HomeಮುಖಪುಟNDA ಆಡಳಿತದ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ಸಿಎಂಗಳಿಲ್ಲ: ಡೆರೆಕ್ ಓಬ್ರಿಯಾನ್

NDA ಆಡಳಿತದ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ಸಿಎಂಗಳಿಲ್ಲ: ಡೆರೆಕ್ ಓಬ್ರಿಯಾನ್

- Advertisement -
- Advertisement -

ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್‌ ಮಂಡನೆಯಾಗಿದ್ದು, ಬಿಲ್‌ ಕುರಿತ ಚರ್ಚೆಯ ವೇಳೆ ತೃಣಮೂಲ ಕಾಂಗ್ರೆಸ್‌ನ ಸಂಸದ ಡೆರೆಕ್ ಓಬ್ರಿಯಾನ್, ಮಹಿಳಾ ಮೀಸಲಾತಿ ಬಿಲ್‌ ಬಿಜೆಪಿಯ ಚುನಾವಣಾ ಗಿಮಿಕ್‌, ಎನ್‌ಡಿಎ ಆಡಳಿತದ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಿಎಂಗಳು ಇಲ್ಲ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಹಿಳಾ ಕೋಟಾ ಮಸೂದೆಯ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಸರ್ಕಾರವು 2024ರಲ್ಲಿ ಮಸೂದೆಯನ್ನು ತರಬೇಕು ಅಥವಾ ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿಯು ಮಹಿಳಾ ಸಬಲೀಕರಣದ ಬಗ್ಗೆ ಗಂಭೀರವಾಗಿಲ್ಲ. ಟಿಕೆಟ್ ನೀಡುವುದು ಬೇರೆ, ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವುದು ಇನ್ನೊಂದು ಎಂದು ಹೇಳಿದ್ದಾರೆ.

2021ರಲ್ಲಿ ಬಂಗಾಳ ವಿಧಾನಸಭಾ ಚುನಾವಣೆಗೆ ಮೊದಲು, ಹಣ, ಮಾದ್ಯಮ, ಭುಜಬಲ ಶಕ್ತಿಯನ್ನು ಬಳಸಿದರು, ಸ್ತ್ರೀದ್ವೇಷ ಮಾಡಿದರು ಮತ್ತು ಅವರನ್ನು ದೀದಿ ಓ ದೀದಿ ಎಂದು ಅಪಹಾಸ್ಯ ಮಾಡಿದರು. ಅವರು ಮಹಿಳೆಯಂತೆ ನಿಮಗೆ ಉತ್ತರವನ್ನು ನೀಡಿದ್ದಾರೆ ಎಂದು ಓಬ್ರಿಯಾನ್ ಬಂಗಾಳ ಚುನಾವಣೆಯ ವೇಳಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಬಂಗಾಳದಲ್ಲಿ ಚುನಾವಣೆ ಬಳಿಕ ಏನಾಯ್ತು? ಬಂಗಾಳದ ಆರೋಗ್ಯ ಸಚಿವಾಲಯ, ಹಣಕಾಸು ಸಚಿವಾಲಯ, ಭೂಮಿ, ಕೈಗಾರಿಕೆ, ವಾಣಿಜ್ಯ ಸಚಿವಾಲಯಗಳೆಲ್ಲವೂ ಮಹಿಳೆಯರ ನೇತೃತ್ವದಲ್ಲಿದೆ. 16 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಈವರೆಗೆ ಒಬ್ಬ ಮಹಿಳೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿಮಗೆ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಣ್ಣಿನ ಗುಣಗಳನ್ನು ಸಾಧಿಸಿದಾಗ ಪುರುಷರು “ದೇವರಾಗುತ್ತಾರೆ” ಮತ್ತು ಮಹಿಳೆಯರು ಪುರುಷ ಗುಣಗಳನ್ನು ಬೆಳೆಸಿಕೊಂಡಾಗ “ರಾಕ್ಷಸರು” ಆಗುತ್ತಾರೆ ಎಂದು ಹೇಳಿದ ಹೇಳಿಕೆಯನ್ನು ಉಲ್ಲೇಖಿಸಿದ ಡೆರೆಕ್ ಓಬ್ರಿಯಾನ್, ನೀವು ಬಿಲ್ಡಿಂಗ್‌ ಕಟ್ಟಬಹುದು, ಆದರೆ ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಿಸಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ: ಉತ್ತರಪ್ರದೇಶ: ಪೊಲೀಸರ ನಿರ್ಲಕ್ಷ್ಯ; ಮೂವರು ಆರೋಪಿಗಳು ಕಸ್ಟಡಿಯಿಂದ ಪರಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...