Homeಮುಖಪುಟ'ಧಂಗರ್' ಮೀಸಲಾತಿ ಕುರಿತ ಮಾತುಕತೆ ವಿಫಲ: ಪ್ರತಿಭಟನೆ ತೀವ್ರಗೊಳಿಸಲು ಮುಂದಾದ ಸಮುದಾಯ

‘ಧಂಗರ್’ ಮೀಸಲಾತಿ ಕುರಿತ ಮಾತುಕತೆ ವಿಫಲ: ಪ್ರತಿಭಟನೆ ತೀವ್ರಗೊಳಿಸಲು ಮುಂದಾದ ಸಮುದಾಯ

- Advertisement -
- Advertisement -

ಧಂಗರ್ ಮೀಸಲಾತಿ ಕುರಿತು ಗುರುವಾರ ನಡೆದ ಮಾತುಕತೆ ವಿಫಲವಾಗಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಸರ್ಕಾರವು ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಸಮಯವನ್ನು ಕೋರಿದರೆ, ಧಂಗರ್ ಸಮುದಾಯದ ಕಾರ್ಯಕರ್ತರು ಸರ್ಕಾರಕ್ಕೆ ಹೆಚ್ಚಿನ ಸಮಯವನ್ನು ನೀಡಲು ಸಿದ್ಧರಿಲ್ಲ ಮತ್ತು ತಮ್ಮ ಪ್ರತಿಭಟನೆ ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

ಧಂಗರ್ ಸಮುದಾಯವು ‘ಪರಿಶಿಷ್ಟ ಪಂಗಡ’ (ST) ಪಟ್ಟಿಯ ಭಾಗವಾಗಿಲ್ಲ. ಬದಲಾಗಿ ‘ಧಂಗಡ್’ ಎಂದು ಪಟ್ಟಿಯಲ್ಲಿದೆ. ಮಹಾರಾಷ್ಟ್ರದ ಧಂಗರ್ ಸಮುದಾಯದ ಮುಖಂಡರು ಹಲವಾರು ವರ್ಷಗಳಿಂದ ಮಹಾರಾಷ್ಟ್ರ ಸರಕಾರದ ಬಳಿ ‘ಧಂಗಡ್’ ಎಂಬ ಶೀರ್ಷಿಕೆಯ ಯಾವುದೇ ಸಮುದಾಯ ಇಲ್ಲ ಮತ್ತು ಪಟ್ಟಿಯಲ್ಲಿ ನಮೂದನ್ನು ತಪ್ಪಾಗಿ ಬರೆಯಲಾಗಿದೆ ಎಂದು ಹೇಳಿದ್ದರು.

ಸರ್ಕಾರ ಅದನ್ನು ಸರಿಪಡಿಸಿ ‘ಧಂಗಡ್’ ಬದಲು ‘ಧಂಗರ್’ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ವಿಚಾರವಾಗಿ ಈ ಮೊದಲು ಪ್ರತಿಭಟನೆ ನಡೆದಿತ್ತು. ಈ ವೇಳೆ ಸಮುದಾಯಕ್ಕೆ ಸರಕಾರದಿಂದ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಗಿತ್ತು. ಆದರೆ ಮರಾಠ ಮೀಸಲಾತಿಗೆ ನಡೆದ ಹೋರಾಟದ ವಿಚಾರದಲ್ಲಿ ಸರಕಾರ ತ್ವರಿತ ಕ್ರಮಕೊಂಡ ನಂತರ ಧಂಗರ್ ಸಮುದಾಯವೂ ತಮ್ಮ ಪ್ರತಿಭಟನೆ ಪುನರಾರಂಭಿಸಿದೆ.

ಅಹ್ಮದ್‌ನಗರ ಜಿಲ್ಲೆಯ ಚೋಂಡಿಯಲ್ಲಿ ಕಳೆದ ಆರು ದಿನಗಳಿಂದ ಹಿರಿಯ ಧಂಗರ್ ನಾಯಕ ಸುರೇಶ್ ಬಂಡಗರ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಮತ್ತು ಇತರ ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮುಂಬೈನ ಸಹ್ಯಾದ್ರಿ ರಾಜ್ಯ ಅತಿಥಿಗೃಹದಲ್ಲಿ ಸಭೆ ನಡೆದಿದೆ. ಆದರೆ ಸಭೆಯಲ್ಲಿ  ಪೂರಕ ಬೆಳವಣಿಗೆ ನಡೆದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಸರ್ಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸಮಸ್ಯೆಯ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ. ಎರಡು ದಿನಗಳಲ್ಲಿ ಸಮಿತಿಯನ್ನು ರಚಿಸಲಾಗುವುದು ಮತ್ತು ಸರ್ಕಾರ ಹೇಳಿದಂತೆ ಎರಡು ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಸಮಿತಿಯು ರಾಜ್ಯಗಳಲ್ಲಿ ಪ್ರವಾಸ ಮಾಡಿ ತನ್ನ ವರದಿಯನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದ್ದಾರೆ.

ಯಶವಂತ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ ದೊಡ್ತೊಳೆ ಮಾತನಾಡಿ,  ಮೂರು ತಿಂಗಳೊಳಗೆ ಅಧ್ಯಯನ ಮಾಡಿ ಸಮುದಾಯದ ಬೇಡಿಕೆಗಳಿಗೆ ನ್ಯಾಯ ಒದಗಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಇದು ಹೆಚ್ಚು ಸಮಯ ತೆಗೆದುಕೊಳ್ಳುವ  ಪ್ರಕ್ರಿಯೆ. ಆದ್ದರಿಂದ ನಾವು ಉಪವಾಸವನ್ನು ಮುಂದುವರಿಸಲು ಮತ್ತು ನಮ್ಮ ಬೇಡಿಕೆಗಳ ಕಡೆಗೆ  ಆಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಕೇವಲ ಸಕಾರಾತ್ಮಕತೆ ಮತ್ತು ಸಿಹಿ ಮಾತುಗಳು ಕಳೆದ 70 ವರ್ಷಗಳಿಂದ ಧಂಗರ್ ಸಮುದಾಯಕ್ಕೆ ನ್ಯಾಯವನ್ನು ತಂದುಕೊಟ್ಟಿಲ್ಲ. ಇಂದು ಅದೇ ಪುನರಾವರ್ತನೆಯಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಸಕಾರಾತ್ಮಕವಾಗಿ ನೋಡುತ್ತಿದೆ ಆದರೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಆಮರಣಾಂತ ಉಪವಾಸ ನಡೆಯುತ್ತಿದ್ದು, ಅದನ್ನು ತೀವ್ರಗೊಳಿಸುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಧಂಗರ್ ಸಮುದಾಯದ ವಿರುದ್ಧವಾಗಿದೆ. ಅವರು ನಮ್ಮ ಸಮುದಾಯಕ್ಕೆ ಕೋಟಾ ನೀಡಲು ಬಯಸುವುದಿಲ್ಲ. ನಾನು ಕಳೆದ 10 ವರ್ಷಗಳಿಂದ ಇದನ್ನು ನೋಡುತ್ತಿದ್ದೇನೆ. ನನ್ನ ಸಮುದಾಯಕ್ಕಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ಆದರೆ ನಾನು ಹೋರಾಟವನ್ನು ನಿಲ್ಲಿಸುವುದಿಲ್ಲ, ನಾನು ಆಮರಣಾಂತ ಉಪವಾಸವನ್ನು ಮುಂದುವರಿಸುತ್ತೇನೆ ಎಂದು ಬಂಡಗರ್ ಅವರು ಹೇಳಿದ್ದಾರೆ.

ಇದನ್ನು ಓದಿ: NDA ಆಡಳಿತದ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ಸಿಎಂಗಳಿಲ್ಲ: ಡೆರೆಕ್ ಓಬ್ರಿಯಾನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...