Homeಮುಖಪುಟಗಾಜಾದಲ್ಲಿ ನಡೆಯುತ್ತಿರುವುದು 'ಮಾರಣಹೋಮ' ಎಂದ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ

ಗಾಜಾದಲ್ಲಿ ನಡೆಯುತ್ತಿರುವುದು ‘ಮಾರಣಹೋಮ’ ಎಂದ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ

- Advertisement -
- Advertisement -

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದ್ದು, ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ಮಾಡಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಸ್ಥಳಾಂತರಗೊಂಡಿರುವ ನಿರಾಶ್ರಿತರಿಗೆ ಸ್ಥಳಾವಕಾಶ ನೀಡುತ್ತಿತ್ತು.

ಈ ಘಟನೆ ಬಗ್ಗೆ ಮಾತನಾಡಿದ ಗಾಜಾದ ಎಂಎಸ್‌ಎಫ್ ವೈದ್ಯ ಡಾ ಘಸನ್ ಅಬು ಸಿತ್ತಾಹ್ ಅವರು, ”ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯಿಂದ ನಾವು ಗಾಬರಿಗೊಂಡಿದ್ದೇವೆ. ನೂರಾರು ಜನರು ಸಾವನ್ನಪ್ಪಿದ್ದಾರೆ, ಇದೊಂದು ಮಾರಣಹೋಮ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.

”ನಾವು ಆಸ್ಪತ್ರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೆವು, ಬಲವಾದ ಸ್ಫೋಟ ಸಂಭವಿಸಿದೆ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯ ಮೇಲೆ ಸೀಲಿಂಗ್ ಬಿದ್ದಿದೆ. ಇದು ಹತ್ಯಾಕಾಂಡವಾಗಿದೆ” ಎಂದು ಸಿತ್ತಾಹ್ ಹೇಳಿದರು.

”ಆಸ್ಪತ್ರೆ, ಅನೇಕ ರೋಗಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಅಲ್ಲಿ ಆಶ್ರಯ ಪಡೆದ ಜನರ ಮೇಲಿನ ಈ ಆಘಾತಕಾರಿ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ, ಆಸ್ಪತ್ರೆಗಳು ಗುರಿಯಾಗಬಾರದು.. ಈ ರಕ್ತಪಾತ ಇಲ್ಲಿಗೆ ನಿಲ್ಲಬೇಕು… ಸಾಕು ಸಾಕು…” ಎಂದು ಹೇಳಿದ್ದಾರೆ.

ಬಾಂಬ್ ದಾಳಿಯಿಂದಾಗಿ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವ ಸಂಸ್ಥೆ ನಡೆಸುತ್ತಿದ್ದ ಶಾಲೆಯಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆ ಮೇಲೆ ಬಾಂಬ್ ದಾಳಿ ಮಾಡಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್‌ ಜಜೀರಾ ಹಂಚಿಕೊಂಡಿರುವ ದೃಶ್ಯಗಳಲ್ಲಿ ವೈದ್ಯರು ಮತ್ತು ನಾಗರಿಕರು ಬಿಳಿ ಚೀಲಗಳು, ಅಥವಾ ಹೊದಿಕೆಗಳಲ್ಲಿ ಮೃತ ದೇಹಗಳ್ನು ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಆಸ್ಪತ್ರೆಯ ಅಂಗಳದಲ್ಲಿ ರಕ್ತದ ಕಲೆಗಳು ಮತ್ತು ಸುಟ್ಟ ಕಾರುಗಳು ಗೋಚರಿಸಸುತ್ತವೆ.

ಅಕ್ಟೋಬರ್ 7ರಿಂದ ನಡೆಯುತ್ತಿರುವ ಈ ಮಾರಣಾಂತಿಕ ಸಂಘರ್ಷದಲ್ಲಿ ಪ್ಯಾಲೆಸ್ತೀನ್, ಇಸ್ರೇಲ್‌ನ ಸಾವಿರಾರು ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸುವ ಮೂಲಕ ವಿನಾಶಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಗಾಝಾ ಆಸ್ಪತ್ರೆಯ ಮೇಲೆ ಇಸ್ರೇಲ್ ಭೀಕರ ದಾಳಿ: 500ಕ್ಕೂ ಹೆಚ್ಚು ಜನರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...