Homeಮುಖಪುಟಕೋಮು ಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡರು ಕಳೆದುಹೋಗಿದ್ದಾರೆ, ಹುಡುಕಿ ಕೊಡಿ: ಕಾಂಗ್ರೆಸ್

ಕೋಮು ಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡರು ಕಳೆದುಹೋಗಿದ್ದಾರೆ, ಹುಡುಕಿ ಕೊಡಿ: ಕಾಂಗ್ರೆಸ್

- Advertisement -
- Advertisement -

ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌.ಡಿ ‘ದೇವೇಗೌಡರು ಕಳೆದು ಹೋಗಿದ್ದಾರೆ, ಹುಡುಕಿ ಕೊಡಿ’ ಎಂದು ರಾಜ್ಯ ಕಾಂಗ್ರೆಸ್ ಕಾಳೆದಿದೆ. ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾದ ದೇವೇಗೌಡರ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ಲೇವಡಿ ಮಾಡಿದೆ.

ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದೇನು?

25 ವರ್ಷಗಳ ಹಿಂದೆ ಯಾರು ಏನು ಹೇಳಿದ್ದರು? ಯಾವ ಪ್ರಮುಖ ಘಟನೆಗಳು ನಡೆದಿತ್ತು ಎಂಬುವುದನ್ನು ಪತ್ರಿಕೆ ಪ್ರಕಟಿಸುತ್ತಿದೆ. ಇಂದು (ಜ.9) 25 ವರ್ಷಗಳ ಹಿಂದೆ ದೇವೇಗೌಡರು ನೀಡಿದ್ದ ಪ್ರಮುಖ ಹೇಳಿಕೆಯೊಂದನ್ನು ಪ್ರಕಟಿಸಿದೆ.

“ಆರೆಸ್ಸೆಸ್, ವಿಹೆಚ್‌ಪಿ, ಭಜರಂಗದಳ ಮತ್ತು ಶಿವಸೇನೆಯಂತಹ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಆಗ್ರಹಿಸಿದ್ದಾರೆ. ದಕ್ಷಿಣ ಗುಜರಾತ್‌ನಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗೆ ಈ ಸಂಘಟನೆಗಳು ಕಾರಣ ಎಂದು ಅವರು ಆರೋಪಿಸಿದ್ದಾರೆ. ಈ ಸಂಘಟನೆಗಳು ರಾಷ್ಟ್ರದ ವಿವಿಧ ಭಾಗಗಳಲ್ಲಿ ಧರ್ಮಾದಂತೆಯನ್ನು ಹಬ್ಬಿಸುತ್ತಿವೆ. ಅವುಗಳ ಚಟುವಟಿಕೆಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಮೋದ್ ಮಹಾಜನ್ ಬೆಂಬಲ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ” ಎಂಬ ದೇವೇಗೌಡರ ಹೇಳಿಕೆಯನ್ನು ಪತ್ರಿಕೆ ಸ್ಮರಿಸಿದೆ. ಇದನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ಕಾಳೆಲೆದಿದೆ.

ಪ್ರಸ್ತುತ ದೇವೇಗೌಡರ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಕೊಂಡಿದೆ. ಅಲ್ಲದೆ, ರಾಮ ಮಂದಿರರ ವಿಚಾರವಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಬಿಜೆಪಿಗರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡುತ್ತಿದ್ದಾರೆ.

ಈ ಹಿನ್ನೆಲೆ, ಹಳೆಯ ದೇವೇಗೌಡರು ಕಳೆದು ಹೋಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. “25 ವರ್ಷಗಳ ಹಿಂದೆ ಕೋಮು ಶಕ್ತಿಗಳ ವಿರುದ್ಧ ತೊಡೆ ತಟ್ಟಿದ್ದ ಅಂದಿನ ದೇವೇಗೌಡರು ಈಗ ಕಳೆದುಹೋಗಿದ್ದಾರೆ! ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ವಿಧ್ವಂಸಕ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದು ದೇವೇಗೌಡರಿಗೆ ನೆನಪಿದೆಯೇ? ಈಗ ಅದೇ ವಿಚ್ಛಿದ್ರಕಾರಿ ಸಂಘಟನೆಗಳೊಂದಿಗೆ ಕೈಜೋಡಿಸಿದ್ದು ದೇವೇಗೌಡರ ದುರಂತವೋ, ಅವರನ್ನು ಸೆಕ್ಯುಲರ್ ಎಂದು ನಂಬಿದ್ದವರ ದುರಂತವೋ ತಿಳಿಯದು!” ಎಂದು ಕಾಂಗ್ರೆಸ್ ಹೇಳಿದೆ.

ರಾಮ ಮಂದಿರ ಉದ್ಘಾಟನೆಗೆ ದೇವೇಗೌಡರಿಗೆ ಆಹ್ವಾನ :

ಅಯೋಧ್ಯೆ ರಾಮ ಮಂದಿರಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಲಾಗಿದೆ. ರಾಮ ಮಂದಿರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್​.ಮಿಶ್ರಾ, ಆರ್‌ಎಸ್‌ಎಸ್​ ಹಿರಿಯ ನಾಯಕ ರಾಮ್​ ಲಾಲ್ ಹಾಗೂ ವಿಹೆಚ್‌ಪಿಯ ಹಿರಿಯ ನಾಯಕ ಅಲೋಕ್​ ಕುಮಾರ್​, ಡಿಸೆಂಬರ್ 19,2023ರಂದು ದೆಹಲಿಯ ದೇವೇಗೌಡರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದ್ದರು. ಈ ವಿಚಾರವನ್ನು ಟ್ವೀಟ್ ಮೂಲಕ ದೇವೇಗೌಡರು ಹಂಚಿಕೊಂಡಿದ್ದರು. “ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲಾಗಿದೆ. ಆಹ್ವಾನ ಸ್ವೀಕರಿಸಿದ ನನಗೆ ತುಂಬಾ ಸಂತೋಷ ಆಗಿದೆ” ಎಂದು ಟ್ವಿಟರ್​ನಲ್ಲಿ ದೇವೇಗೌಡರು ಬರೆದುಕೊಂಡಿದ್ದರು.

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಜಾತ್ಯತೀತ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದ ದೇವೇಗೌಡರು, ಪ್ರಸ್ತುತ ಕೇಸರಿ ಪಾಳೆಯದ ಮಿತ್ರರಾಗಿ ರೂಪಾಂತರಗೊಂಡಿದ್ದಾರೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಲು ಇಚ್ಛಿಸುತ್ತೇನೆ ಎಂದು ಹೇಳುತ್ತಿದ್ದ ಗೌಡರು, ಈಗ ಅಂತಹ ಆಲೋಚನೆಗಳನ್ನು ತಮ್ಮೊಳಗೆ ಅದುಮಿ ಇಟ್ಟುಕೊಳ್ಳಬೇಕಾಗಬಹುದು.

ಇದನ್ನೂ ಓದಿ : ಜ.22ರಂದು ದೇವಸ್ಥಾನಗಳಲ್ಲಿ ‘ವಿಶೇಷ’ ಪೂಜೆಗೆ ಸೂಚನೆ; ‘ಮೃದು ಹಿಂದುತ್ವ’ದ ಮೊರೆ ಹೋಯ್ತಾ ಕಾಂಗ್ರೆಸ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...