Homeಕರ್ನಾಟಕನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಲ್ಲ: ಅಡ್ಡಂಡ ಕಾರ್ಯಪ್ಪ

ನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಲ್ಲ: ಅಡ್ಡಂಡ ಕಾರ್ಯಪ್ಪ

- Advertisement -
- Advertisement -

ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳು ಅವರು ಇದ್ದರು ಎನ್ನುವುದಕ್ಕೆ ಆಧಾರವಿಲ್ಲ. ಹಾಗಾಗಿ ಈ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಅವರು ಹೇಳಿದ್ದರು. ಆದರೆ ಇದೀಗ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸ್ವಾಮೀಜಿ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ್ದಾರೆ.

ಕನ್ನಡದ ಖಾಸಗಿ ಸುದ್ದಿವಾಹಿನಿಯ ಪ್ರತಿನಿಧಿಯೊಬ್ಬರ ಜೊತೆ ಉರಿಗೌಡ, ನಂಜೇಗೌಡ ವಿವಾದದ ಬಗ್ಗೆ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ”ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

”ಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ, ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತು. ಆದರೆ ಶ್ರೀಗಳು ಕುಮಾರಸ್ವಾಮಿ ಪರವಾಗಿ ನಿಂತಿದ್ದಾರೆ ಎಂದು ‘ಟಿಪ್ಪು ಕಂಡ ನಿಜ ಕನಸುಗಳು’ ಕೃತಿಯ ಲೇಖಕ ಅಡ್ಡಂಡ ಕಾರ್ಯಪ್ಪ ಪರೋಕ್ಷವಾಗಿ  ಹೇಳಿದ್ದಾರೆ.

”ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಂತಹ ಸಮಯದಲ್ಲಿ ಸ್ವಾಮೀಜಿಗಳು,  ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿದ್ದರು. ಆಗಾಗ ಡಿ.ಕೆ.ಶಿವಕುಮಾ‌ರ್ ಅವರನ್ನ ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಎಂದು ಹೇಳಿದ್ದರು” ಎಂದು ಸ್ವಾಮೀಜಿ ವಿರುದ್ಧ ಅಡ್ಡಂಡ ಕಾರ್ಯಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಿಲ್ಲದ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ; ಸ್ವಾಮೀಜಿ ಮಾತಿಗೆ ಕವಡೆ ಕಿಮ್ಮತ್ತೂ ನೀಡದ ರಂಗಾಯಣ

”ಸ್ವಾಮೀಜಿಗೆ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಅವರು ಬೇಕಿಲ್ಲ” ಎಂದು ಅಡ್ಡಂಡ ಕಾರ್ಯಪ್ಪ  ಹೇಳಿದ್ದಾರೆ.

ಇತ್ತೀಚೆಗೆ ಸಿ.ಟಿ.ರವಿ, ಅಶ್ವತ್ಥ ನಾರಾಯಣ ಹೋದಕಡೆಯಲ್ಲೆಲ್ಲಾ ಉರಿಗೌಡ, ನಂಜೇಗೌಡ ಕಥೆಯನ್ನೇ ಹೇಳುತ್ತಿದ್ದರು. ಮತ್ತೊಂದು ಕಡೆ ಸಚಿವ ಮುನಿರತ್ನ ಅವರು ”ಉರಿಗೌಡ-ನಂಜೇಗೌಡ”(1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಸಚಿವ ಮುನಿರತ್ನ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದರು.

ಆ ಬಳಿಕ ಉರಿಗೌಡ, ನಂಜೇಗೌಡ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಮುನಿರತ್ನ ಅವರನ್ನು ಕರೆದು ಚಿತ್ರ ನಿರ್ಮಾಣ ಮಾಡದಂತೆ ಬುದ್ದಿ ಹೇಳಿ ಕಳುಹಿಸಿದ್ದರು. ಈ ವೇಳೆ ಸ್ವಾಮೀಜಿ, ”ಯಾರೂ ಕೂಡಾ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಬಾರದು” ಎಂದು ಮಾಧ್ಯಮ ಹೇಳಿಕೆಯನ್ನೂ ನೀಡಿದ್ದರು.

ಶ್ರೀಗಳ ಹೇಳಿಕೆ:

”ಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ” ಎಂದಿದ್ದಾರೆ.

”ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದು” ಎಂದು ಸ್ವಾಮೀಜಿ ಎಚ್ಚರಿಸಿದ್ದರು.

ಇನ್ನು ಮುಂದುವರಿದು, ”ಯಾವ ವಿಚಾರ ಪ್ರಸ್ತಾಪ ಆಗುತ್ತಿದೆಯೋ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉರಿಗೌಡರು ಮತ್ತು ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ, ನಮೂದು ಆಗಿರುವಂಥ ಅಥವಾ ಶಾಸನಗಳು ಸಿಕ್ಕದ್ದೇ ಆದರೆ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ ಸರಿಯಾದ ರೀತಿಯಲ್ಲಿ ತಂದೊಪ್ಪಿಸಿದ್ದೇ ಆದಲ್ಲಿ ಎಲ್ಲವನ್ನೂ ಕೂಡಾ ಕ್ರೋಡೀಕರಿಸಿ, ಯಾಕೆಂದರೆ ಶಾಸನ ತಜ್ಞರು ಇರುತ್ತಾರೆ, ಕಾರ್ಬನ್‌ ಡೇಟಿಂಗ್ ಟೆಕ್ನಾಲಜಿ ನಮ್ಮಲ್ಲಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ಐತಿಹಾಸಿಕ ಶ್ರೇಷ್ಠ ವಿಮರ್ಶಕರು ಇದ್ದಾರೆ, ಇವರೆಲ್ಲರನ್ನೂ ಇಟ್ಟುಕೊಂಡು ತಂದುಕೊಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒರೆಗೆ ಹಚ್ಚಿ ನಂತರದಲ್ಲಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ” ಎಂದು ಹೇಳಿದ್ದರು.

”ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಒಂದು ಗೊಂದಲಕ್ಕೆ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಕೂಡಾ ನಮ್ಮ ಆಗ್ರಹ” ಎಂದು ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಬಡವರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...