ಖಾಸಗಿತನವೇ ಪವಿತ್ರ ಎಂದು ಪ್ರತಿಪಾದಿಸಿ, ತನ್ನ ಖಾಸಗಿ ನೀತಿಯ ಬಗ್ಗೆ ಕೊಚ್ಚಿಕೊಂಡ ವಾಟ್ಸ್ಆ್ಯಪ್ ವಿಲಕ್ಷಣವಾದ ಯೋಜನೆಯೊಂದು ನಡೆಸುತ್ತಿದೆ. ಪ್ರೊಪಬ್ಲಿಕಾ ಸಂಗ್ರಹಿಸಿದ ಡಿಸೆಂಬರ್ ತಿಂಗಳಲ್ಲಿ ಬಳಸಿದ ಕಂಪನಿಯ ಪ್ರಸೆಂಟೇಷನ್‌ವೊಂದರ ಸ್ಲೈಡ್‌ನಲ್ಲಿ, ವಾಟ್ಸ್ಆ್ಯಪ್ ಖಾಸಗಿತನದ ಕಥನವನ್ನು ಉಗ್ರವಾಗಿ ಪ್ರಚಾರ ಮಾಡುವುದಕ್ಕೆ ಒತ್ತು ನೀಡಿರುವುದು ಕಂಡು ಬರುತ್ತದೆ. ತನ್ನ ಬ್ರ್ಯಾಂಡ್ ಕ್ಯಾರೆಕ್ಟರ್ ಅನ್ನು ಒಬ್ಬ ವಲಸಿಗ ತಾಯಿಗೆ ಹೋಲಿಸುತ್ತದೆ ಮತ್ತು ತಾಲಿಬಾನ್ ಉಗ್ರ ಗುಂಡೇಟಿನಿಂದ ಬದುಕುಳಿದ ನೊಬೆಲ್ ಶಾಂತಿ ಪುರಸ್ಕೃತ ಮಲಾಲ ಯೂಸುಫ್‌ಜಾಯ್‌ಗೆ ಹೋಲಿಸುತ್ತದೆ. ಈ ಸ್ಲೈಡ್‌ನ ಶೀರ್ಷಿಕೆ, ‘ ಬ್ರ್ಯಾಂಡ್ ಟೋನ್ ಪ್ಯಾರಾಮೀಟರ್ಸ್’. ಇಲ್ಲೂ ಕಂಪನಿಯ ಕಂಟೆಂಟ್ ಮಾಡರೇಷನ್ ಅಂದರೆ ಬಳಕೆದಾರರ ವಿನಿಮಯ ಮಾಡಿಕೊಳ್ಳುವ ಮಾಹಿತಿಯ ಗುಣಮಟ್ಟವನ್ನು ಪರಿಶೀಲಿಸುವ ವ್ಯವಸ್ಥೆಯ ಕುರಿತು ಯಾವ ಪ್ರಸ್ತಾಪವನ್ನೂ ಮಾಡುವುದಿಲ್ಲ.
ವಾಟ್ಸ್ಆ್ಯಪ್‌ನ ಸಂವಹನ ನಿರ್ದೇಶಕ, ಕಾರ್ಲ್ ವೂಗ್, ಆಸ್ಟಿನ್ ಮತ್ತು ಇತರೆಡೆ ಇರುವ ಗುತ್ತಿಗೆ ಕೆಲಸಗಾರರ ತಂಡವು ವಾಟ್ಸ್ಆ್ಯಪ್ ಅನ್ನು ಅತಿಯಾಗಿ ದುರ್ಬಳಕೆ ಮಾಡುವವರನ್ನು ಗುರುತಿಸುವುದು ಮತ್ತು ವಾಟ್ಸ್ಆ್ಯಪ್‌ನಿಂದ ಅವರನ್ನು ಕಿತ್ತೊಸೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಪ್ರೊಬ್ಲಿಕಾಗೆ ಮಾತನಾಡಿರುವ ವೂಗ್ ಅವರು, ಈ ಕೆಲಸವನ್ನು ಕಂಟೆಂಟ್ ಮಾಡರೇಷನ್ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ”ನಾವು ಈ ಪರಿಭಾಷೆಯನ್ನೇ ವಾಟ್ಸ್ಆ್ಯಪ್‌ನಲ್ಲಿ ಬಳಸುವುದಿಲ್ಲ” ಕಂಪನಿ ಈ ಕೆಲಸಗಾರರನ್ನು ಈ ಲೇಖನಕ್ಕಾಗಿ ಸಂದರ್ಶಿಸುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ” ವಾಟ್ಸ್ಆ್ಯಪ್ ಜಗತ್ತಿನ ಕೋಟ್ಯಂತರ ಜನರ ಲೈಫ್‌ಲೈನ್ ಆಗಿದೆ’ ಎಂದು ಕಂಪನಿ ಹೇಳಿತು. ನಾವು ಆ್ಯಪ್‌ಅನ್ನು ಹೇಗೆ ಅಭಿವೃದ್ಧಿಪಡಿಸಲು ನಿರ್ಧರಿಸುತ್ತೇವೆಂದರೆ, ಬಳಕೆದಾರರ ಖಾಸಗಿತನಕ್ಕೆ ಹೆಚ್ಚು ಗಮನ ಕೊಡುತ್ತೇವೆ. ಉನ್ನತ ಮಟ್ಟದ ವಿಶ್ವಾಸಾರ್ಹತೆ ಮತ್ತು ದುರ್ಬಳಕೆಯ ನಿವಾರಣೆಯನ್ನು ಕಾಯ್ದುಕೊಳ್ಳುತ್ತೇವೆ.” ಎಂದು ವಿವರಿಸಿದೆ.
ಬಳಕೆದಾರರ ಮಾಹಿತಿಯ ಮೇಲೆ ನಿಗಾ ಇಡುವ ಕ್ರಮದ ಬಗ್ಗೆ ವಾಟ್ಸ್ಆ್ಯಪ್ ಏನು ಹೇಳುತ್ತಿದೆಯೊ, ಅದಕ್ಕೆ ವ್ಯತಿರಿಕ್ತವಾಗಿ, ಫೇಸ್‌ಬುಕ್ ಸಂಸ್ಥೆ ಹೇಳುತ್ತದೆ. ಫೇಸ್‌ಬುಕ್ ಪ್ರಕಾರ 15,000 ಮಂದಿ ಮಾಡರೇಟರ್‌ಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಎಲ್ಲ ಪೋಸ್ಟ್‌ಗಳನ್ನು ಪರಿಶೀಲಿಸುತ್ತಾರೆ. ಇಲ್ಲಿ ಯಾವುದೇ ಪೋಸ್ಟ್‌ಗಳು ಎನ್‌ಕ್ರಿಪ್ಟ್ ಅಂದರೆ ಗೌಪ್ಯವಾಗಿ ಉಳಿದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಟ್ರಾನ್ಸಪರೇನ್ಸಿ ರಿಪೋರ್ಟ್ ಬಿಡುಗಡೆ ಮಾಡುವ ಈ ಕಂಪನಿಯು, ಎಷ್ಟು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳ ವಿರುದ್ಧಕ್ರಮಕೈಗೊಳ್ಳಲಾಗಿದೆ ಎಂದು ವಿವರಗಳನ್ನು ನೀಡುತ್ತದೆ. ವಾಟ್ಸ್ಆ್ಯಪ್‌ನಲ್ಲಿ ಈ ವರದಿಯೂ ಇಲ್ಲ.
ಬಳಕೆದಾರರ ಪೋಸ್ಟ್‌ಗಳನ್ನು ಪರಿಶೀಲಿಸಲೆಂದು ಒಂದು ಸೇನೆಯನ್ನು ನಿಯೋಜಿಸಿರುವುದೇ ವಾಟ್ಸ್ಆ್ಯಪ್ ಬಳಕೆದಾರರ ಖಾಸಗಿತನದ ವಿಷಯದಲ್ಲಿ ಫೇಸ್‌ಬುಕ್ ಒಂದು ರೀತಿಯ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ. ಈ ರೀತಿಯಾಗಿ ಕಂಪನಿಯ ಕ್ರಮಗಳಿಂದಾಗಿ ವಾಟ್ಸ್ಆ್ಯಪ್ – 200 ಕೋಟಿ ಬಳಕೆದಾರರಿರುವ ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಆ್ಯಪ್ – ಬಳಕೆದಾರರು ನಂಬಿರುವುದಕ್ಕಿಂತ ಅಥವಾ ನಿರೀಕ್ಷಿಸಿರುವುದಕ್ಕಿಂತ ಅತ್ಯಲ್ಪ ಖಾಸಗಿತನವನ್ನು ಹೊಂದಿದೆ. ಪ್ರೊಪಬ್ಲಿಕಾದ ತನಿಖೆ, ಡಾಟಾ, ದಾಖಲೆಗಳು, ಹಾಲಿ ಹಾಗೂ ಮಾಜಿ ಉದ್ಯೋಗಿಗಳು, ಗುತ್ತಿಗೆನೌಕರರೊಂದಿಗೆ ನಡೆಸಿದ ಹತ್ತಾರು ಸಂದರ್ಶನಗಳು, 2014ರಲ್ಲಿ ಫೇಸ್‌ಬುಕ್ ವಾಟ್ಸ್ಆ್ಯಪ್ ಅನ್ನು ಖರೀದಿಸಿದಾಗಿನಿಂದ ಸುರಕ್ಷತೆಯ ವಿಷಯಗಳನ್ನು ಉಪೇಕ್ಷೆ ಮಾಡುತ್ತಲೇ ಬಂದಿವೆ ಎಂಬುದನ್ನು ಬಯಲು ಮಾಡುತ್ತವೆ.
ಕಳೆದ ವರ್ಷ ಅಮೆರಿಕದ ಭದ್ರತೆ ಮತ್ತು ವಿನಿಮಯ ಆಯೋಗಕ್ಕೆ ಗೌಪ್ಯ ವಿಷಲ್‌ಬ್ಲೋವರ್ ಅವರಿಂದ ಬಂದ ದೂರು, ಈ ಕಂಟೆಂಟ್ ಮಾಡರೇಟರ್‌ಗಳು ವಾಟ್ಸ್ಆ್ಯಪ್‌ಗೆ ಕೆಲಸ ಮಾಡುತ್ತಿರುವ ಸಂಗತಿಯನ್ನು ಖಚಿತಪಡಿಸಿತು. ಪ್ರೊಪಬ್ಲಿಕಾಗೆ ದೊರೆತಿರುವ ಈ ದೂರಿನ ಪ್ರತಿ, ಬಳಕೆದಾರರ ಮೆಸೇಜ್‌ಗಳು, ಫೋಟೋ ಮತ್ತು ವಿಡಿಯೋಗಳನ್ನು, ಖಾತೆದಾರರ ಮಾಹಿತಿಯನ್ನು ಪರಿಶೀಲಿಸಲು ಹೊರಗುತ್ತಿಗೆದಾರರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತೀವ್ರವಾಗಿ ಬಳಸುತ್ತಿರುವ ವಿವರಗಳನ್ನು ನೀಡುತ್ತದೆ. ಬಳಕೆದಾರರ ಖಾಸಗಿತನವನ್ನು ಕಾಯುವ ವಾಟ್ಸ್ಆ್ಯಪ್ ಎಂದು ಹೇಳುತ್ತದೆ, ಆದರೆ ಇದು ಸುಳ್ಳು ಎಂದು ದೂರತ್ತದೆ. ಆದರೆ ಈ ಬಗ್ಗೆ ಕಂಪನಿಯ ವಕ್ತಾರರು ಹೇಳುವುದು, ನಾವು ಅಂತಹ ಯಾವುದೇ ದೂರಿನ ಬಗ್ಗೆ ಕೇಳಿಲ್ಲ”. ಭದ್ರತೆ ಮತ್ತು ವಿನಿಮಯ ಆಯೋಗ ಕೂಡ ಯಾವುದೇ ಸಾರ್ವಜನಿಕ ಕ್ರಮವನ್ನು ಕೈಗೊಂಡಿಲ್ಲ ಹಾಗೂ ಆಯೋಗವೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಇದನ್ನೂ ಓದಿ: ಮೆಸೆಂಜರ್‌ನ ವಾಯ್ಸ್ ಮತ್ತು ವಿಡಿಯೊ ಕರೆಗಳಿಗೆ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ನೀಡಲಿರುವ ಫೇಸ್‌ಬುಕ್!
ಫೇಸ್‌ಬುಕ್ ಕಂಪನಿಯು ವಾಟ್ಸ್ಆ್ಯಪ್ ಬಳಕೆದಾರರಿಂದ ಯಾವ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುತ್ತದೆ, ಸಂಗ್ರಹಿಸಿದ ಮಾಹಿತಿಯನ್ನು ಏನು ಮಾಡುತ್ತದೆ ಮತ್ತು ಕಾನೂನು ಜಾರಿಗೊಳಿಸುವ ಅಧಿಕಾರಸ್ಥ ಸಂಸ್ಥೆಗಳೊಂದಿಗೆ ಎಷ್ಟು ಪ್ರಮಾಣದ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂಬ ಮಾಹಿತಿಯನ್ನು ಮುಚ್ಚಿಟ್ಟಿದೆ. ಉದಾಹರಣೆಗೆ ವಾಟ್ಸ್‌ಆಪ್ ಮೆಟಾಡೇಟಾ, ಎನ್‌ಕ್ರಿಪ್ಟ್ ಆಗಿರುವ ದಾಖಲೆಗಳನ್ನು ಹಂಚಿಕೊಳ್ಳುತ್ತದೆ. ಈ ಮಾಹಿತಿ ಬಳಕೆದಾರರ ಚಟುವಟಿಕೆಯ ಬಗ್ಗೆ ಕಾನೂನು ಕ್ರಮಕೈಗೊಳ್ಳುವ ಅಧಿಕಾರ ಸಂಸ್ಥೆಗಳಿಗೆ -ನ್ಯಾಯ ಇಲಾಖೆ- ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಸಿಗ್ನಲ್‌ನಂತಹ ಪ್ರತಿಸ್ಪರ್ಧಿ ಸಂಸ್ಥೆ, ಉದ್ದೇಶಪೂರ್ವಕವಾಗಿ ಬಳಕೆದಾರರ ಮೆಟಾಡೇಟಾವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಂಗ್ರಹಿಸುತ್ತದೆ. ಹೀಗೆ ಮಾಡುವ ಮೂಲಕ ಬಳಕೆದಾರರ ಖಾಸಗಿತನದಲ್ಲಿ ಅತಿಕ್ರಮಣ ಮಾಡುವುದನ್ನು ಆದಷ್ಟು ತಗ್ಗಿಸುತ್ತದೆ. ಹಾಗಾಗಿ ಯಾವುದೇ ಕಾನೂನು ಕ್ರಮಕೈಗೊಳ್ಳುವ ಸಂಸ್ಥೆಗಳಿಗೆ ಕಡಿಮೆ ಮಾಹಿತಿಯನ್ನು ಒದಗಿಸುತ್ತದೆ ( ಈ ವಿಷಯವಾಗಿ ವಾಟ್ಸ್‌ಆಪ್ ಯಾವುದೇ ಕಾನೂನಾತ್ಮಕ ಮನವಿಗಳಿಗೆ ಸ್ಪಂದಿಸುತ್ತದೆ ಎಂದು ಅದರ ವಕ್ತಾರರು ಹೇಳಿದ್ದು, ‘ ನಿರ್ದಿಷ್ಟ ವ್ಯಕ್ತಿ ಮಸೇಜ್ ಮಾಡುವ ಕುರಿತು ರಿಯಲ್ ಟೈಮ್ -ಅಂದರೆ ಘಟನೆ ನಡೆಯುತ್ತಿರುವ ಸಮಯದಲ್ಲೇ ಇನ್ನೊಂದೆಡೆ ಇರುವ ವ್ಯಕ್ತಿಗೆ ಅದೇ ಸಮಯದಲ್ಲಿ ಸಿಗುವಂತೆ – . ಮಾಹಿತಿ ನೀಡಲಾಗುವುದು”).
ಈ ರೀತಿಯ ವಾಟ್ಸ್‌ಆಪ್ ಬಳಕೆದಾರರ ಮಾಹಿತಿ ಸಂಗ್ರಹಿಸುವ ಮೂಲಕ, ಖಜಾನೆ ಇಲಾಖೆಯ ಉದ್ಯೋಗಿಯೊಬ್ಬರ ಬಲವಾದ ಪ್ರಕರಣವನ್ನು ಕಟ್ಟುವುದಕ್ಕೆ ನೆರವಾಗಿದೆ ಎಂಬುದು ಪ್ರೊ ಪಬ್ಲಿಕಾಕ್ಕೆ ತಿಳಿದು ಬಂದಿದೆ. ಬಝ್‌ಫೀಡ್ ನ್ಯೂಸ್ ಎಂಬ ಸುದ್ದಿ ಸಂಸ್ಥೆಗೆ ಗೌಪ್ಯ ದಾಖಲೆಗಳನ್ನು ನೀಡುವ ಮೂಲಕ ಅಮೆರಿಕ ಬ್ಯಾಂಕ್‌ಗಳಿಗೆ ಹರಿದು ಬರುತ್ತಿರುವ ಅಕ್ರಮ ಹಣಕ್ಕೆ ಸಂಬಂಧಿಸಿದ ಹಗರಣ ಬಯಲು ಮಾಡುವುದಕ್ಕೆ ಆ ಉದ್ಯೋಗಿ ನೆರವಾಗಿದ್ದರು. ಈ ಸಂಬಂಧ ದಾಖಲಾದ ಪ್ರಕರಣಕ್ಕೆ ವಾಟ್ಸ್‌ಆಪ್ ನೀಡಿದ ಮಾಹಿತಿ ಉದ್ಯೋಗಿಯನ್ನು ತಪ್ಪಿತಸ್ಥನನ್ನಾಗಿ ಮಾಡುವುದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಿತು ಎಂಬ ಬಗ್ಗೆ ಪ್ರೊಪಬ್ಲಿಕಾಕ್ಕೆ ವಿವರಗಳು ಸಿಕ್ಕಿವೆ.
ಉಳಿದ ಸೋಷಿಯಲ್ ಮೀಡಿಯಾ ಮತ್ತು ಸಂವಹನ ವೇದಿಕೆಗಳಂತೆ, ವಾಟ್ಸ್‌ಆಪ್ ಖಾಸಗಿತನ ಬಯಸುವ ಬಳಕೆದಾರರು ಮತ್ತು ಕಾನೂನು ಸಂಸ್ಥೆಗಳ ನಡುವೆ ಸಿಲುಕಿದೆ- ಯಾಕೆಂದರೆ ಕಾನೂನು ಸಂಸ್ಥೆಗಳು ಅಪರಾಧ ಮತ್ತು ಆನ್‌ಲೈನ್ ಶೋಷಣೆಯನ್ನು ತಡೆಯುವುದಕ್ಕೆ ವಾಟ್ಸ್‌ಆಪ್‌ನತ್ತ ಮಾಹಿತಿಗಾಗಿ ನೋಡುತ್ತವೆ. ವಾಟ್ಸ್‌ಆಪ್ ಈ ಬಗ್ಗೆ ಯಾವುದೇ ಗೊಂದಲ ಸ್ಥಿತಿಯನ್ನು ಗೊಂದಲವೆಂದು ಭಾವಿಸುವುದೇ ಇಲ್ಲ. ‘ ವಾಟ್ಸ್‌ಆಪ್‌ನ ಮುಖ್ಯಸ್ಥ ಎಂಬ ಹುದ್ದೆಯಲ್ಲಿರುವ ವಿಲ್ ಕ್ಯಾತ್‌ಕಾರ್ಟ್, ಯೂಟ್ಯೂಬ್ ಸಂದರ್ಶನವೊಂದರಲ್ಲಿ, ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಮೂಲಕ ಬಳಕೆದಾರರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಪರಾಧಗಳನ್ನು ತಡೆಯುವಲ್ಲಿ ಕಾನೂನು ಸಂಸ್ಥೆಗಳ ಜೊತೆಗೆ ಕೆಲಸ ಮಾಡುವುದು, ಎರಡೂ ಸಾಧ್ಯವೆಂದು ನನಗೆ ಅನ್ನಿಸುತ್ತದೆ” ಎಂದು ಹೇಳಿದ್ದಾರೆ.
ಖಾಸಗಿತನ ಮತ್ತು ಕಾನೂನು ಸಂಸ್ಥೆಗಳಿಗೆ ಮಾಹಿತಿ ಹಂಚಿಕೊಳ್ಳುವ ಉದ್ವಿಗ್ನತೆಗೆ ಎರಡನೆಯ ಒತ್ತಡವೂ ಇದೆ. ಅದು ಫೇಸ್‌ಬುಕ್ ವಾಟ್ಸ್‌ಆಪ್‌ನಿಂದ ಹಣ ಮಾಡಬೇಕು ಎಂಬುದು. 2014ರಲ್ಲಿ 22 ಬಿಲಿಯನ್ ಡಾಲರ್ ಕೊಟ್ಟು ವಾಟ್ಸ್‌ಆಪ್ ಖರೀದಿ ಮಾಡಿದಾಗಿನಿಂದಲೂ, ಬಳಕೆದಾರರಿಗೆ ಒಂದೇ ಒಂದು ಪೈಸೆಯಷ್ಟು ಶುಲ್ಕ ಹಾಕದ ಈ ಸೇವೆಯಿಂದ ಹೇಗೆ ಲಾಭ ಮಾಡುವುದು ಎಂದು ಯೋಚಿಸುತ್ತಲೇ ಇದೆ.
ಈ ಜಟಿಲ ಸಮಸ್ಯೆ ಕಾಲಾನುಕ್ರಮದಲ್ಲಿ ಬಳಕೆದಾರು, ಕಾನೂನು ರೂಪಿಸುವವರು ಮತ್ತು ಇಬ್ಬರ ಕೋಪಕ್ಕೂ ಕಾರಣವಾಗಿದೆ. ವಾಟ್ಸ್‌ಆಪ್‌ನಿಂದ ಹಣ ಮಾಡಬೇಕು ಎಂಬುದು 2016ರಲ್ಲಿ ಫೇಸ್‌ಬುಕ್ ನಿರ್ಧಾರಗಳಲ್ಲಿ ಒಂದು. ಆಗಿನಿಂದಲೇ ಫೇಸ್‌ಬುಕ್‌ಗೆ ವಾಟ್ಸ್‌ಆಪ್ ಬಳಕೆದಾರರ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಯುರೋಪಿಯನ್ ಒಕ್ಕೂಟದ ಮುಂದೆ ತನ್ನ ಹೇಳಿಕೆ ನೀಡುವಾಗ ತಾಂತ್ರಿಕವಾಗಿ ಇದು ಅಸಾಧ್ಯವಾದದ್ದು ಫೇಸ್‌ಬುಕ್ ಹೇಳಿತ್ತು. ಇದೇ ರೀತಿಯ ವಿವಾದಾತ್ಮಕ ಯೋಜನೆಯೊಂದಕ್ಕೆ ಕಾರಣವಾಗಿತ್ತು. ಅದು ವಾಟ್ಸ್‌ಆಪ್‌ನಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡುವ ಯೋಜನೆ. 2019ರಲ್ಲಿ ಇದನ್ನು ಫೇಸ್‌ಬುಕ್ ಕೈಬಿಟ್ಟಿತು. ಲಾಭ ಮಾಡಬೇಕೆನ್ನುವ ಉದ್ದೇಶ ಕಳೆದ ಜನವರಿಯಲ್ಲಿ ಚಾಲನೆ ಪಡೆದು ಇನ್ನೊಂದು ಯೋಜನೆಯಲ್ಲೂ ಇತ್ತು. ವಾಟ್ಸ್‌ಆಪ್‌ನಲ್ಲಿ ಉದ್ಯಮಗಳ ವಿನಿಮಯಕ್ಕೆಂದು ಹೊಸ ಖಾಸಗಿ ನೀತಿಯನ್ನು ಪರಿಚಯಿಸಲಾಯಿತು. ಇದು ಉದ್ಯಮಗಳು ಬಳಕೆದಾರರ ಮಾಹಿತಿಯನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಈ ಘೋಷಣೆಯಿಂದಾಗಿ ಬಳಕೆದಾರರು ದೊಡ್ಡ ಸಂಖ್ಯೆಯಲ್ಲಿ ವಾಟ್ಸ್‌ಆಪ್ ತೊರೆದು ಪ್ರತಿಸ್ಪರ್ಧಿ ಆಪ್‌ಗಳತ್ತ ಗುಳೆ ಹೋದರು.
ಇದನ್ನೂ ಓದಿ: ಸರ್ಕಾರದ ಹೊಸ ಐಟಿ ಮಾರ್ಗಸೂಚಿ: ಬಳಕೆದಾರರ ಖಾಸಗಿತನ ರಕ್ಷಿಸಲು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್ ಮೊರೆ
ವಾಟ್ಸ್‌ಆಪ್ ಉಗ್ರವಾದ ಉದ್ಯಮ ಯೋಜನೆಯಾಗಿ ಕಂಪನಿಗಳಿಗೆ ಶುಲ್ಕ ಪಾವತಿಸುವ ಸೇವೆಗಳನ್ನು ನೀಡುತ್ತಿದೆ – ವಾಟ್ಸ್‌ಆಪ್ ಮೂಲಕ ಹಣ ಪಾವತಿಸುವ ಸೇವೆಯನ್ನು ಬಳಕೆದಾರರಿಗೆ ನೀಡುವುದು ಮತ್ತು ಗ್ರಾಹಕ ಸೇವೆಯ ಚಾಟ್‌ಗಳನ್ನು ನಿರ್ವಹಿಸುವುದು ಇತ್ಯಾದಿ. – ಈ ಸೇವೆಗಳು ಅನುಕೂಲಕರ, ಆದರೆ ಖಾಸಗಿತನ ಇಲ್ಲಿ ರಕ್ಷಣೆ ಅತ್ಯಲ್ಪ. ಇದರ ಪರಿಣಾಮ ಗೊಂದಲಕರವಾಗಿದ್ದು, ಎರಡು ಹಂತದ ಖಾಸಗಿತನ ವ್ಯವಸ್ಥೆಯೊಳಗೆ, ಯಾವ ಬಳಕೆದಾರರು ಉದ್ಯಮಗಳೊಂದಿಗೆ ಸಂವಹನ ನಡೆಸಲು ಅರಂಭಿಸುತ್ತಾರೊ, ಆಗ ಎಂಡ್ ಟು ಎಂಟ್ ಎನ್‌ಕ್ರಿಪ್ಷನ್ ಎಂಬ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಉಲ್ಲಂಘನೆಯಾಗುವುದು ಸ್ಪಷ್ಟವಾಯಿತು.
ಆದರೆ ಡಿಸೆಂಬರ್‌ನಲ್ಲಿ ಸಿದ್ಧಪಡಿಸಿದ್ದ ಮಾರ್ಕೆಟಿಂಗ್ ಪ್ರೆಸೆಂಟೇಷನ್‌ನಲ್ಲಿ ವಾಟ್ಸ್ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದನ್ನು ಕಾಣಬಹುದು. ಅದರಂತೆ, ‘ ಖಾಸಗಿತನ ಬಹುಮುಖ್ಯವಾಗಿ ವಿಷಯವಾಗಿ ಉಳಿಯಲಿದೆ” ಎನ್ನುತ್ತದೆ. ಆದರೆ ಇದೇ ವೇಳೆ ಅತ್ಯಂತ ತುರ್ತು ಸಂಗತಿಯೊಂದನ್ನೂ ಅದು ತಿಳಿಸುತ್ತದೆ. ಅದೇನೆಂದರೆ, ನಮ್ಮ ಭವಿಷ್ಯದ ಉದ್ಯಮದ ಉದ್ದೇಶಗಳನ್ನು ಒಳಗೊಳ್ಳುವ ಬೆಳಕಿಂಡಿಯೊಂದನ್ನು ತೆರೆಯುವ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.
(ಮೂಲ ವರದಿ: ಪ್ರೊಪಬ್ಲಿಕಾ.ಆರ್ಗ್‌ನದ್ದು, ಕನ್ನಡಕ್ಕೆ: ಟೆಕ್ ಕನ್ನಡ )