Homeಕರ್ನಾಟಕಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿ ವಿಸರ್ಜನೆ; ಬಗೆಹರಿಯಬೇಕಾಗಿರುವ ಮುಖ್ಯ ಪ್ರಶ್ನೆಗಳಿವು!

ಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿ ವಿಸರ್ಜನೆ; ಬಗೆಹರಿಯಬೇಕಾಗಿರುವ ಮುಖ್ಯ ಪ್ರಶ್ನೆಗಳಿವು!

- Advertisement -
- Advertisement -

ಪಠ್ಯಪುಸ್ತಕ ಮರು ಪರಿಷ್ಕರಣಾ ಕಾರ್ಯ ಮುಗಿದಿರುವುದರಿಂದ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ಸಮಿತಿ, ಪಠ್ಯ ಪುಸ್ತಕಗಳ ಕೇಸರೀಕರಣ ಮತ್ತು ಬ್ರಾಹ್ಮಣೀಕರಣವನ್ನು ಸಿಎಂ ಸಮರ್ಥಿಸಿಕೊಂಡಿದ್ದಾರೆ. ಶನಿವಾರ ಅದನ್ನು ಮತ್ತೇ ಪುನರುಚ್ಛರಿಸಿ, ಸಮಿತಿಯನ್ನು ರದ್ದು ಮಾಡಿಲ್ಲ, ವಿಸರ್ಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕವಿ, ಸಂಶೋಧಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದಿರುವ, “ಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿ ವಿಸರ್ಜನೆ; ಬಗೆ ಹರಿಯಬೇಕಾಗಿರುವ ಮುಖ್ಯ ಪ್ರಶ್ನೆಗಳಿವು!” ಎಂಬ ಲೇಖನ ನಾನುಗೌರಿ.ಕಾಂ ಓದುಗರಿಗಾಗಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಠ್ಯ ಪುಸ್ತಕ ಮರು ಪರಿಷ್ಕರಣಾ ಕಾರ್ಯ ಮುಗಿದಿರುವುದರಿಂದ ಸಮಿತಿಯನ್ನು ವಿಸರ್ಜನೆ ಮಾಡಿರುವ ಈ ಗಳಿಗೆಯಲ್ಲಿ ಬಗೆ ಹರಿಯಬೇಕಾಗಿರುವ ಮುಖ್ಯ ಪ್ರಶ್ನೆಗಳು:

  • ಶಾಲಾ-ಕಾಲೇಜುಗಳ ಹಂತದ ಪಠ್ಯ ಪುಸ್ತಕಗಳನ್ನು ರೂಪಿಸಲು ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದಿರುವ ವಿಕೃತ ಮನಸ್ಸಿನ ರೋಹಿತ್ ಚಕ್ರತೀರ್ಥ ಅವರನ್ನು ಯಾವ ಅರ್ಹತೆ ಅಥವಾ ಮಾನದಂಡಗಳನ್ನು ಅನುಸರಿಸಿ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಲಾಯಿತು?
  • ಪುಸ್ತಕ ರಚನಾ ಸಮಿತಿಯಲ್ಲಾಗಲೀ ಅಥವಾ ಪಠ್ಯಗಳ ಆಯ್ಕೆಯಲ್ಲಾಗಲೀ ಸಂವಿಧಾನದ ಶ್ರೇಷ್ಠ ಆಶಯವಾದ ಸಾಮಾಜಿಕ ನ್ಯಾಯ ಅನುಷ್ಠಾನಗೊಳ್ಳದೇ, ಕೇವಲ ಬ್ರಾಹ್ಮಣರ ಏಕಚಕ್ರಾಧಿಪತ್ಯ ಸ್ಥಾಪಿಸಿಕೊಂಡ ಬಗ್ಗೆ ಕಿಂಚಿತ್ ಸಾರ್ವಜನಿಕ ಲಜ್ಜೆ ಇಲ್ಲದಾಯಿತೇ?
  • ಬ್ರಾಹ್ಮಣಶಾಹಿಯ ಪಾರಮ್ಯವನ್ನು ಹೇರಲು ಅಗತ್ಯವಾದುದೆಲ್ಲವನ್ನೂ ಪಠ್ಯಪುಸ್ತಕಕ್ಕೆ ವ್ಯವಸ್ಥಿತವಾಗಿ ತುರುಕಲಾಗಿದ್ದು, ಅಂತಹ ಹೊಲಸು ಪಠ್ಯಪುಸ್ತಕವನ್ನು ಉಳಿಸಿಕೊಂಡು ಸಮಿತಿಯನ್ನು ಮಾತ್ರ ವಿಸರ್ಜಿಸಿರುವುದರ ಹಿಂದಿನ ಮರ್ಮವೇನು?
  • ಪಠ್ಯಪುಸ್ತಕವನ್ನು ಮತ್ತೆ ಪರಿಷ್ಕರಣೆ ಮಾಡಲು ಮುಕ್ತ ಮನಸ್ಸು ಹೊಂದಲಾಗಿದೆ ಎಂಬ ಕಣ್ಣೊರೆಸುವ ನಾಟಕವೇಕೆ?
  • ಬ್ರಾಹ್ಮಣಶಾಹಿಯ ಅರ್ಥಾತ್ ವೈದಿಕ ಧರ್ಮದ ವಿರುದ್ಧ ಬಂಡೆದ್ದು ಜಾತ್ಯತೀತ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರ ಬದುಕಿನ ಸತ್ಯ ಮತ್ತು ಆಶಯಗಳಿಗೆ ವಿರುದ್ಧವಾಗಿ ತಿರುಚಿ ಜನಿವಾರೀಕರಣ ಮಾಡಿರುವ ಪಾಠಗಳನ್ನು ಕೈಬಿಡುವ ಬಗ್ಗೆ ಪ್ರಸ್ತಾಪಿಸಿಲ್ಲ ಯಾಕೆ?
  • ಪಠ್ಯಪುಸ್ತಕ ರಚನೆ/ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಪ್ರಜಾಸತ್ತಾತ್ಮಕತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳದೇ ನಿಯಮ ಬಾಹಿರವಾಗಿ ರೂಪಿಸಿರುವ ಪಠ್ಯಪುಸ್ತಕ ಎಷ್ಟರಮಟ್ಟಿಗೆ ಸಂವಿಧಾನಪರವಾಗಿರಲು ಸಾಧ್ಯ?
  • ಪುಸ್ತಕ ವಾಪಸೀ ಪ್ರತಿರೋಧ ಒಡ್ಡುತ್ತಿರುವ ಲೇಖಕರ ಸ್ವಾತಂತ್ರ್ಯವನ್ನು ಪರಿಗಣಿಸದೆಯೇ ಅದೇ ಪರಿಷ್ಕೃತ ಪಠ್ಯವನ್ನು ಉಳಿಸಿಕೊಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾತ್ರವಲ್ಲದೇ ಸಾಂಸ್ಕೃತಿಕ ದಬ್ಬಾಳಿಕೆಯಲ್ಲವೇ?

ಇದನ್ನೂ ಓದಿ: ಪಠ್ಯ ಬ್ರಾಹ್ಮಣೀಕರಣದ ಬಗ್ಗೆ ಹೇಳದೆ ‘ಮೂಗಿಗೆ ತುಪ್ಪ’ ಸವರಿದ ಬೊಮ್ಮಾಯಿ ಪತ್ರಿಕಾ ಹೇಳಿಕೆ!

ಪಠ್ಯಪುಸ್ತಕ ರಚನಾ ಸಮಿತಿಗೆ ಅಧ್ಯಕ್ಷನಾಗುವ ಶೈಕ್ಷಣಿಕ ಅರ್ಹತೆ ಇಲ್ಲದಿರುವ ಕೇವಲ ಒಬ್ಬ ಟ್ಯೂಶನ್ ಮೇಷ್ಟ್ರಾಗಿದ್ದ ರೋಹಿತ್ ಚಕ್ರತೀರ್ಥ, ಕನ್ನಡ ಭಾಷಿಕರ ಮೇಲೆ ಹಿಂದಿ ಮತ್ತು ಸಂಸ್ಕೃತ ಭಾಷೆಯ ಹೇರಿಕೆಯನ್ನು ಪ್ರತಿಪಾದಿಸುತ್ತಿರುವ, ಬಸವಣ್ಣನವರಿಗೆ ಜನಿವಾರ ತೊಡಿಸುವುದಲ್ಲದೆ ಬಸವಣ್ಣನವರ ಚಿಂತನೆಗಳನ್ನು ಜನಿವಾರೀಕರಿಸಿದ, ಅಂಬೇಡ್ಕರ್ ಅವರ ವಿರುದ್ಧ ಕುಹಕವಾಡಿದ, ಹೆಣ್ಣುಮಕ್ಕಳು ಅಶ್ಲೀಲ Porn ವಿಡಿಯೋಗಳನ್ನು ನೋಡಬೇಕೆಂದು ಬಯಸಿದ, ಕನ್ನಡ ಧ್ವಜವನ್ನು ತನ್ನ ಕಾಚಾಕ್ಕೆ ಹೋಲಿಸಿದ ಹಾಗೂ ದಾರ್ಶನಿಕ ಕವಿ ಕುವೆಂಪು ಅವರ ನಾಡಗೀತೆಯ ವಾಕ್ಯಗಳನ್ನು ಚಿಕನ್ ಮಟನ್‌ಗಳ ಸಾಲೇ ಎಂದು ವಿಕೃತಗೊಳಿಸಿ ಬರೆದ ಕುಖ್ಯಾತಿಗೆ ಈಡಾಗಿದ್ದಾನೆ.

  • ಇಂತಹ ಹೀನ ಚಾರಿತ್ರ್ಯದ ವ್ಯಕ್ತಿಯು ರೂಪಿಸಿದ ಪಠ್ಯಗಳನ್ನು ಓದುವುದರಿಂದ ನಮ್ಮ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಇಂತಹ ನಾಡ ದ್ರೋಹಿಯನ್ನು ರಕ್ಷಿಸಿಕೊಳ್ಳು ಅಗತ್ಯವಾದರೂ ಏನು?
  • ಪ್ರೊ.ಬರಗೂರು ರಾಮಚಂದ್ರಪ್ಪನವರು ರೂಪಿಸಿಕೊಟ್ಟಿರುವ ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಹಳೆಯ ಪಠ್ಯಪುಸ್ತಕವೇ ನಮ್ಮ ಮಕ್ಕಳಿಗಿರಲಿ. ಇದರಿಂದ ನಿಮ್ಮ ಸಮಾಜಕ್ಕಾಗುವ ಮತ್ತು ಶಿಕ್ಷಣ ಕ್ಷೇತ್ರಕ್ಕಾಗುವ ನಷ್ಟವಾದರೂ ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈ ಸಮಿತಿಯ ವಿಸರ್ಜನೆ ಮಾತ್ರವಲ್ಲ, ಚಕ್ರತೀರ್ತನ ನೇತೃತ್ವದಲ್ಲಿ ನಡೆದಿರುವ ಎಲ್ಲಾ ಪರಿಷ್ಕರಣೆ ವಾಪಸ್ ಪಡೆಯಬೇಕು. ಇದಕ್ಕಾಗಿ ಈ ನಾಡಿನ ಪ್ರಜ್ಞಾವಂತರು ಒತ್ತಾಯಿಸಬೇಕು.

  2. ಯಾಕೆ ಈ ಧ್ವೇಶ ಬ್ರಾಹ್ಮಣರ ಮೇಲೆ. ಸಮಾಜಕ್ಕೆ ಎಲ್ಲ ಸಮುದಾಯದವರ ಕೊಡುಗೆ ಇದೆ. ಎಲ್ಲದರಲ್ಲೂ ಜಾತಿಯನ್ನು ಯಾಕೆ ತರುತ್ತೀರ.
    ಏನು ತಪ್ಪಿದೆ ಅದನ್ನು‌ ಸರಿಪಡಿಸಲು ಒತ್ತಾಯ ಮಾಡಿ.

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...