ಫ್ಯಾಕ್ಟ್‌ಚೆಕ್: ಮಮತಾ ದರ್ಗಾಕ್ಕೆ ರಹಸ್ಯ ಭೇಟಿ ನೀಡಿಲ್ಲ, ಮಾಧ್ಯಮದ ಸಮ್ಮುಖದಲ್ಲೇ ಭೇಟಿ
PC: altnews

ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು, ತಪ್ಪು ಮಾಹಿತಿಗಳು ದಂಡಿದಂಡಿಯಾಗಿ ಹರಿದು ಬರುತ್ತಿವೆ. ಇವುಗಳಲ್ಲಿ  ’ಮಮತಾ ಬ್ಯಾನರ್ಜಿಯವರು ಕದ್ದು ಮುಚ್ಚಿ ದರ್ಗಾಕ್ಕೆ ಹೋಗಿ ಬಂದರು’ ಎಂಬ ವೈರಲ್ ಸುದ್ದಿ ಬಂಗಾಳದಲ್ಲಿ ಹರಿದಾಡುತ್ತಿದೆ.

ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ಇರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಡಿಯೋ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಅಲ್ಲಾಹನ ಹೆಸರನ್ನು ಜಪಿಸುವುದನ್ನು ಜನರು ಪದೇ ಪದೇ ಕೇಳಬಹುದು. ಹಲವಾರು ಪೋಸ್ಟ್‌ಗಳು ಬ್ಯಾನರ್ಜಿ ಮುಸ್ಲಿಮರನ್ನು ಹಗಲು ಹೊತ್ತಿನಲ್ಲಿ ಭೇಟಿಯಾಗುತ್ತಿದ್ದರು, ಆದರೆ ಈಗ ರಾತ್ರಿಯ ಸಮಯದಲ್ಲಿ ಅವರನ್ನು ರಹಸ್ಯವಾಗಿ ಭೇಟಿ ಮಾಡುತ್ತಿದ್ದಾರಲ್ಲ ಎಂದು ಕೇಳಿ ಕುಹಕವಾಡಿದ್ದಾರೆ. ಹಿಂದೂಗಳನ್ನು ಮೋಸಗೊಳಿಸಲು ಇದು ಮಮತಾರ ತಂತ್ರ ಎಂದು ಆರೋಪಿಸಲಾಗುತ್ತಿದೆ.

ಮಮತಾ ಬ್ಯಾನರ್ಜಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುವ, ಈ ವಿಡಿಯೋ ಹಾಕಿರುವ ಟ್ವಿಟರ್ ಬಳಕೆದಾರ ಡಾ. ಸಂತೋಷ್ ವ್ಯಾಸ್ ಅವರ ಟ್ವೀಟ್  ಈ ವರದಿ ಮಾಡುವ ಹೊತ್ತಿಗೆ ಸುಮಾರು 8,000  ಜನರು ನೋಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧರಿಸಿರಲಿಲ್ಲ

 

ರಾಜೇಶ್ ಕೇಸರಿ ಎನ್ನುವವರೂ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

ಆಲ್ಟ್ ನ್ಯೂಸ್ ಕೀವರ್ಡ್ ಶೋಧವನ್ನು ನಡೆಸಿದಾಗ ದೊರೆತ ಮಾಹಿತಿಗಳಿವು: ಮಾರ್ಚ್ 9ರ ಎಬಿಪಿ ನ್ಯೂಸ್‌ನಲ್ಲಿ ಈ ಸ್ಟೋರಿಯಿದೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸುವ ಮೊದಲು ದೇವಾಲಯ ಮತ್ತು ದರ್ಗಾಕ್ಕೆ ಭೇಟಿ ನೀಡಿದ್ದರು ಎಂದು ಅದು ಹೇಳುತ್ತದೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ, ಅವರು ಹರಿ ದೇವಸ್ಥಾನದಲ್ಲಿ ಗೌರವ ಸಲ್ಲಿಸಿದರು ಮತ್ತು ನಂತರ ದುರ್ಗಾಕ್ಕೆ ಹೋದರು, ಅಲ್ಲಿ ಅವರು ಹೂವುಗಳನ್ನು ಅರ್ಪಿಸಿದರು. ಪಶ್ಚಿಮ ಬಂಗಾಳದ ಹಿಂದೂ-ಮುಸ್ಲಿಂ ಜನಸಂಖ್ಯೆಯ 70:30 ಅನುಪಾತವನ್ನು ಬಳಸಿಕೊಂಡು ಕೆಲವರು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗೆ ಮಾಡುವವರು ಎರಡೂ ಧರ್ಮಗಳ ಜನರನ್ನು ಪರಸ್ಪರ ವಿರುದ್ಧವಾಗಿ ಪ್ರಚೋದಿಸುವ ಮೂಲಕ ನಂದಿಗ್ರಾಮದ ಪವಿತ್ರ ಆಂದೋಲನವನ್ನು ದೂಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಗ್ರೇಟಾ ಥನ್‌ಬರ್ಗ್‌ಗೆ ಕಳಂಕ ತರಲು ಮತ್ತೆ ಚಾಲ್ತಿಗೆ ಬಂದ ಎಡಿಟೆಡ್ ಫೋಟೊ!

ಮಾರ್ಚ್ 9 ರಂದು, ಟೈಮ್ಸ್ ನೌ ನಂದಿಗ್ರಾಮದಲ್ಲಿ ನಾಮಪತ್ರ ಕುರಿತಾದ ವಿಡಿಯೋ ಪ್ರಸಾರ ಮಾಡಿ ಸ್ಟೋರಿ ಮಾಡಿದೆ. ಅದು ಮಮತಾ ಬ್ಯಾನರ್ಜಿಯ ದರ್ಗಾ ಭೇಟಿಯನ್ನು ಒಳಗೊಂಡಿದೆ. ಇಲ್ಲಿ, ನೀಲಿ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯನ್ನು ಹಿನ್ನೆಲೆಯಲ್ಲಿ ಕಾಣಬಹುದು. ಅವರು ವೈರಲ್ ಕ್ಲಿಪ್‌ನಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ, ಮಮತಾ ಎರಡರಲ್ಲೂ ಗುಲಾಬಿ ಸ್ಕಾರ್ಫ್ ಮತ್ತು ಬಿಳಿ ಮಾಸ್ಕ್ ಧರಿಸಿರುವುದನ್ನು ಗಮನಿಸಬಹುದು.

ಆಜ್ ತಕ್ ವಿಡಿಯೋ ಪ್ರಸಾರವು ದರ್ಗಾದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾದರ ನೀಡುವುದನ್ನು ತೋರಿಸುತ್ತದೆ.


ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸುವ ಮೊದಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಿದರು. ಮುಸ್ಲಿಂ ಪೂಜಾ ಸ್ಥಳಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ ಎಂಬ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಅವರು ದರ್ಗಾಕ್ಕೆ ಭೇಟಿ ನೀಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಆದರೆ, ಈ ಘಟನೆ ಸಂಪೂರ್ಣವಾಗಿ ಮಾಧ್ಯಮಗಳ ಕ್ಯಾಮೆರಾಗಳ ಎದುರೇ ನಡೆದಿದೆ ಮತ್ತು ಅವು ಸಹಜವಾದ ಸ್ಟೋರಿಗಳನ್ನು ಅಂದೇ ಮಾಡಿವೆ. ಇಲ್ಲಿ ರಹಸ್ಯ ಅನ್ನುವಂಥದ್ದೂ ಏನೇನೂ ಇಲ್ಲ.

(ಕೃಪೆ: ಅಲ್ಟ್ ನ್ಯೂಸ್)


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆಬ್ರವರಿ 14 ಪ್ರೇಮಿಗಳ ದಿನದಂದು ಅಲ್ಲ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here