ ಅಭ್ಯರ್ಥಿ ಕುಲ್ದೀಪ್‌ ಬಿಶ್ನೋಯ್‌ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ಬಿಜೆಪಿಯ ಸೋನಾಲಿ ವಿರುದ್ಧ ಕುಲ್ದೀಪ್‌ ಬಿಶ್ನೋಯ್‌ ೨೬ ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್‌ನ ಕುಲ್ದೀಪ್‌. ಮಾಜಿ ಸಿಎಂ ಭಜನ್‌ಲಾಲ್‌ ಅವರ ಪುತ್ರ . ಆದಂಪುರ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದವರು. ಮೂರು ಬಾರಿ ಶಾಸಕರಾಗಿದ್ದರು. ಆದರೆ ಮೊದಲ ಚುನಾವಣೆಯಲ್ಲೇ ಸೋನಾಲಿ ಪೋಗಟ್‌ ಮುಗ್ಗರಿಸಿದ್ದಾರೆ.

ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಫಾಲೋವರ್ಸ್‌ ಹೊಂದುವ ಮೂಲಕ ಸ್ಟಾರ್‌ ಖ್ಯಾತಿ ಪಡೆದಿದ್ದ ಸೋನಾಲಿ ಪೋಗಟ್‌ಗೆ ಚುನಾವಣೆ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದಿಂದ ಟಿಕೆಟ್‌ ನೀಡಿತ್ತು. ಆಗ ಪಕ್ಷದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದ್ದು, ಸೋನಾಲಿಯನ್ನು ಮತದಾರರು ಒಪ್ಪಿಕೊಂಡಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕ್ಷೇತ್ರದಲ್ಲಿ ಅಬ್ಬರಿಸಿದ್ದ ಸೋನಾಲಿ ಚುನಾವಣೆ ಗೆಲುವಿಗಾಗಿ ಹಿಂದೂ ಮಂತ್ರ ಪಠಿಸಿದ್ದರು. ಆದರೆ ಇದ್ಯಾವುದೂ ಸೋನಾಲಿಯನ್ನು ಹೈ ಹಿಡಿದಿಲ್ಲ.

ಇನ್ನು ಚುನಾವಣೆ ಪ್ರಚಾರದ ವೇಳೆ ಸೋನಾಲಿ ಪೋಗಟ್‌ ಭಾರತ್‌ ಮಾತಾ ಕೀ ಜೈ ಎನ್ನದವರು ಭಾರತೀಯರಲ್ಲ ಎಂದು ನಿಂದಿಸಿದ್ದ ಹಾಗೂ ಸವಾಲು ಹಾಕಿದ್ದ ವಿಡಿಯೋ ಟಿಕ್‌ಟಾಕ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದಂಪುರ ಕ್ಷೇತ್ರದಲ್ಲಿ ಕುಲ್ದೀಪ್‌ಗೆ ಸೋನಾಲಿ ಸವಾಲು ಹಾಕಿದ್ದರು. ಆದರೆ ಕುಲ್ದೀಪ್‌ ಮತದಾರರ ಮನ ಗೆದ್ದಿದ್ದು, ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...