Homeಕರ್ನಾಟಕಸಮಾಜವಾದಿ ಪ.ಮಲ್ಲೇಶ್‌ ಕುರಿತು ಅಡ್ಡಂಡ ಅವಹೇಳನ; ಮಾನಹಾನಿ ಪ್ರಕರಣ ದಾಖಲಿಸಲು ರೈತಸಂಘ ನಿರ್ಧಾರ

ಸಮಾಜವಾದಿ ಪ.ಮಲ್ಲೇಶ್‌ ಕುರಿತು ಅಡ್ಡಂಡ ಅವಹೇಳನ; ಮಾನಹಾನಿ ಪ್ರಕರಣ ದಾಖಲಿಸಲು ರೈತಸಂಘ ನಿರ್ಧಾರ

- Advertisement -
- Advertisement -

“ಉರಿಗೌಡ, ದೊಡ್ಡನಂಜೇಗೌಡ ಎಂಬ (ಕಾಲ್ಪನಿಕ) ಪಾತ್ರಗಳೇ ಟಿಪ್ಪುವನ್ನು ಕೊಂದಿದ್ದು” ಎಂದು ಪ್ರತಿಪಾದಿಸಿ ಟೀಕೆಗೆ ಒಳಗಾಗಿರುವ ರಂಗಾಯಣ ನಿರ್ದೇಶಕ, ‘ಟಿಪ್ಪು ನಿಜಕನಸುಗಳು’ ನಾಟಕದ ಸೃಷ್ಟಿಕರ್ತ ಅಡ್ಡಂಡ ಕಾರ್ಯಪ್ಪ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ.

ಕೆಲವು ತಿಂಗಳ ಹಿಂದೆ ನಿಧನರಾದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರ ವಿರುದ್ಧ ಇತ್ತೀಚೆಗೆ ಬಹಳ ಹಗುರವಾಗಿ ಮಾತನಾಡಿರುವ ಅಡ್ಡಂಡ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ರೈತ ಸಂಘ ಮುಂದಾಗಿದೆ.

ಈ ಕುರಿತು ಮೈಸೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಲಾಗಿದ್ದು, “ಹೋರಾಟಗಾರ ಪ.ಮಲ್ಲೇಶ್ ಅವರ ಕುರಿತು ಅಪಹಾಸ್ಯವಾಗಿ ಮಾತಾಡಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಾರದೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು” ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

“ಪ.ಮಲ್ಲೇಶ್ ಅವರು ಮರಣ ಹೊಂದಿದ್ದಾರೆ. ತೀರಿಹೋದವರ ಕುರಿತು ಕೇವಲವಾಗಿ ಮಾತಾಡಿರುವ ಅಡ್ಡಂಡ ಕಾರ್ಯಪ್ಪ ಸಂಸ್ಕೃತಿ ಹೀನ ವ್ಯಕ್ತಿತ್ವದವರು. ವಿಕೃತವಾದ ಆಲೋಚನೆ ಹಾಗೂ ಸಮಾಜ ಒಡೆಯುವ ನೀತಿ ಅಡ್ಡಂಡ ಹೊಂದಿದ್ದಾರೆ” ಎಂದು ಟೀಕಿಸಿದ್ದಾರೆ.

ವ್ಯಕ್ತಿ ಮೃತಪಟ್ಟ ವ್ಯಕ್ತಿಯ ಕುರಿತು ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತೆ ಯಾರಾದರೂ ನಡೆದುಕೊಂಡರೆ ಈ ದೇಶದ ಕಾನೂನಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಅವಕಾಶವಿದೆ. ವಾರದೊಳಗೆ ಅವರು ಕ್ಷಮೆ ಕೇಳದಿದ್ದರೆ ಸಾಮಾಜಿಕ ಹಿತಚಿಂತನೆಯ ದೃಷ್ಟಿಯಿಂದ ಮಾನನಷ್ಟ ಪ್ರಕರಣ ದಾಖಲಿಸುತ್ತೇವೆ. ಅಹಿಂಸಾತ್ಮಕ ಹೋರಾಟ ಮಾಡುತ್ತೇವೆ” ಎಂದು ಹೇಳಿದ್ದಾರೆ.

“ಮೈಸೂರಿಗೆ ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ಸಾಹುಕಾರ್ ಚೆನ್ನಯ್ಯ, ಯಶೋಧರ ದಾಸಪ್ಪ, ಪ್ರೊ.ನಂಜುಂಡಸ್ವಾಮಿ ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಮುಮದುವರಿದ ಭಾಗಿ ಇದ್ದವರು ಪ.ಮಲ್ಲೇಶ್‌. ಈ ಪರಂಪರೆಗೆ ಧಕ್ಕೆ ತರುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ರಂಗಾಯಣದಿಂದ ಎತ್ತಂಗಡಿ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನವನ್ನು ನವೆಂಬರ್‌ 19ರಂದು ಆಯೋಜಿಸಲಾಗಿತ್ತು. ಆ ವೇಳೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮತ್ತು ಉಪನಿರ್ದೇಶಕಿ ನಿರ್ಮಲಾ ಮಠಮತಿ ಅವರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.

ಈ ವೇಳೆ ಪ.ಮಲ್ಲೇಶ್ ಅವರ ಹೆಸರನ್ನು ಅನವಶ್ಯಕವಾಗಿ ಪ್ರಸ್ತಾಪಿಸಿದ ಕಾರ್ಯಪ್ಪ, “ರಂಗಾಯಣಕ್ಕೆ ಯಾವ ಅತಿಥಿಯನ್ನು ಕರೆದರೂ ಅದಕ್ಕೂ ಗಲಾಟೆ. ಪಾಪ ಒಬ್ಬ ಸ್ಪಾನ್ಸರ್‌ (ಪ್ರಾಯೋಜಕರು) ಇದ್ದರು. ಅವರು ಸತ್ತು ಹೋದರು. ಪಾಪ ಪ.ಮಲ್ಲೇಶ್ ಅಂಥ ಅವರ ಹೆಸರು. ಚಳವಳಿಗಾರರಿಗೆ ಸ್ಪಾನ್ಸರ್‌. ಶಾಮಿಯಾನಬೇಕು, ಟೀ ಬೇಕು, ಸಂಜೆ ಹೋಗುವಾಗ ಸಕಲ ತೀರ್ಥಗಳನ್ನು ಸೇವಿಸುವವರಿಗೆ ಅದೂ ಬೇಕು. ಇದನ್ನೆಲ್ಲ ಅವರು ಕೊಡ್ತಾ ಇದ್ದರು. ಅವರು ಸತ್ತು ಹೋದರು. ಇನ್ನೊಂದು ಎಡಪಂಥೀಯ ಗುಂಪು ನಿತ್ಯ ಇದನ್ನೇ ಕಾಯಕ ಮಾಡಿಕೊಂಡಿತ್ತು. ಚಳವಳಿ, ಚಳವಳಿ… ಇದೆಲ್ಲದರ ನಡುವೆ ಯಶಸ್ವಿಯಾಗಿ ನಾಟಕ ಮಾಡಿಯೇ ತೀರಿದ್ದೇನೆ” ಎಂದಿದ್ದರು.

ಸಮಾಜವಾದಿ ಪ.ಮಲ್ಲೇಶ್‌ ಅವರ ಕುರಿತು ಅಡ್ಡಂಡ ಕಾರ್ಯಪ್ಪ ಹಗುರವಾಗಿ ಮಾತನಾಡಿರುವುದು ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿಯಾಗಿದೆ.

ರಾಹುಲ್‌ ಅನರ್ಹತೆ ಸಮರ್ಥನೀಯವಲ್ಲ: ಬಡಗಲಪುರ ನಾಗೇಂದ್ರ

“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನ ಅನರ್ಹ ಕಾನೂನಿನ ಪ್ರಕಾರವೇ ಸಮರ್ಥನೀಯವಲ್ಲ. ಪ್ರಜಾಪ್ರಭುತ್ವದ ಅಂತಃಸತ್ವವನ್ನು ಅಡಗಿಸುವ ತೀರ್ಮಾನವಿದು. ಇದರ ವಿರುದ್ಧ ದೇಶದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಬೇಕು” ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಶಿಸಿದರು.

ಕೆಳಗಿನ ನ್ಯಾಯಾಲಯಗಳು ತೀರ್ಪು ಅಂತಿಮವಲ್ಲ. ಮುಂದಿನ ಕೋರ್ಟ್‌ಗಳಲ್ಲಿ ಅದನ್ನು ಪ್ರಶ್ನೆ ಮಾಡಬೇಕು. ಹಾಗೆಯೇ ಯಾವುದೇ ಕ್ರಮಗಳು ಪಾರದರ್ಶಕ ಮತ್ತು ಜನ ಒಪ್ಪುವಂತಿರಬೇಕು. ತೀರ್ಪಿಗೂ ಮುನ್ನ ನ್ಯಾಯಾಧೀಶರು ವ್ಯಕ್ತಿಯ ನಡತೆ, ಆ ಮಾತುಗಳು ಹಿಂದಿನ ಉದ್ದೇಶ ಏನು ಎಂಬುದನ್ನೆಲ್ಲ ಪರಿಶೀಲನೆ ಮಾಡುತ್ತಾರೆ. ಈ ಪ್ರಕರಣಗಳಲ್ಲಿ ಆ ಪ್ರಕ್ರಿಯೆ ನಡೆದಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಲ್ಲ: ಅಡ್ಡಂಡ ಕಾರ್ಯಪ್ಪ

ದಾಖಲಾದ 1 ಲಕ್ಷ ಮಾನನಷ್ಟ ಪ್ರಕರಣಗಳಲ್ಲಿ 5 ಜನರಿಗೆ ಶಿಕ್ಷೆಯಾದರೆ ಹೆಚ್ಚು. ಇಂತಹ ಪ್ರಕರಣ ದಾಖಲಿಸುವಂತಿದ್ದರೆ ಲಂಕೇಶ್, ಎ.ಕೆ.ಸುಬ್ಬಯ್ಯ, ಪ್ರೊ.ನಂಜುಂಡಸ್ವಾಮಿ ಸಾವಿರ ಸಲ ಜೈಲಿಗೆ ಹೋಗಬೇಕಿತ್ತು. ರಾಹುಲ್ ಅಭಿವ್ಯಕ್ತಿ ದಮನ ಮುಂದೆ ನಮ್ಮೆಲ್ಲರಿಗೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮೀಸಲಾತಿ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ನ್ಯಾಯವಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ಮೀಸಲಾತಿ ಸಾಂವಿಧಾನಿಕ ಹಕ್ಕು. ಬೇರೆ ಬೇರೆ ಸಮಾಜಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಮೀಸಲಾತಿ ಕೊಡಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ವೋದಯ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಅವರು ಮಾತನಾಡಿ, “ಅಡ್ಡಂಡ ಕಾರ್ಯಪ್ಪ ನಾನು ಹೇಳುವುದೇ ಸತ್ಯ. ಅದನ್ನು ಎಲ್ಲರೂ ಒಪ್ಪಬೇಕೆಂದು ಒತ್ತಾಯಿಸುವುದು ದಾಷ್ಟ್ಯತನ. ಇವರ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ ಅನಿಸುತ್ತದೆ. ಇವರಿಗೆ ಬುದ್ಧಿ ಕಲಿಸುವ ಅಗತ್ಯವಿದೆ” ಎಂದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ನೇತ್ರಾವತಿ, ಮಹೇಶ್ ಮಂಡಕಳ್ಳಿ, ಪಿ.ಮರಂಕಯ್ಯ, ರಾಘವೇಂದ್ರ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...