Homeಮುಖಪುಟಮೆಹ್ರೌಲಿಯಲ್ಲಿ 'ಅಕ್ರಮವೆಂದು' DDA ಕೆಡವಿದ ಮಸೀದಿ ಶತಮಾನಗಳಷ್ಟು ಹಳೆಯದ್ದು: ASI ದಾಖಲೆಗಳಿಂದ ಬಹಿರಂಗ

ಮೆಹ್ರೌಲಿಯಲ್ಲಿ ‘ಅಕ್ರಮವೆಂದು’ DDA ಕೆಡವಿದ ಮಸೀದಿ ಶತಮಾನಗಳಷ್ಟು ಹಳೆಯದ್ದು: ASI ದಾಖಲೆಗಳಿಂದ ಬಹಿರಂಗ

- Advertisement -
- Advertisement -

ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ‘ಅಕ್ರಮ ಕಟ್ಟಡ’ ಎಂದು ಇತಿಹಾಸ ಪ್ರಸಿದ್ಧ ಅಖೂಂಡ್ಜಿ ಮಸೀದಿ ಮತ್ತು ಮದರಸಾವನ್ನು ಧ್ವಂಸಗೊಳಿಸಿದೆ. ಆದರೆ ASI ದಾಖಲೆಗಳು ಮಸೀದಿ 700ವರ್ಷಗಳಷ್ಟು ಹಳೆಯದು ಎನ್ನುವುದನ್ನು ಬಹಿರಂಗಗೊಳಿಸುತ್ತದೆ.

ಜ.30ರಂದು, ಇಮಾಮ್ ಜಾಕಿರ್ ಹುಸೇನ್ ಎಂದಿನಂತೆ ಮೆಹ್ರೌಲಿಯಲ್ಲಿರುವ 13ನೇ ಶತಮಾನದ ಮಸೀದಿಯಾದ ಅಖೂಂಡ್ಜಿ ಮಸೀದಿಯಲ್ಲಿ ಬೆಳಗಿನ ಪ್ರಾರ್ಥನೆಯನ್ನು ನಡೆಸಲು ತಯಾರಾಗುತ್ತಿದ್ದಾಗ, ಬುಲ್ಡೋಜರ್‌ಗಳು ಬಂದಿದೆ. ಕೆಲವೇ ಗಂಟೆಗಳಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ಅಖೂಂಡ್ಜಿ ಮಸೀದಿ ಮತ್ತು ಬೆಹ್ರುಲ್ ಉಲೂಮ್ ಮದರಸಾ ಸೇರಿದಂತೆ ಸಂಪೂರ್ಣ ಆವರಣವನ್ನು ಮತ್ತು ಸ್ಮಶಾನದಲ್ಲಿನ ಹಲವಾರು ಸಮಾಧಿಗಳನ್ನು ನೆಲಸಮ ಮಾಡಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕುತುಬ್ ಮಿನಾರ್‌ನಿಂದ ಸರಿಸುಮಾರು ಅರ್ಧ ಕಿಲೋಮೀಟರ್  ದೂರದಲ್ಲಿ ಈ ಮಸೀದಿ ಇದೆ. ರಜಿಯಾ ಸುಲ್ತಾನ ಆಳ್ವಿಕೆಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಮಸೀದಿಯು 600-700 ವರ್ಷಗಳಷ್ಟು ಹಳೆಯದಾಗಿದೆ ಎಂದು ಕೆಲವರು ಹೇಳುತ್ತಾರೆ. ಮೆಹ್ರಾಲಿಯಲ್ಲಿನ ಅಖೂಂಡ್ಜಿ ಮಸೀದಿಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, 1922ರ ಪ್ರಕಟಣೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅಧಿಕಾರಿಯೊಬ್ಬರು, ಮಸೀದಿಯ ನಿರ್ಮಾಣ ದಿನಾಂಕ ತಿಳಿದಿಲ್ಲವಾದರೂ ಅದನ್ನು 1853ರಲ್ಲಿ ಮಸೀದಿಯನ್ನು ದುರಸ್ತಿ ಮಾಡಲಾಗಿದೆ ಎಂದು ದಾಖಲಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಜನವರಿ 30ರಂದು, ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಅಖೂಂಡ್ಜಿ ಮಸೀದಿ ಮತ್ತು ಮದರಸಾವನ್ನು ಧ್ವಂಸಗೊಳಿಸಿತು, ಅವುಗಳನ್ನು ಸಂಜಯ್ ವಾನ್, ಮೀಸಲು ಅರಣ್ಯ ಪ್ರದೇಶದಲ್ಲಿದ್ದ “ಅಕ್ರಮ ಕಟ್ಟಡ” ಎಂದು ಹೇಳಿದೆ. ಜನವರಿ 31ರಂದು ದೆಹಲಿ ಹೈಕೋರ್ಟ್, ಮಸೀದಿಯನ್ನು ಕೆಡವಿರುವ ಬಗ್ಗೆ DDAಯಿಂದ ವಿವರಣೆಯನ್ನು ಕೇಳಿದೆ ಮತ್ತು ಮಸೀದಿಯನ್ನು ಕೆಡವುವ ಮೊದಲು ಯಾವುದೇ ಪೂರ್ವ ಸೂಚನೆ ನೀಡಲಾಗಿದೆಯೇ ಎಂದು ಪ್ರಶ್ನಿಸಿದೆ. ಒಂದು ವಾರದೊಳಗೆ ಈ ಬಗ್ಗೆ ಉತ್ತರಿಸುವಂತೆ ಡಿಡಿಎಗೆ ಹೈಕೋರ್ಟ್ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ನಿಗದಿಪಡಿಸಲಾಗಿದೆ.

1994ರಲ್ಲಿ ಸಂಜಯ್‌ ವ್ಯಾನ್‌ ಪ್ರದೇಶಕ್ಕೆ ಮೀಸಲು ಅರಣ್ಯ ಪ್ರದೇಶವೆಂದು ಅಧಿಸೂಚನೆ ಹೊರಡಿಸಲಾಗಿದ್ದು, ಹಳೆ ಮಸೀದಿ ಹೇಗೆ ಅತಿಕ್ರಮಣವಾಗುತ್ತದೆ ಎಂದು ಇತಿಹಾಸಕಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಸಂಜಯ್ ವ್ಯಾನ್ ಕುರಿತು DDAಯ ಸ್ವಂತ ದಾಖಲೆಯು, ಸಂಜಯ್ ವ್ಯಾನ್ ದೆಹಲಿಯ ಮೆಹ್ರೌಲಿ/ದಕ್ಷಿಣ ಮಧ್ಯ ಪರ್ವತದ ಒಂದು ಭಾಗವಾಗಿದೆ. ಭಾರತೀಯ ಅರಣ್ಯ ಕಾಯಿದೆ 1927ರ ಸೆಕ್ಷನ್ 4 ರ ಅಡಿಯಲ್ಲಿ 1994 ರ ಅಧಿಸೂಚನೆಯ ಪ್ರಕಾರ ಅಧಿಸೂಚಿತ ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಆದರೆ ಮಸೀದಿ ಈ ಘೋಷಣೆಗೆ ಮೊದಲೇ ಅಲ್ಲಿ ಇತ್ತು ಎನ್ನುವುದನ್ನು ದಾಖಲೆಗಳು ಬಹಿರಂಗಪಡಿಸುತ್ತಿದೆ.

1922ರಲ್ಲಿ ಪ್ರಕಟವಾದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಹಾಯಕ ಅಧೀಕ್ಷಕ ಮೌಲ್ವಿ ಜಾಫರ್ ಹಸನ್ ಅವರ ‘ಮುಹಮ್ಮದನ್ ಮತ್ತು ಹಿಂದೂ ಸ್ಮಾರಕಗಳ ಪಟ್ಟಿ ಸಂಪುಟ III’ ಪ್ರಕಾರ, ಅಖೋಂಡ್ಜಿ ಮಸೀದಿ ಈದ್ಗಾದ ಪಶ್ಚಿಮಕ್ಕೆ ಇದ್ದು, 1398ರಲ್ಲಿ ತೈಮೂರ್ ಭಾರತವನ್ನು ಆಕ್ರಮಿಸಿದಾಗ ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ.

ಲೇಖಕ ಸೊಹೈಲ್ ಹಶ್ಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಮಸೀದಿ ಕಾರ್ಯ ನಿರ್ವಹಿಸುತ್ತಿತ್ತು ಮತ್ತು 1994ರಲ್ಲಿ ಸಂಜಯ್ ವಾನ್ ಅರಣ್ಯ ಭೂಮಿ ಅಸ್ತಿತ್ವಕ್ಕೆ ಬರುವ ಮೊದಲು ಇದು ಅಸ್ತಿತ್ವದಲ್ಲಿತ್ತು ಮತ್ತು ಆದ್ದರಿಂದ ಈ ಕಟ್ಟಡಗಳು ಅತಿಕ್ರಮಣವಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಕರಡು ಮಸೂದೆಗೆ ಕ್ಯಾಬಿನೆಟ್‌ ಅನುಮೋದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್‌ ಯಾದವ್‌

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...