Homeಅಂತರಾಷ್ಟ್ರೀಯ'ಮಯನ್ಮಾರ್ ವಲಸಿಗರಿಗೆ ಆಹಾರ ಮತ್ತು ಆಶ್ರಯ ಕೊಡಬೇಡಿ': ಆದೇಶ ಹಿಂಪಡೆದ ಮಣಿಪುರ ಸರ್ಕಾರ

‘ಮಯನ್ಮಾರ್ ವಲಸಿಗರಿಗೆ ಆಹಾರ ಮತ್ತು ಆಶ್ರಯ ಕೊಡಬೇಡಿ’: ಆದೇಶ ಹಿಂಪಡೆದ ಮಣಿಪುರ ಸರ್ಕಾರ

- Advertisement -
- Advertisement -

ಮಯನ್ಮಾರ್ ವಲಸಿಗ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಬಾರದು ಎಂದು ಮಣಿಪುರ ಸರ್ಕಾರ ನೀಡಿದ್ದ ಆದೇಶವನ್ನು ಈಗ ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ.

“ರಾಜ್ಯ ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗಾಯಗೊಂಡ ಮಯನ್ಮಾರ್ ಪ್ರಜೆಗಳಿಗೆ ಚಿಕಿತ್ಸೆ ನೀಡಲು ಇಂಫಾಲ್‌ಗೆ ಕರೆದೊಯ್ಯುವುದು ಸೇರಿದಂತೆ ಎಲ್ಲಾ ಕ್ರಮಗಳನ್ನು ಇತ್ತೀಚೆಗೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ ಎಲ್ಲಾ ನೆರವು ನೀಡುತ್ತಲೇ ಇದೆ” ಎಂದು ಮಣಿಪುರದ ವಿಶೇಷ ಗೃಹ ಕಾರ್ಯದರ್ಶಿ ಜ್ಞಾನ ಪ್ರಕಾಶ್ ಹೇಳಿದ್ದಾರೆ.

ಎಲ್ಲಾ ಜಿಲ್ಲಾ ಆಯುಕ್ತರಿಗೆ ಮಾರ್ಚ್ 26 ರಂದು ನೀಡಿದ ಪತ್ರವನ್ನು ತಪ್ಪಾಗಿ ಪರಿಗಣಿಸಲಾಗಿದೆ. ಆದ್ದರಿಂದ ತಪ್ಪು ತಿಳುವಳಿಕೆಯನ್ನು ಸರಿಪಡಿಸಲು ಅದನ್ನು ಹಿಂಪಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ ಈ ಮೊದಲು, ವಲಸೆಯನ್ನು ತಡೆಯಬೇಕು ಎಂದು ಹೇಳಿರುವ ಮಣಿಪುರದ ವಿಶೇಷ ಗೃಹ ಕಾರ್ಯದರ್ಶಿ ಹೆಚ್. ಜ್ಞಾನ ಪ್ರಕಾಶ್, ಈ ರೀತಿಯ ನಿರ್ದೇಶನಗಳನ್ನು ಗೌಪ್ಯ ಜ್ಞಾಪನ ಪತ್ರದ ಮೂಲಕ ನೀಡಿದ್ದಾರೆ. “ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ, ಆ ದೇಶದ ಪ್ರಜೆಗಳು ಮಣಿಪುರ ಸೇರಿದಂತೆ ಇತರೆ ಗಡಿ ರಾಜ್ಯಗಳ ಮೂಲಕ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ, ಈ ಕೆಳಗಿನ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲು ನನಗೆ ನಿರ್ದೇಶಿಸಲಾಗಿದೆ” ಎಂದು ಜ್ಞಾಪನ ಪತ್ರದಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ಪ್ರಧಾನಿಯ ದಕ್ಷಿಣ ಭಾರತ ಭೇಟಿ: ‘ಗೋ ಬ್ಯಾಕ್ ಫ್ಯಾಸಿಸ್ಟ್‌ ಮೋದಿ’ ಟ್ವಿಟರ್‌ ಟ್ರೆಂಡ್!

ಮಣಿಪುರಕ್ಕೆ ಪ್ರವೇಶಿಸಲು/ಆಶ್ರಯಿಸಲು ಪ್ರಯತ್ನಿಸುವ ಜನರನ್ನು ದೂರವಿಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅವರಿಗೆ ಯಾವುದೇ ಟೆಂಟ್ ಹಾಕಬಾರದು, ಊಟದ ವ್ಯವಸ್ಥೆ ಮಾಡಬಾರದು. ಸರ್ಕಾರ ಮಾತ್ರವಲ್ಲದೇ ಯಾವುದೇ ಸಂಘಸಂಸ್ಥೆಗಳು ಸಹ ಅವರಿಗೆ ಸಹಾಯ ಮಾಡಬಾರದು. ತಾತ್ಕಾಲಿಕವಾಗಿ ಆಧಾರ್ ನೋಂದಣಿಯನ್ನು ನಿಲ್ಲಿಸಬೇಕು. ಆದರೆ ವಲಸಿಗರಿಗೆ ಗಂಭೀರವಾದ ಗಾಯಗಳಿದ್ದಲ್ಲಿ, ಮಾನವೀಯ ನೆಲೆಯಲ್ಲಿ ಮಾತ್ರ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚಾಂಡೆಲ್, ತೆಂಗ್ನೌಪಾಲ್, ಕಮ್ಜಾಂಗ್, ಉಖ್ರುಲ್ ಮತ್ತು ಚುರಾಚಂದಪುರದ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಈ ಎಲ್ಲಾ ಜಿಲ್ಲೆಗಳು ಮಯನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ.

ಮಣಿಪುರ ಹೊರತಾಗಿ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳೂ ಕೂಡ ಮಯನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ನೆರೆಯ ದೇಶದ 500 ಕ್ಕೂ ಹೆಚ್ಚು ಪ್ರಜೆಗಳು ಈಗಾಗಲೇ ಮಿಜೋರಾಂಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಜೂದಾಸ್ ಏಸು ಕ್ರಿಸ್ತನಿಗೆ ಮಾಡಿದಂತೆ ಕೇರಳದ ಎಡ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ: ಮೋದಿ

ಇತ್ತೀಚೆಗೆ ಮಿಜೋರಾಂ ಸರ್ಕಾರವು, “ಮಯನ್ಮಾರ್ ನಿರಾಶ್ರಿತರ ಬಿಕ್ಕಟ್ಟನ್ನು ಮಾನವೀಯ ಆಧಾರದ ಮೇಲೆ ಪರಿಗಣಿಸಲು ಮತ್ತು ವಲಸೆ ಬರುವ ಜನರಿಗೆ ಭಾರತಕ್ಕೆ ಪ್ರವೇಶಿಸಲು ಅವಕಾಶ ನೀಡುವಂತೆ ಕೋರಿ” ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಮಯನ್ಮಾರ್‌ನಿಂದ ಒಳಹರಿವು ತಡೆಯಲು ಕೇಂದ್ರ ಸರ್ಕಾರ ಅಸ್ಸಾಂ ರೈಫಲ್ಸ್‌ಗೆ ನಿರ್ದೇಶನ ನೀಡಿತ್ತು.

ಭಾರತವು ಮಯನ್ಮಾರ್‌ನೊಂದಿಗೆ 1,643 ಕಿ.ಮೀ ಭೂ ಗಡಿಯನ್ನು ಹಂಚಿಕೊಂಡಿದೆ. ಮಯನ್ಮಾರ್‌ನ ಚಿನ್ ಸಮುದಾಯ ಮತ್ತು ಭಾರತದ ಮಿಜೋಸ್ ಸಮುದಾಯ ಒಂದೇ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಚಿನ್ ಜನರು ಮಯನ್ಮಾರ್‌ನ ಚಿನ್ ರಾಜ್ಯದಲ್ಲಿ ನೆಲೆಸಿದ್ದಾರೆ. ಇದು ಮಿಜೋರಾಂನೊಂದಿಗೆ 404 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ.

ಮಯನ್ಮಾರ್‌‌ನಲ್ಲಿ ಆಡಳಿತವನ್ನು ಸೇನೆಯು ಕ್ಷಿಪ್ರಕ್ರಾಂತಿ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ಇದನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಮಯನ್ಮಾರ್‌‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆ.1ರಿಂದಲೂ ಇಲ್ಲಿನ ಸೇನಾದಂಗೆ ವಿರುದ್ಧ ಜನರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸೇನಾಡಳಿತವು ಯತ್ನಿಸುತ್ತಿದೆ. ಈ ಗಲಭೆಯಲ್ಲಿ ಈವರೆಗೆ ಸುಮಾರು 380ಕ್ಕೂ ಹೆಚ್ಚು ಪ್ರತಿಭಟನಾಕಾರರು ಹತರಾಗಿದ್ದಾರೆ.


ಇದನ್ನೂ ಓದಿ: ‘ರಾಹುಲ್ ಗಾಂಧಿ ಅವಿವಾಹಿತ, ಎಚ್ಚರಿಕೆಯಿಂದಿರಿ’: ಮಾಜಿ ಸಂಸದನ ಹೇಳಿಕೆಗೆ ಭಾರಿ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...