Homeಮುಖಪುಟಆಧಾರ್ ಭದ್ರತೆ ಕುರಿತು ಕೇಂದ್ರ ಸರ್ಕಾರದಿಂದ ತಪ್ಪು ಮಾಹಿತಿ: ಟಿಎಂಸಿ ಸಂಸದ ಸಾಕೇತ್

ಆಧಾರ್ ಭದ್ರತೆ ಕುರಿತು ಕೇಂದ್ರ ಸರ್ಕಾರದಿಂದ ತಪ್ಪು ಮಾಹಿತಿ: ಟಿಎಂಸಿ ಸಂಸದ ಸಾಕೇತ್

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಧಾರ್ ಮಾಹಿತಿಯ ಭದ್ರತೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಅವರು ಸೋಮವಾರ ಆರೋಪಿಸಿದ್ದಾರೆ.

ಭಾರತೀಯ ನಾಗರಿಕರ ಆಧಾರ್ ಮತ್ತು ಪಾಸ್‌ಪೋರ್ಟ್ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಸೋರಿಕೆ ಮಾಡುವಲ್ಲಿ ಭಾಗಿಯಾಗಿರುವ ನಾಲ್ವರ ಬಂಧನದ ನಂತರ ಗೋಖಲೆ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮೋದಿ ಸರ್ಕಾರವು ಸಂಸತ್ತಿನಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದು, ಆಧಾರ್ ಭದ್ರತೆ ವಿಚಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ. ಆದರೆ, ಇದೀಗ ಐಸಿಎಂಆರ್ ಡೇಟಾಬೇಸ್‌ನಿಂದ ಡಾರ್ಕ್ ವೆಬ್‌ನಲ್ಲಿ ಭಾರತೀಯರ ಆಧಾರ್ ಮತ್ತು ಪಾಸ್‌ಪೋರ್ಟ್ ವಿವರಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 4 ಜನರನ್ನು ಬಂಧಿಸಲಾಗಿದೆ. ನಿಮ್ಮ ಸಚಿವಾಲಯ ಸಂಸತ್ತಿನಲ್ಲಿ ಏಕೆ ಸುಳ್ಳು ಹೇಳುತ್ತಿದೆ? ರಾಜೀವ್ ಚಂದ್ರಶೇಖರ್ ಅವರೆ ನೀವು ಏನು ಮರೆಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ.

ಸ್ವಯಂ ಪ್ರೇರಿತ ತನಿಖೆ ನಡೆಸಿದ ನಂತರ ಸುಮಾರು 10 ದಿನಗಳ ಹಿಂದೆ ದೆಹಲಿ ಪೊಲೀಸ್ ಸೈಬರ್ ಘಟಕವು ನಾಲ್ಕು ಜನರನ್ನು ಬಂಧಿಸಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಡೇಟಾ ಬ್ಯಾಂಕ್‌ನಿಂದ ಆಧಾರ್ ಮತ್ತು ಪಾಸ್‌ಪೋರ್ಟ್ ವಿವರಗಳು ಸೇರಿದಂತೆ ವೈಯಕ್ತಿಕ ಡೇಟಾ ಸೋರಿಕೆಯಾಗಿದ್ದು, ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಯಾಗಿದೆ.

‘ಕಳೆದ ಅಕ್ಟೋಬರ್‌ನಲ್ಲಿ ಆಧಾರ್ ಭದ್ರತಾ ಉಲ್ಲಂಘನೆಯನ್ನು ಮೊದಲು ಪತ್ತೆಹಚ್ಚಲಾಯಿತು. ಸೂಕ್ಷ್ಮ ಮಾಹಿತಿಗಳನ್ನು ಅಕ್ರಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಲು ನೀಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

‘ದೇಶದಲ್ಲಿನ ದತ್ತಾಂಶ ಸೋರಿಕೆಯ ‘ಅತಿದೊಡ್ಡ’ ಪ್ರಕರಣ ಇದಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಿಂದ 81.5 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸೋರಿಕೆಯನ್ನು ಆರಂಭದಲ್ಲಿ ಅಮೆರಿಕದ ಸೈಬರ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆ ರೆಸೆಕ್ಯುರಿಟಿ ಗಮನಿಸಿದೆ’ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಸೈಬರ್ ಸೆಕ್ಯುರಿಟಿ ಕಂಪನಿಯಿಂದ ಡೇಟಾ ಸೋರಿಕೆ ಎಚ್ಚರಿಕೆಯ ನಂತರ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಸಮಗ್ರತೆಯ ಸಮಸ್ಯೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ನಾಗರಿಕರ ಸೂಕ್ಷ್ಮ ಮಾಹಿತಿಗಳ ಬಹಿರಂಗಪಡಿಸುವಿಕೆಯು ಆತಂಕಕಾರಿಯಾಗಿದ್ದು, ಸುರಕ್ಷತೆ ಮತ್ತು ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಟ್ಯಾಗೋರ್ ಹೇಳಿದ್ದಾರೆ.

‘ಆಧಾರ್ ಸಂಖ್ಯೆಗಳು ಮತ್ತು ಪಾಸ್‌ಪೋರ್ಟ್ ವಿವರಗಳು ಸೇರಿದಂತೆ 815 ಮಿಲಿಯನ್ ಭಾರತೀಯ ನಾಗರಿಕರ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಮಾರಿಕೊಳ್ಳಲಾಗಿದೆ. ಈ ಆತಂಕಕಾರಿ ಬಹಿರಂಗಪಡಿಸುವಿಕೆಯು ನಮ್ಮ ನಾಗರಿಕರ ಸುರಕ್ಷತೆ ಮತ್ತು ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಕಾಂಗ್ರೆಸ್ ಸಂಸದ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

‘ಈ ಡೇಟಾವನ್ನು ಕೇವಲ $80,000 ಗೆ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವು ಗೌಪ್ಯತೆಯ ಗಂಭೀರ ಉಲ್ಲಂಘನೆ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಇನ್ನೂ ಹೆಚ್ಚು ಗೊಂದಲದ ಸಂಗತಿಯೆಂದರೆ, ಡೇಟಾವು ಮಾನ್ಯವಾಗಿರುವಂತೆ ತೋರುತ್ತಿದ್ದು, ನಮ್ಮ ಡೇಟಾ ಸಂರಕ್ಷಣಾ ಕ್ರಮಗಳಲ್ಲಿ ಸರ್ಕಾರದ ಗಮನಾರ್ಹ ಲೋಪವನ್ನು ಸೂಚಿಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ‘ಹಲಾಲ್ ಮಾಂಸ ಸೇವಿಸುವ ಮುಸ್ಲಿಮರನ್ನು ಮೆಚ್ಚುತ್ತೇನೆ; ಹಿಂದೂಗಳು ಧಾರ್ಮಿಕ ಬದ್ಧತೆ ಪ್ರದರ್ಶಿಸಿ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...