Homeಮುಖಪುಟನೆಲ್ಸನ್ ಮಂಡೇಲಾರವರಿಗೆ ಜೈಲಿನಲ್ಲಾದ ಅವಮಾನ ಇಂದು ಭಾರತದ ಪ್ರತಿ ಬೀದಿಯಲ್ಲಾಗುತ್ತಿದೆ.

ನೆಲ್ಸನ್ ಮಂಡೇಲಾರವರಿಗೆ ಜೈಲಿನಲ್ಲಾದ ಅವಮಾನ ಇಂದು ಭಾರತದ ಪ್ರತಿ ಬೀದಿಯಲ್ಲಾಗುತ್ತಿದೆ.

- Advertisement -
- Advertisement -

| ಸಲೀಮ್ ಮಲ್ಲಿಕ್ |

ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಅದ ನಂತರ, ತನ್ನ ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೋಟೆಲಿಗೆ ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿ ಊಟಕ್ಕೆ ಎದುರು ನೋಡುತ್ತಿದ್ದರು.

ಅದೆ ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟು ಊಟಕ್ಕೋಸ್ಕರ ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾರವರು ತನ್ನ ಸುರಕ್ಷೆಯ ಸೈನಿಕರಿಗೆ ಈ ರೀತಿ ಹೇಳಿದರು; “ಆ ವ್ಯಕ್ತಿಯನ್ನು ಕರೆಯಿರಿ, ಇಲ್ಲಿ ನನ್ನ ಟೇಬಲ್ ಬಳಿಯಲ್ಲಿಯೇ ಕುಳಿತು ಕೊಳ್ಳಲಿ”.

ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾರವರ ಟೇಬಲ್‌ನಲ್ಲಿಯೇ ಕುಳಿತುಕೊಂಡನು. ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯೂ ಕೂಡ ಊಟ ಮಾಡಲು ಶುರು ಮಾಡಿದನು. ಅದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿ ಆ ವ್ಯಕ್ತಿ ತಲೆ ಬಗ್ಗಿಸಿಕೊಂಡು ಆ ಹೋಟೆಲ್ ನಿಂದ ಹೊರಗಡೆ ಹೋದನು.

ಆ ವ್ಯಕ್ತಿ ಹೊರಗಡೆ ಹೋದ ನಂತರ ಮಂಡೇಲಾ ಅವರ ಸುರಕ್ಷೆಯ ಅಧಿಕಾರಿ ಮಂಡೇಲಾರನ್ನು ಕೇಳಿದನು; “ಸರ್ ಆತನಿಗೆ ಜ್ವರ ಬಂದಿರಬಹುದು, ಹಾಗಾಗಿ ಊಟ ಮಾಡುವಾಗ ಅವರ ಕೈಗಳು ನಡುಗುತ್ತಿದ್ದವು”.

ನೆಲ್ಸನ್ ಮಂಡೇಲಾ ನಸು ನಗುತ್ತಾ ಹೇಳಿದರು. ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾನೆ, ರೋಗಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದನೋ, ಆ ಜೈಲಿನ ಜೈಲರ್ ಅಗಿದ್ದನು ಆ ವ್ಯಕ್ತಿ. ನನಗೆ ಬಹಳ ಹಿಂಸೆ ಕೊಟ್ಟಿದ್ದನು. ಎಟು ತಿಂದೂ ತಿಂದೂ ಸುಸ್ತಾಗಿ ನೀರು ಕೇಳಿದಾಗ, ಆ ವ್ಯಕ್ತಿ ನೀರು ಬೇಕಾ…? ಕುಡಿ ಎಂದು, ನನ್ನ ಮುಖದ ಮೇಲೆ ಮೂತ್ರ ಮಾಡುತ್ತಿದ್ದನು.

ಈಗ ನಾನು ರಾಷ್ಟ್ರಪತಿ ಅಗಿದ್ದೇನೆ …!!

ಆ ವ್ಯಕ್ತಿಗೆ ಮನವರಿಕೆ ಅಗಿದೆ. ತಾನು ಮಾಡಿದ ಕೆಲಸಕ್ಕೆ ಈಗ ತನಗೆ ಭಯಂಕರ ಶಿಕ್ಷೆ ಆಗಬಹುದು ಎಂದು. ಅದರೆ ಅದು ನನ್ನ ಸಂಸ್ಕಾರವಲ್ಲ. ನನಗೆ ಅನಿಸುತ್ತದೆ ದ್ವೇಷದ ಭಾವನೆಯಿಂದ ಕೆಲಸ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಧೈರ್ಯ ಮತ್ತು ಸಹಿಷ್ಣುತೆ ಇದ್ದರೆ ಮಾನಸಿಕ ಪರಿಪಕ್ವತೆ ಪೂರ್ಣವಾಗಿ ಸಾಧಿಸುತ್ತದೆ.

ನೋಡಿ ಎಂತಹ ವ್ಯಕ್ತಿತ್ವ ನೆಲ್ಸನ್ ಮಂಡೇಲಾರದ್ದು. ಮಹಾನ್ ವ್ಯಕ್ತಿಗಳ ಈ ತರಹದ ಕ್ಷಮಾ ಗುಣ, ಉದಾರತೆಗಳೇ ಅವರನ್ನು ಆ ಮೇರುತನಕ್ಕೆ ಕೊಂಡೊಯ್ಯುವವು ಅಲ್ಲವೆ?

ಈಗ ಈ ಘಟನೆಯನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ. ಮೊನ್ನೆ ಉತ್ತರ ಪ್ರದೇಶದಲ್ಲಿ ಪತ್ರಕರ್ತರನ್ನು ಬಂಧಿಸಿದ ಅಲ್ಲಿನ ಪೊಲೀಸರರು ಅವರ ಮುಖದ ಮೇಲೆ ಮೂತ್ರ ಮಾಡಿ ವಿಕೃತಿ ಮೆರೆದಿದ್ದಾರೆ.

ಉತ್ತರ ಪ್ರದೇಶದ ಶರ್ಮಿ ಎಂಬಲ್ಲಿ ಹಳಿ ತಪ್ಪಿದ ರೈಲಿನ ಬಗ್ಗೆ ವರದಿ  ಮಾಡಲು ಹೋದ ನ್ಯೂಸ್ 24 ಟಿವಿಯ ವರದಿಗಾರ ಅಮಿತ್ ಶರ್ಮಾ ಎಂಬುವವರ ಮೇಲೆ ರೈಲ್ವೆ ಪೊಲೀಸರು ಹಲ್ಲೆ ಮಾಡಿದ್ದಲ್ಲದೇ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದರು. ಈ ಕುರಿತು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು

ಅಂದರೆ ನೆಲ್ಲನ್ ಮಂಡೇಲಾರವರಿಗೆ ಜೈಲಿನಲ್ಲಿ ಕೊಡುತ್ತಿದ್ದ ಚಿತ್ರಹಿಂಸೆಗಳನ್ನು ಇಂದು ಭಾರತದಲ್ಲಿ ಬಹಿರಂಗವಾಗಿ ಕೊಡಲಾಗುತ್ತಿದೆ ಎಂದರೆ ನಮ್ಮ ದೇಶ ಯಾವ ಕಡೆ ಚಲಿಸುತ್ತಿದೆ ಎಂಬುದನ್ನು ಅರ್ಥ್ ಮಾಡಿಕೊಳ್ಳಬೇಕಿದೆ. ಉತ್ತರ ಪ್ರದೇಸದಲ್ಲಂತೂ ವಾರವೊಂದರಲ್ಲೇ 7 ಜನ ಪತ್ರಕರ್ತರ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಇದಕ್ಕೆ ಅಲ್ಲಿನ ಮುಖ್ಯಮಂತ್ರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಮತ್ತಷ್ಟು ಹಲ್ಲೆಗಳಿಗೆ ಬೆಂಬಲ ನೀಡಿದಂತಾಗಿದೆ.

ಕರ್ನಾಟಕದ ರಾಮನಗರದಲ್ಲಿ ಸಾಲದ ಕಾರಣಕ್ಕೆ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆದು ಅವಮಾನ ಮಾಡಿರುವುದು, ಗುಂಡ್ಲುಪೇಟೆಯಲ್ಲಿ ದಲಿತನೆಂಬ ಕಾರಣಕ್ಕೆ ಬೆತ್ತಲೆ ಮೆರವಣಿಗೆ ಮಾಡಿರುವುದು, ಹಾಸನದಲ್ಲಿ ದಲಿತ ನೀರುಗಂಟೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಯುತ್ತಲೇ ಇವೆ.

ಸಜ್ಜನರು ಮೌನವಾಗಿದ್ದಷ್ಟು ದುರ್ಜನರು ಈ ರೀತಿಯ ದೌರ್ಜನ್ಯಗಳನ್ನು ನಿರಂತರವಾಗಿ ಎಸಗುತ್ತಲೇ ಇರುತ್ತಾರೆ. ಈ ಸಂದರ್ಭದಲ್ಲಿ ತತ್ವಜ್ಞಾನಿಯೊಬ್ಬನ ಈ ಮಾತು ನಮ್ಮನ್ನು ಎಚ್ಚರಿಸಬೇಕಲ್ಲವೇ?

“ಅಪರಾಧವೇ ಅಧಿಕಾರವಾಗಿ,

ಜನರನ್ನು ಅಪರಾಧಿಗಳನ್ನಾಗಿಸಿ ಬೇಟೆಯಾಡುತ್ತಿರುವಾಗ,

ಕಣ್ಣು ಬಾಯಿದ್ದು ಸುಮ್ಮನಿರುವ ಪ್ರತಿಯೊಬ್ಬರು ಅಪರಾಧಿಗಳೇ”..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...