Homeಅಂತರಾಷ್ಟ್ರೀಯಅಪರಾಧಗಳಲ್ಲಿ ಹೆಚ್ಚಳ: 'ಒಡೆದ ಕಿಟಕಿ ಗಾಜು' ಹೇಳುವ ಸಾರ್ವಕಾಲೀನ ಕತೆ

ಅಪರಾಧಗಳಲ್ಲಿ ಹೆಚ್ಚಳ: ‘ಒಡೆದ ಕಿಟಕಿ ಗಾಜು’ ಹೇಳುವ ಸಾರ್ವಕಾಲೀನ ಕತೆ

- Advertisement -
- Advertisement -

ಒಡೆದ ಕಿಟಕಿಯ ಗಾಜು ಕತೆ ಹೇಳಬಹುದೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಮೇಲೆ ತೋರಿಸಿದ ಕಿಟಕಿಯನ್ನು ನೋಡಿದ ತಕ್ಷಣ ಅದರಲ್ಲಿ ಏನೋ ಕತೆ ಇದೆ ಎಂದು ನಿಮಗೆ ಅನಿಸಲಿಲ್ಲವೇ?

ತಕ್ಷಣ ಗೋಚರಿಸುವುದು “ಇಲ್ಲಿ ಏನೋ ಅಪರಾಧ ನಡೆದಿದೆ” ಎಂಬುದನ್ನು ತಿಳಿಸಲು ಉಳಿದಿರುವ ಮೂಕ ಸಾಕ್ಷಿ. ಹಾಗಾದರೆ ಯಾರು, ಯಾವಾಗ ಮತ್ತು ಹೇಗೆ ಈ ಕೃತ್ಯ ಎಸಗಿದರು ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು. ಇರಲಿ, ಅದಕ್ಕೆ ಮುನ್ನ, ಒಡೆದ ಕಿಟಕಿ ಗಾಜು ಸಾರಿ ಹೇಳುತ್ತಿರುವುದು “ಇಲ್ಲಿಯ ಕಾನೂನು ಸುವ್ಯವಸ್ಥೆ ಸರಿ ಇಲ್ಲ” ಎಂದು. ಹೌದು, ಇದನ್ನು ಅಪರಾಧ ತನಿಖಾ ಶಾಸ್ತ್ರದಲ್ಲಿ “ದಿ ಬ್ರೋಕನ್ ವಿಂಡೋ ಥಿಯರಿ” ಎನ್ನುತ್ತಾರೆ.

1982ರಲ್ಲಿ ಸಾಮಾಜಿಕ ಶಾಸ್ತ್ರಜ್ಞರಾದ ಜೇಮ್ಸ್ ಕ್ಯೂ. ವಿಲ್ಸನ್ ಮತ್ತು ಜಾರ್ಜ್ ಎಲ್. ಕೆಲ್ಲಿಂಗ್ ಅವರು ಬರೆದ ಲೇಖನ. ಎಲ್ಲರ ಕಣ್ಣಿಗೆ ಕಾಣುವಂತಹ ಸಣ್ಣ ಪುಟ್ಟ ಅಪರಾಧದ ಕುರುಹುಗಳು ಸಮಾಜಘಾತಕರನ್ನು ಇನ್ನಷ್ಟು ಗಂಭೀರ ಅಪರಾಧವೆಸಗಲು ಪ್ರಚೋದಿಸುತ್ತವೆ ಮತ್ತು ಸಮಾಜದಲ್ಲಿ ಕಾನೂನು ಪಾಲಿಸುವ ಜನಸಾಮಾನ್ಯರಿಗೆ “ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಹೇಳುವವರು-ಕೇಳುವವರು ಯಾರೂ ಇಲ್ಲ. ಈ ಪ್ರದೇಶ ಸುರಕ್ಷಿತವಲ್ಲ, ಇಲ್ಲಿಂದ ಬೇಗನೇ ಕಾಲು ಕೀಳುವುದು ಉತ್ತಮ” ಎಂಬ ಸಂದೇಶ ರವಾನಿಸುತ್ತದೆ. ಕೇವಲ ಕಿಟಕಿಯ ಒಡೆದ ಗಾಜು ಮಾತ್ರವಲ್ಲ, ಗೋಡೆಯ ಮೇಲೆ ಬರೆದ ಗ್ರಾಫಿಟಿ (ಅಸಂಬದ್ಧ ಬರಹ/ಚಿತ್ರಗಳು), ಎಲ್ಲೆಡೆ ಬಿದ್ದಿರುವ ಕಸದ ರಾಶಿ, ಸಮಯಕ್ಕೆ ಸರಿಯಾಗಿ ಸಂಚರಿಸದ ಸಾರಿಗೆ ವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಎಲ್ಲವೂ ಸಹ ಇದೇ ರೀತಿಯ ಸಂದೇಶ ರವಾನಿಸುತ್ತವೆ.

1980-1994ರ ಕಾಲಘಟ್ಟದಲ್ಲಿ ಅಮೇರಿಕದ ನ್ಯೂಯಾರ್ಕ್ ನಗರ ಅತೀವ ಅಪರಾಧ ಹಾವಳಿಗೆ ಒಳಗಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ಸಂಜೆಯ ನಂತರ, ರಸ್ತೆಯಲ್ಲಾಗಲೀ, ನಗರದ ಜೀವನಾಡಿಯಾದ ಸಬ್-ವೇ (ನಮ್ಮ ಮೆಟ್ರೋ) ರೈಲಿನಲ್ಲಾಗಲೀ ಸಭ್ಯ ಜನರು ಓಡಾಡುವುದೇ ದುಸ್ತರವಾಗಿತ್ತು. ಆ ಸಮಯದಲ್ಲಿ ವರ್ಷಕ್ಕೆ ಸರಾಸರಿ 2,000 ಕೊಲೆಗಳು, ಆರು ಲಕ್ಷ ಲೂಟಿ, ಬೆದರಿಕೆ, ಮಾರಕಾಸ್ತ್ರಗಳಿಂದ ಹೊಡೆದಾಟ ಮುಂತಾದ ಗಂಭೀರ ಅಪರಾಧಗಳು ನಡೆಯುತ್ತಿತ್ತು ಎಂದರೆ ಆಘಾತಕಾರಿಯಲ್ಲವೇ? ಸಬ್-ವೇ ಸಮಯಕ್ಕೆ ಸರಿಯಾಗಿ ಓಡುತ್ತಿರಲಿಲ್ಲ, ರೈಲಿನ ಬೋಗಿಯ ಒಳಗಡೆ ಕಸ, ಅಶ್ಲೀಲ ಬರಹ, ಚಿತ್ರಗಳು, ಮುರಿದ ಬೆಂಚು, ದೀಪಗಳು, ಕೆಲಸ ಮಾಡದ ವಾತಾನುಕೂಲ ವ್ಯವಸ್ಥೆ, ಭಿಕ್ಷುಕರ ಮತ್ತು ಕುಡುಕರ ಹಾವಳಿ, ರೌಡಿಗಳ ಕಾಟ ಎಲ್ಲರಿಗೂ ಎಲ್ಲವೂ ಅಸಹ್ಯವಾಗಿತ್ತು.


ಇದನ್ನೂ ಓದಿ: 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ – NCRB


1990ರಲ್ಲಿ ನ್ಯೂಯಾರ್ಕ್ ನಗರ ಸಾರಿಗೆ ಪೋಲಿಸ್ ಆಯುಕ್ತರಾಗಿ, ನಂತರ 1994ರಲ್ಲಿ ನ್ಯೂಯಾರ್ಕ್ ನಗರ ಪೋಲಿಸ್ ಆಯುಕ್ತರಾಗಿ ಬಂದ ವಿಲಿಯಮ್ ಬ್ರಾಟನ್ ಮತ್ತು ನ್ಯೂಯಾರ್ಕ್ ಮಹಾಪೌರರಾಗಿದ್ದ ರುಡಿ ಜುಲಿಯಾನಿ ದಿ ಬ್ರೋಕನ್ ವಿಂಡೋ ಥಿಯರಿಯಿಂದ ಪ್ರಭಾವಿತಗೊಂಡವರು. ಸಣ್ಣ ಅಪರಾಧಗಳಾದ ಸಾರ್ವಜನಿಕ ಸಂಪತ್ತನು ನಾಶಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಕುಡಿಯುವುದು, ಹೇಸಿಗೆ ಮಾಡುವುದು,  ಸಾರ್ವಜನಿಕ ಸಾರಿಗೆಯಲ್ಲಿ ಚೀಟಿ ಪಡೆಯದೆ ಪ್ರಯಾಣ ಮಾಡುವುದು, ಮುಂತಾದವುಗಳನ್ನು ನಿಯಂತ್ರಿಸಿದರೆ ಮುಂದೆ ದೊಡ್ಡ ಅಪರಾಧವಾಗುವುದನ್ನು ತಡೆಗಟ್ಟಬಹುದು ಎಂದು ಕಾರ್ಯನಿರತರಾದರು.

ಇವರ ಪೋಲಿಸ್ ಗಿರಿಗೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಲೋಚನೆಗೆ ಸಿಲುಕಿದರೂ ಮತ್ತು ಈ ತತ್ವದ ಪರ-ವಿರೋಧ ಎಷ್ಟೇ ಚರ್ಚೆ ನಡೆದಿದ್ದರೂ ಸಹ, ಇದರ ಮೂಲ ಅನಿಸಿಕೆ “ಯಾವುದೇ ಕಾರಣದಿಂದ ಒಡೆದ ಒಂದು ಕಿಟಕಿಯ ಗಾಜನ್ನು ಕೂಡಲೇ ಬದಲಾಯಿಸದಿದ್ದಲ್ಲಿ ಮಾರನೆಯ ದಿನ ಇನ್ನೊಂದು ಗಾಜು ಪುಡಿಪುಡಿಯಾಗಬಹುದು” ಎಂಬ ಮಾತು ಅಷ್ಟೇ ಖಚಿತ.

ಕಾನೂನು ಪಾಲನೆ ಕೇವಲ ನಾಗರಿಕರ ಕೆಲಸವಷ್ಟೇ ಅಲ್ಲ ಪೋಲಿಸರೂ ಸಹ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಪೋಲಿಸರು ಜನರ ಮೇಲೆ ದೌರ್ಜನ್ಯವೆಸಗದೆ, ಅಪರಾಧಿಗಳಿಗೆ ಅವರ ಸಂಪೂರ್ಣ ಹಕ್ಕುಗಳನ್ನು ನೀಡಿ, ಕೇವಲ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅಂದು ನಡೆದ ಪೋಲಿಸ್ಗಿರಿ, ಅದರಲ್ಲೂ ರಸ್ತೆಯಲ್ಲಿ ನಡೆಯುತ್ತಿದ್ದ ಎಲ್ಲ ಸಂಶಯಾಸ್ಪದ ಜನರ “ತಡೆ ಮತ್ತು ತಪಾಸಣೆ”ಯನ್ನು ಅಪರಾಧಕ್ಕೆ ಸೊನ್ನೆ ಸಹನೆ ಅಥವಾ ಅನಾವಶ್ಯಕ ದೌರ್ಜನ್ಯ ಎಂದು ಕೆಲವರಿಂದ ಪರಿಗಣಿಸಲ್ಪಟ್ಟರೂ ಸಹ, ಜೊತೆಗೆ ಪೋಲಿಸರಿಗೆ ಬೇಕಾದ ಸೂಕ್ಷ್ಮತೆ ತರಬೇತಿ, ಸಾಧನಗಳು, ಸಮಾಜದ ಜೊತೆ ಮಾನವೀಯ ಸಂಬಂಧ, ಸ್ಪಷ್ಟವಾದ ಆದೇಶಗಳು ಮತ್ತು ಸಮುದಾಯದ ಪೋಲಿಸ್ ಗಸ್ತು ಇಂತಹ ಧನಾತ್ಮಕ ಬದಲಾವಣೆಗಳೂ ಬಂದವು.

ನ್ಯೂಯಾರ್ಕ್ ನಗರ ಸಾರಿಗೆಯ ಅಧ್ಯಕ್ಷರಾಗಿ 1984ರಲ್ಲಿ ಬಂದ ಡೇವಿಡ್ ಎಲ್. ಗನ್ನ್ ಮತ್ತು ಸಲಹೆಗಾರರಾದ ಜಾರ್ಜ್ ಕೆಲ್ಲಿಂಗ್ ಕೂಡಲೇ ಎಲ್ಲ ಮುರಿದ ಗಾಜು, ಕಿಟಕಿಗಳನ್ನು ದುರಸ್ತಿಗೊಳಿಸಿದರು, ಗೋಡೆ ಮತ್ತು ರೈಲಿನ ಬೋಗಿಗಳ ಬರಹವನ್ನು ಸ್ವಚ್ಛಗೊಳಿಸಿದರು. ಟಿಕೇಟು ರಹಿತ ಪ್ರಯಾಣಿಕರನ್ನು ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಏಕೆಂದರೆ ಅವರ ಈ ಅಪರಾಧಕ್ಕೆ ಯಾವ ನ್ಯಾಯಾಲಯವೂ ಕಠಿಣ ಶಿಕ್ಷೆ ವಿಧಿಸುವುದಿಲ್ಲ ಮತ್ತೆ ಅದಕ್ಕೋಸ್ಕರ ಪೋಲಿಸರಿಗೆ ಕಾರಕೂನಿ, ಓಡಾಟವೇ ಜಾಸ್ತಿ ಆಗುತ್ತದೆ ಎಂದು ತಿಳಿದಿದ್ದರೂ ಸಹ ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅಪರಾಧಿಗಳಿಂದ ವಸೂಲಾದ ಚಾಕು, ಚೂರಿ, ಬಂದೂಕು, ಮಾದಕ ವಸ್ತು, ಹಿಂದಿನ ಅಪರಾಧ ಇತಿಹಾಸ ಎಲ್ಲವೂ ಅಪರಾಧಿಗಳ ಕಠಿಣ ಶಿಕ್ಷೆಗೆ ನೆರವಾಗುತ್ತಿತ್ತು. ಅಪರಾಧಿಗಳಿಗೆ ನಡುಕ ಹುಟ್ಟಿತ್ತು, ಅವರ ಧೈರ್ಯದ ಬೆನ್ನು ಮೂಳೆ ಮುರಿದಿತ್ತು.

1980ರ ದಶಕದಲ್ಲಿ ಅಪರಾಧ ಹೆಚ್ಚಾಗಿರುವುದಕ್ಕೆ ಇನ್ನೂ ಕೆಲವಾರು ಕಾರಣಗಳಿದ್ದವು. ಉದಾಹರಣೆಗೆ ಅಮೇರಿಕದ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಸುಲಭವಾಗಿತ್ತು. 1994ರ ನಂತರ ನ್ಯೂಯಾರ್ಕ್ ನಗರದ ಅಪರಾಧಿಕ ಕೃತ್ಯದಲ್ಲಿ ಇದ್ದಕ್ಕಿದಂತೆ ತೀವ್ರ ಇಳಿತ ಕಂಡುಬಂತು. ಈ ಇಳಿತಕ್ಕೂ ಅನೇಕ ಕಾರಣಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಜನರಿಗೆ ಒಳ್ಳೆಯ ಕೆಲಸ ಸಿಗಲು ಪ್ರಾರಂಭವಾಯಿತು. ನಗರದ ಪೋಲಿಸ್ಗಿರಿಯಿಂದ ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಕಡಿಮೆಯಾಯಿತು. ಇನ್ನೂ ಅನೇಕ ಕಾರಣಗಳಿಂದಾಗಿ ಅಪರಾಧದ ಇಳಿತ ಸಾಧ್ಯವಾಯಿತು.

ಅಮೇರಿಕದ ಕತೆ ಹಾಗಿರಲಿ, ನಮ್ಮ ದೇಶಕ್ಕೆ ಮರಳಿ ಬರೋಣ.

ಎಲ್ಲೆಡೆ ಕಸದ ರಾಶಿ ಬಿದ್ದಿರುವ ಬೆಂಗಳೂರನ್ನೇ ತೆಗೆದುಕೊಳ್ಳಿ. ಕಸದ ರಾಶಿ ಏನು ಸಂದೇಶ ರವಾನಿಸುತ್ತದೆ? ಕಸ ಬಿದ್ದಿರುವ ಕಡೆಯಲ್ಲೇ ಇನ್ನಷ್ಟು ಹೆಚ್ಚಿನ ಕಸ ಬಂದು ಬೀಳುವುದು ಏಕೆ? ಜನರು ಅಲ್ಲೇ ಹೇಸಿಗೆ ಮಾಡುವುದು ಏಕೆ?

ಹೊಂಡ ತುಂಬಿದ ರಸ್ತೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಮಳೆ-ಚರಂಡಿ ನೀರು, ಒತ್ತುವರಿಯಾದ ಅರಣ್ಯ, ಮಾಯವಾದ ಕೆರೆಗಳು-ರಾಜಾಕಾಲುವೆಗಳು ಏನು ಸಂದೇಶ ರವಾನಿಸುತ್ತದೆ? ಬೆಂಗಳೂರಿನ ತೆರಿಗೆ ಪಾವತಿಸುವ ಜನರಿಗೆ ಬಿಬಿಎಂಪಿಯ ಅನಧಿಕೃತ ಬಡಾವಣೆಗಳು, ಸರಕಾರದ ಅಕ್ರಮ-ಸಕ್ರಮ ನೀತಿ, ಏನು ಸಂದೇಶ ರವಾನಿಸುತ್ತದೆ? ಐಎಂಎ ಜುವೆಲರ್ಸ್ ಹಗರಣ ಏನು ಸಂದೇಶ ರವಾನಿಸುತ್ತದೆ?

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ನಗರದಿಂದ ಹೊರಬಂದು ದೇಶದ ಪರಿಸ್ಥಿತಿ ಅವಲೋಕಿಸೋಣ. ದೇಶದ ಬ್ಯಾಂಕುಗಳಿಗೆ ನಾಮ ಹಾಕಿ ಓಡಿ ಹೋದವರ ಕತೆ ಏನು ಸಂದೇಶ ರವಾನಿಸುತ್ತದೆ? 2ಜಿ, ಕಲ್ಲಿದ್ದಲಿ ಮತ್ತು ಇತರ ಆರ್ಥಿಕ ಹಗರಣದಲ್ಲಿ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗದಿರುವುದು ಏನು ಸಂದೇಶ ರವಾನಿಸುತ್ತದೆ? ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಏನು ಸಂದೇಶ ರವಾನಿಸುತ್ತದೆ? ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಏನು ಸಂದೇಶ ರವಾನಿಸುತ್ತದೆ?

ಇವೂ ಸಹ ಒಡೆದ ಗಾಜಿನ ಕತೆಯಲ್ಲವೇ?


ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...