Homeಮುಖಪುಟಡೆರೆಕ್ ಒಬ್ರಿಯಾನ್ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹ: ಪತ್ರ ಬರೆದ ಖರ್ಗೆ

ಡೆರೆಕ್ ಒಬ್ರಿಯಾನ್ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹ: ಪತ್ರ ಬರೆದ ಖರ್ಗೆ

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದು, ಸಭಾಪತಿ ಜಗದೀಪ್ ಧನ್ಖರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಸಂಸತ್ತಿನನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮೂಲಕ ಸ್ಪಷ್ಟನೆ ಪಡೆಯಲು ತೃಣಮೂಲ ಕಾಂಗ್ರೆಸ್ ಸಂಸದರು ತಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

‘ಡಿಸೆಂಬರ್ 13, 2023 ರಂದು ಲೋಕಸಭೆಯಲ್ಲಿ ನಡೆದ ಆಘಾತಕಾರಿ ಘಟನೆಯ ಕುರಿತು ಗೃಹ ವ್ಯವಹಾರಗಳ ಸಚಿವರ ಹೇಳಿಕೆಗಾಗಿ ‘ಇಂಡಿಯಾ’ ಕೂಟದ ಪಕ್ಷಗಳ ಸಾಮೂಹಿಕ ಬೇಡಿಕೆಯ ಬಗ್ಗೆ ನಿಮ್ಮ ಗಮನ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದರು. ಇದು ಸಂಪೂರ್ಣವಾಗಿ ನ್ಯಾಯಸಮ್ಮತ ಬೇಡಿಕೆಯಾಗಿದೆ’ ಎಂದು ತಿಳಿಸಿದ್ದಾರೆ.

ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಸದನದಲ್ಲಿ ಈ ವಿಷಯದ ಕುರಿತು ಮಾತನಾಡದ ಅಮಿತ್ ಶಾ, ಟಿವಿ ಚಾನೆಲ್‌ನೊಂದಿಗೆ ಮಾತನಾಡಿರುವುದನ್ನು ಖರ್ಗೆ ಆಕ್ಷೇಪಿಸಿದರು. ‘ಗೃಹ ಸಚಿವರು 13ನೇ ಡಿಸೆಂಬರ್ 2023 ರ ಘಟನೆಯ ಬಗ್ಗೆ ಮಾಧ್ಯಮ ವೇದಿಕೆಯಲ್ಲಿ ಮಾತನಾಡಬಹುದು. ಆದರೆ ಸಂಸತ್ತಿನ ಅಧಿವೇಶನ ನಡೆಯುವಾಗ ಸದನದಲ್ಲಿ ಹೇಳಿಕೆಯ ರೂಪದಲ್ಲಿ ಹೇಳಲು ನಿರಾಕರಿಸುವುದು ಸಂಸದೀಯ ಸಂಪ್ರದಾಯಗಳ ಉಲ್ಲಂಘನೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 13 ರಂದು ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯೊಳಗೆ ಜಿಗಿದರು. ಘಟನೆ ಕುರಿತು ಅಮಿತ್ ಶಾ ಹೇಳಿಕೆ ನೀಡುವಂತೆ ವಿರೋಧ ಪಕ್ಷಗಳಿಂದ ಬೇಡಿಕೆ ಇಟ್ಟು, ಆಗ್ರಹಿಸಿದವು. ಕೆಲವು ಸದಸ್ಯರು ಗೃಹ ಸಚಿವರ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಗುರುವಾರ ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯ ಕಲಾಪ ಆರಂಭವಾದ ಸ್ವಲ್ಪ ಹೊತ್ತಿನಲ್ಲೆ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ಸದನದ ಬಾವಿಗೆ ಇಳಿದರು. ಡೆರೆಕ್ ಒಬ್ರಿಯನ್ ಕೂಡ ಸಭಾಧ್ಯಕ್ಷರ ಕುರ್ಚಿಯ ಮುಂಭಾಗಕ್ಕೆ ತೆರಳಿ ಕೈ ಎತ್ತಿ ಬೇಡಿಕೆ ಇಟ್ಟರು. ಇದರಿಂದ ಕೆರಳಿದ ರಾಜ್ಯಸಭಾ ಅಧ್ಯಕ್ಷರು ಟಿಎಂಸಿ ಸಂಸದರನ್ನು ಹೆಸರಿಸಿ ಸದನದಿಂದ ಹೊರಹೋಗುವಂತೆ ಸೂಚಿಸಿದರು.
ಆಡಳಿತ ಪಕ್ಷದ ನಾಯಕ ಪಿಯೂಷ್ ಗೋಯಲ್ ಅವರು ಅಧಿವೇಶನದ ಉಳಿದ ಭಾಗಕ್ಕೆ ಒಬ್ರಿಯನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು, ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ಒಬ್ರಿಯಾನ್ ಮೌನ ಪ್ರತಿಭಟನೆ:

ಕಳೆದ ಗುರುವಾರ ರಾಜ್ಯಸಭೆಯ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಿದ್ದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಸಂಸತ್ತಿನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು. ‘ಮೌನ ಪ್ರತಿಭಟನೆ’ ಎಂದು ಮೂರು ಭಾಷೆಗಳಲ್ಲಿ ಬರೆದ ಕಾಗದವನ್ನು ಓಬ್ರಿಯಾನ್ ಕೈಯಲ್ಲಿ ಹಿಡಿದಿದ್ದರು; ಇನ್ನೊಂದು ಕಾಗದವನ್ನು ಅವರ ಬೆನ್ನಿಗೆ ಅಂಟಿಸಿಕೊಂಡಿದ್ದರು. ಒಬ್ರಿಯಾನ್ ಅವರ ನಡವಳಿಕೆ ಗಂಭೀರ ದುರ್ನಡತೆ ಮತ್ತು ನಾಚಿಕೆಗೇಡಿ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಅಂದು ಟೀಕಿಸಿ, ಅದನದಿಂದ ಹೊರಹೋಗುವಂತೆ ಸೂಚಿಸಿದ್ದರು.

13 ಜನ ಲೋಕಸಭಾ ಸಂಸದರ ಅಮಾನತು:

ಸಂಸತ್ತಿನ ಭದ್ರತಾ ಲೋಪದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸಂಸದರು ತೀವ್ರ ಪ್ರತಿಭಟನೆ ನಡೆಸಿದ್ದಕ್ಕೆ ಕಳೆದ ಗುರುವಾರ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷದ 13 ಜನ ಸದಸ್ಯರನ್ನು ಸ್ಪೀಕರ್ ಚಳಿಗಾಲ ಅಧೀವೇಶನ ಮುಗಿಯುವವರೆಗೆ ಅಮಾನತು ಮಾಡಿದ್ದಾರೆ.
ಮಾಣಿಕ್ಕಂ ಠಾಗೋರ್, ಕನಿಮೋಳಿ, ಪಿಆರ್ ನಟರಾಜನ್, ವಿ.ಕೆ. ಶ್ರೀಕಾಂತಂ, ಬೇನಿ ಬಹನ್, ಕೆ. ಸುಬ್ರಮಣ್ಯಂ, ಎಸ್. ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಅವರನ್ನು ಲೋಕಸಭೆಯಿಂದ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ; ಆಧಾರ್ ಭದ್ರತೆ ಕುರಿತು ಕೇಂದ್ರ ಸರ್ಕಾರದಿಂದ ತಪ್ಪು ಮಾಹಿತಿ: ಟಿಎಂಸಿ ಸಂಸದ ಸಾಕೇತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...