Homeಮುಖಪುಟದೆಹಲಿ ಅಬಕಾರಿ ನೀತಿ ಪ್ರಕರಣ: ಇಡಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಪ್ರಕರಣ: ಇಡಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್

- Advertisement -
- Advertisement -

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಇಂದು ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ. ಇಡಿ ನೀಡಿರುವ ಸಮನ್ಸ್‌ಗಳು ಕಾನೂನುಬಾಹಿರವಾಗಿದ್ದು, ಕೇಜ್ರಿವಾಲ್ ಅವರನ್ನು ಬಂಧಿಸುವುದೊಂದೇ ಅವರ ಗುರಿ ಎಂದು ಆಪ್ ಆರೋಪಿಸಿದೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರು ನವೆಂಬರ್ 2 ಮತ್ತು ಡಿಸೆಂಬರ್ 21ರಂದು ನೀಡಿರುವ ಹಿಂದಿನ ಎರಡು ಸಮನ್ಸ್‌ಗಳಿಗೂ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ ನಂತರ ಮೂರನೇ ನೋಟಿಸ್ ಜಾರಿ ಮಾಡಲಾಗಿದೆ.

ಕೇಜ್ರಿವಾಲ್ ಅವರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಪಾದಿಸಿದೆ. ಆದರೆ, ಇಡಿ ಸಮನ್ಸ್ ಕಾನೂನುಬಾಹಿರವಾಗಿದ್ದು, ಅವರನ್ನು ಬಂಧಿಸುವ ಉದ್ದೇಶದಿಂದ ಕಳುಹಿಸಲಾಗಿದೆ ಎಂದು ಪ್ರತಿಪಾದಿಸಿದೆ.

‘ಚುನಾವಣೆಗೆ ಮುಂಚೆಯೇ ನೋಟಿಸ್ ಏಕೆ ಕಳುಹಿಸಲಾಗಿದೆ? ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಿಂದ ತಡೆಯುವ ಪ್ರಯತ್ನವಾಗಿದೆ’ ಎಂದು ಪಕ್ಷ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥರನ್ನು ಕೇಂದ್ರ ತನಿಖಾ ದಳವು ಏಪ್ರಿಲ್‌ನಲ್ಲಿ ವಿಚಾರಣೆ ನಡೆಸಿತ್ತು. ಆದರೆ, ಇಡಿ ಅವರನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ.

ಜಾರಿ ನಿರ್ದೇಶನಾಲಯದಿಂದ ಮೊದಲ ಸಮನ್ಸ್ ಜಾರಿಯಾದಾಗಿನಿಂದಲೂ, ದೆಹಲಿ ಮುಖ್ಯಮಂತ್ರಿಯನ್ನು ಅವರ ವಿಚಾರಣೆಯ ನಂತರ ಸಂಸ್ಥೆಯು ಬಂಧಿಸುತ್ತದೆ ಎಂಬ ತೀವ್ರ ಊಹಾಪೋಹಗಳು ಇದ್ದವು. ಎಎಪಿಯ ಹಲವು ನಾಯಕರು ಕೂಡ ಇದೇ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.

ಡಿಸೆಂಬರ್ 22ರಂದು ಇಡಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ‘ಕಾನೂನಿಗೆ ಅನುಸಾರವಾಗಿ ನೀಡಲಾದ ಯಾವುದೇ ಸಮನ್ಸ್‌ಗಳನ್ನು ಅನುಸರಿಸುವುದರಿಂದ ನಾನು ದೂರ ಸರಿಯುವುದಿಲ್ಲ. ಆದರೆ, ನಿಮ್ಮ ಸಮನ್ಸ್‌ಗಳು ಕಾನೂನಿಗೆ ಅನುಗುಣವಾಗಿಲ್ಲ. ನೀವು ಉದ್ದೇಶಪೂರ್ವಕವಾಗಿ, ಯಾವುದೇ ಕಾರಣ ಮತ್ತು ತನಿಖೆಯ ಅಗತ್ಯವನ್ನು ನಿರ್ದಿಷ್ಟಪಡಿಸದೆ ವೈಯಕ್ತಿಕವಾಗಿ ನನ್ನ ಪಾತ್ರವನ್ನು ಮಾತ್ರ ಹುಡುಕಿದ್ದೀರಿ. ನಿಮ್ಮ ಸಮನ್ಸ್‌ ನನಗೆ ಕಿರುಕುಳ ಮತ್ತು ಮುಜುಗರವನ್ನು ಉಂಟುಮಾಡುವ ಉದ್ದೇಶವನ್ನು ಸೂಚಿಸುತ್ತದೆ’ ಎಂದು ಹೇಳಿದ್ದರು.

ಅಬಕಾರಿ ನೀತಿಯನ್ನು ಅಂತಿಮಗೊಳಿಸಲು ಎಎಪಿ ₹100 ಕೋಟಿ ಕಿಕ್‌ಬ್ಯಾಕ್ ಪಡೆದಿದೆ ಮತ್ತು ಇದರ ಭಾಗವನ್ನು ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಹಣವನ್ನು “ಸೌತ್ ಗ್ರೂಪ್” ನಿಂದ ಸ್ವೀಕರಿಸಲಾಗಿದ್ದು, ಆರೋಪಿಗಳಾದ ಅಭಿಷೇಕ್ ಬೋಯಿನ್‌ಪಲ್ಲಿ ಮತ್ತು ದಿನೇಶ್ ಅರೋರಾ ಅವರ ಸಹಾಯದಿಂದ ಮಾಜಿ ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್‌ಗೆ ವರ್ಗಾಯಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಪ್ರಚಾರದ ಸಮಯದಲ್ಲಿ ಎಎಪಿ ಸ್ವಯಂಸೇವಕರಿಗೆ ನಗದು ರೂಪದಲ್ಲಿ ಹಣ ನೀಡಿದೆ ಎಂದು ಇಡಿ ಆರೋಪಿಸಿದೆ.

ಕೇಜ್ರಿವಾಲ್ ಅವರನ್ನು ಬಂಧಿಸಿದರೆ ರಾಜೀನಾಮೆ ನೀಡಬೇಕೆ ಅಥವಾ ಜೈಲಿನಿಂದ ಸರ್ಕಾರವನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಎಎಪಿ ಸಾರ್ವಜನಿಕ ಪ್ರತಿಕ್ರಿಯೆಯನ್ನು ಕೇಳುತ್ತಿದೆ. ಎಎಪಿಯನ್ನು ದುರ್ಬಲಗೊಳಿಸಲು ಕೇಜ್ರಿವಾಲ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಪಿತೂರಿ ನಡೆಸುತ್ತಿದೆ ಎಂದು ಆಪ್ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಯಿತು. ನಂತರ, ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್‌ನಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ; ಗ್ಯಾರಂಟಿ ಪ್ರಶ್ನಿಸಿ ಅರ್ಜಿ: ವಿಚಾರಣೆ 3 ತಿಂಗಳು ಮುಂದೂಡಿದ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...