Homeರಂಜನೆಕ್ರೀಡೆ'ಸಾರ್ವಕಾಲಿಕ ಶ್ರೇಷ್ಠ ಅಥ್ಲೇಟ್' ಎಂದು ಕರೆಯಬೇಡಿ: ನೀರಜ್‌ ಚೋಪ್ರಾ ಮನವಿ

‘ಸಾರ್ವಕಾಲಿಕ ಶ್ರೇಷ್ಠ ಅಥ್ಲೇಟ್’ ಎಂದು ಕರೆಯಬೇಡಿ: ನೀರಜ್‌ ಚೋಪ್ರಾ ಮನವಿ

- Advertisement -
- Advertisement -

ಜಾವೆಲಿನ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಗೆದ್ದ ನಂತರ ನೀರಜ್‌ ಚೋಪ್ರಾ ಅವರನ್ನು ಭಾರತದ ಸಾರ್ವಕಾಲಿಕ ಶ್ರೇಷ್ಠ ಅಥ್ಲೇಟ್ ಎಂದು ಕರೆಯಲಾಗುತ್ತಿದೆ. ಆದರೆ ಚೋಪಾ ಅವರು ಅದನ್ನು ಒಪ್ಪಿಕೊಳ್ಳುತ್ತಿಲ್ಲ, ನನಗೆ ಕೇವಲ ವಿಶ್ವ ಚಾಂಪಿಯನ್ ಚಿನ್ನ ಅಷ್ಟೇ ಗೆಲ್ಲಲು ಬಾಕಿ ಉಳಿದಿದೆ ಎಂದು ಜನರು ಹೇಳುತ್ತಿದ್ದರು. ಅದನ್ನು ನಾನು ಗದ್ದಾಯಿತು ಎಂದು ಹೇಳಿದ್ದಾರೆ.

ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಗೌರವದೊಂದಿಗೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.

ಬುಡಾಪೆಸ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ ನೀರಜ್‌, ಜಾವೆಲಿನ್‌ನ್ನು 88.17 ಮೀ. ದೂರ ಎಸೆಯುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಆರು ಎಸೆತಗಳ ಅವಕಾಶವಿದ್ದ ಫೈನಲ್‌ನ ಎರಡನೇ ಪ್ರಯತ್ನದಲ್ಲಿ ಅವರಿಂದ ಈ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊಟ್ಟ ಮೊದಲ ಚಿನ್ನದ ಪದಕ ಇದಾಗಿದೆ.

ಛೋಪ್ರಾ ಅವರ ನಿಕಟ ಪ್ರತಿಸ್ಪರ್ಧಿ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದು, ಜಾಕುಬ್ ವದ್ಲೇಚ್ 86.67 ಮೀಟರ್ ಸಾಧನೆ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ವಿನಮ್ರತೆಗೆ ಹೆಸರಾಗಿರುವ ನೀರಜ್‌ ಚೋಪ್ರಾ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಅಥ್ಲೇಟ್ ಎಂಬ ಚರ್ಚೆಯಲ್ಲಿ ಒಳಗೊಳ್ಳಲು ಇಷ್ಟಪಟ್ಟಿಲ್ಲ. ”ನಾನು ಸಾರ್ವಕಾಲಿಕ ಶ್ರೇಷ್ಠ ಅಥ್ಲೇಟ್ ಎಂಬ ಮಾತನ್ನು ಒಪ್ಪಲಾರೆ, ನನಗೆ ಕೇವಲ ವಿಶ್ವ ಚಾಂಪಿಯನ್ ಚಿನ್ನ ಅಷ್ಟೇ ಗೆಲ್ಲುವುದು ಬಾಕಿ ಉಳಿದಿದೆ ಎಂದು ಜನರು ಹೇಳುತ್ತಿದ್ದರು. ಅದನ್ನು ನಾನು ಗದ್ದಾಯಿತು. ಆದರೆ ಸಾಧಿಸಲು ಇನ್ನೂ ನನ್ನ ಎದುರು ಹಲವು ಗುರಿಗಳಿವೆ, ಅದರ ಕಡೆ ನನ್ನ ಗಮನ ಇರಲಿದೆ. ನಾನು ಇದನ್ನು (ಸಾವಕಾಲಿಕ ಶ್ರೇಷ್ಠ) ಹೇಳಿಕೊಳ್ಳಲು ಬಯಸುವುದಿಲ್ಲ” ಎಂದು ಜೋಪಾ ಪ್ರತಿಕ್ರಿಯಿಸಿದರು.

ಸಾವಕಾಲಿಕ ಶ್ರೇಷ್ಠ ಅಥ್ಲೇಟ್ ಎನಿಸಿಕೊಳ್ಳಬೇಕದಾರೆ, ಅದು ಜಾನ್‌ ಜೆಲೆಸ್ಕಿ ರೀತಿ ಇರಬೇಕು” ಎಂದು ಚೋಪ್ರಾ ಅವರು, ಜೆಕೊಸ್ಲಾವಾಕಿಯಾದ ವಿಶ್ವದಾಖರವೀರನ ಹೆಸರು ಪುಸ್ತಾಪಿಸಿದರು. ಜೆಲೆಸ್ಕಿ ಜಾವೆಲಿನ್‌ನಲ್ಲಿ ದಂತಕತೆಯಾಗಿದ್ದು, ಹಲವು ವರ್ಷಗಳಿಂದ ವಿಶ್ವದಾಖಲೆ (98.48 ಮೀ)ಯನ್ನು ತಮ್ಮ ಹೆಸರಿನಲ್ಲೇ ಹೊಂದಿದ್ದಾರೆ. ಮೂರು ಬಾರಿ ಒಲಿಂಪಿಕ್ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಕೂಡ.. ಚೋಪ್ರಾ ಅವರಿಗೆ ಜೆಲೆನ್‌ಸ್ಕಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಜಾವೆಲಿನ್ ಥ್ರೋ ಕ್ರೀಡೆಯನ್ನು ಯುದ್ಧಭೂಮಿಯಂತೆ ಬಿಂಬಿಸಿದ ನೆಟ್ಟಿಗರು: ಭಾರತ-ಪಾಕ್ ಬೆಳೆಯುತ್ತಿರುವುದು ಸಂತೋ‍ಷ ತಂದಿದೆ ಎಂದ ಚೋಪ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...