Homeಮುಖಪುಟಪಾಕಿಸ್ತಾನಕ್ಕೆ ಧಿಕ್ಕಾರ ಕೂಗುವಂತೆ ಒತ್ತಾಯಿಸಿ ಹಲ್ಲೆ: ಬಂಧಿತ ದೆಹಲಿ ಗಲಭೆಯಲ್ಲೂ ಆರೋಪಿ!

ಪಾಕಿಸ್ತಾನಕ್ಕೆ ಧಿಕ್ಕಾರ ಕೂಗುವಂತೆ ಒತ್ತಾಯಿಸಿ ಹಲ್ಲೆ: ಬಂಧಿತ ದೆಹಲಿ ಗಲಭೆಯಲ್ಲೂ ಆರೋಪಿ!

- Advertisement -
- Advertisement -

ದೆಹಲಿಯಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ “ಪಾಕಿಸ್ತಾನ್ ಮುರ್ದಾಬಾದ್” ಎಂದು ಹೇಳಲು ಒತ್ತಾಯಿಸುತ್ತಾ ಥಳಿಸುತ್ತಿರುವ ಅಘಾತಕಾರಿ ದೃಶ್ಯ ವೈರಲ್ ಆಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವೈರಲ್‌‌ ಕ್ಲಿಪ್ಪಿನಲ್ಲಿ ಇರುವ ಆರೋಪಿ ಅಜಯ್ ಗೋಸ್ವಾಮಿಯು ಇನ್ನೊಬ್ಬ ವ್ಯಕ್ತಿಯನ್ನು ಥಳಿಸುವುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಆರೋಪಿ ಇನ್ನೊಬ್ಬ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಹಾಕಿ, “ಜೋರ್ ಸೆ ಬೋಲ್. ಹಿಂದೂಸ್ತಾನ್ ಜಿಂದಾಬಾದ್ ಪಾಕಿಸ್ತಾನ ಮುರ್ದಾಬಾದ್’’ ಎಂದು ಅರಚುತ್ತಿದ್ದಾನೆ.

ಇದನ್ನೂ ಓದಿ: ನೀರು ನೆರಳಿಗೂ ಜಾತಿ ಅಂಟಿಸಿದ ನಮ್ಮ ಭವ್ಯ ಪರಂಪರೆ: ಪ್ರತಾಪ್ ಹುಣಸೂರು

ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಎನ್ನಲಾಗಿದೆ. ವಿಡಿಯೊ ಮಾಡುತ್ತಿರುವ ವ್ಯಕ್ತಿಗಳು ಕೂಡಾ ಥಳಿಸಲ್ಪಟ್ಟ ವ್ಯಕ್ತಿಯನ್ನು ಬೈಯುತ್ತಿರುವುದನ್ನು ಕೇಳಬಹುದಾಗಿದೆ. “ಅಸದುದ್ದೀನ್ ಒವೈಸಿ ಮುರ್ದಾಬಾದ್” ಎಂದು ಹೇಳಲೂ ಅವರು ಒತ್ತಾಯಿಸುತ್ತಾರೆ. ಓವೈಸಿ ಲೋಕಸಭಾ ಸಂಸದರಾಗಿದ್ದು, ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹದುಲ್ ಮುಸ್ಲೀಮೀನ್ ಅಧ್ಯಕ್ಷರಾಗಿದ್ದಾರೆ.

ಘಟನೆಯ ಪೊಲೀಸ್ ಉಪ ಆಯುಕ್ತ (ಈಶಾನ್ಯ) ಸಂಜಯ್ ಕುಮಾರ್ ಸೈನ್ ಟ್ವೀಟ್ ಮಾಡಿದ್ದು, “ಖಾಜೂರಿ ಖಾಸ್ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ. ಘಟನೆ ಗಮನಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’’ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದ ದೆಹಲಿ ಗಲಭೆ ಪ್ರಕರಣದಲ್ಲಿ ಅಜಯ್ ಗೋಸ್ವಾಮಿ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದ್ದು, ಈಗ ಜಾಮೀನಿನ ಮೆಲೆ ಹೊರಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಜನ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಗದ್ದಲ, ವಿರೋಧಗಳ ನಡುವೆ ರಾಜ್ಯಸಭೆಯಲ್ಲೂ ದೆಹಲಿ ಮಸೂದೆ ಅಂಗೀಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...