Homeರಂಜನೆಕ್ರೀಡೆಜಾವೆಲಿನ್ ಥ್ರೋ ಕ್ರೀಡೆಯನ್ನು ಯುದ್ಧಭೂಮಿಯಂತೆ ಬಿಂಬಿಸಿದ ನೆಟ್ಟಿಗರು: ಭಾರತ-ಪಾಕ್ ಬೆಳೆಯುತ್ತಿರುವುದು ಸಂತೋ‍ಷ ತಂದಿದೆ ಎಂದ ಚೋಪ್ರಾ

ಜಾವೆಲಿನ್ ಥ್ರೋ ಕ್ರೀಡೆಯನ್ನು ಯುದ್ಧಭೂಮಿಯಂತೆ ಬಿಂಬಿಸಿದ ನೆಟ್ಟಿಗರು: ಭಾರತ-ಪಾಕ್ ಬೆಳೆಯುತ್ತಿರುವುದು ಸಂತೋ‍ಷ ತಂದಿದೆ ಎಂದ ಚೋಪ್ರಾ

- Advertisement -
- Advertisement -

ಭಾನುವಾರ ರಾತ್ರಿ ಬುಡಾಪೆಸ್ಟ್‌ನಲ್ಲಿ ನಡೆದ 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ನೀರಜ್ 88.17 ಮೀಟರ್‌ಗಳ ಬೃಹತ್ ಎಸೆತದೊಂದಿಗೆ ಚಾಂಪಿಯನ್ ಆದರು ಮತ್ತು ಅರ್ಷದ್ ತಮ್ಮ ಋತುವಿನ ಅತ್ಯುತ್ತಮ ದೂರವಾದ 87.82 ಮೀಟರ್‌ಗಳನ್ನು ಸಾಧಿಸುವ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧದಂತೆ ಪರಿಭಾವಿಸಿ ಚರ್ಚೆ ನಡೆಸಲಾಗುತ್ತಿದೆ. ಈ ಹಿಂದೆ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸ್ಪರ್ಧೆಗಿಳಿದರೆ, ಅದನ್ನು ಸಾಕಷ್ಟು ಜನರು ಯುದ್ಧದಂತೆ ಭಾವಿಸುತ್ತಿದ್ದರು, ಮತ್ತೆ ಆ ಪಂದ್ಯವು ಅತಿಹೆಚ್ಚು ಸಂಖ್ಯೆಯ ಜನರನ್ನು ಸೆಳೆಯುತ್ತದೆ. ಕ್ರಿಕೆಟ್‌ನಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿ, ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ “ವಿಶ್ವ ಕ್ರೀಡೆಗಳಲ್ಲಿ ಅತಿದೊಡ್ಡ ಸ್ಪರ್ಧೆ” ಎಂದು ಪ್ರಶಂಸಿಸಲಾಗುತ್ತದೆ. ಅದರಂತೆ ಹಾಕಿ ಮತ್ತು ಕಬಡ್ಡಿಯಲ್ಲೂ ಕಂಡುಬರುತ್ತದೆ. ಇದೀಗ ನೀರಜ್ ಮತ್ತು ಅರ್ಷದ್ ಅವರ ಜಾವೆಲಿನ್ ಥ್ರೋ ನೋಡಿದ ಬಳಿಕ ಈ ಕ್ರೀಡೆಯೂ ಭಾರತ ಮತ್ತು ಪಾಕಿಸ್ತಾನ ನಡುವಿನ ಹೊಸ ಯುದ್ಧಭೂಮಿ ಎಂಬಂತೆ ಬಿಂಬಿಸಲಾಗುತ್ತಿದೆ.

ಭಾರತ-ಪಾಕಿಸ್ತಾನ ಬೆಳೆಯುತ್ತಿರುವುದು ನಮಗೆ ಸಂತೋ‍ಷ ತಂದಿದೆ: ನೀರಜ್ ಚೋಪ್ರಾ

ನೀರಜ್ ಚೋಪ್ರಾ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ”ಕಾರ್ಯಕ್ರಮದ ನಂತರ ನಾನು ಅರ್ಷದ್ ನದೀಮ್ ಅವರೊಂದಿಗೆ ಮಾತನಾಡಿದೆ ಮತ್ತು ನಾವು ಪರಸ್ಪರ ಸಂತೋಷವಾಗಿದ್ದೇವೆ. ಎರಡೂ ದೇಶಗಳು ಬೆಳೆಯುತ್ತಿರುವುದನ್ನು ನೋಡಿ ನಮಗೆ ಸಂತೋಷವಾಯಿತು. ಯುರೋಪಿಯನ್ ಕ್ರೀಡಾಪಟುಗಳ ಮುಂದೆ ನಾವು ಯಶಸ್ವಿಯಾಗಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ಪೈಪೋಟಿ ಯಾವಾಗಲೂ ಇರುತ್ತದೆ” ಎಂದು ಹೇಳಿದ್ದಾರೆ.

ಈ ಹಿಂದೆ ಅರ್ಷದ್ ನದೀಮ್ ಅವರಿಗೆ ಸಾಮಾಜಿಕ ಮಾಧ್ಯಮಗಳಿಗೆ ಹೀಯಾಳಿಸಿದಾಗ ಪ್ರತಿಕ್ರಿಯಿಸಿದ್ದ ನೀರಜ್ ಚೋಪ್ರಾ ಅವರು, ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಮಾತುಗಳು ನಮಗೆ ಹಿಂಸೆಯಾಗದಿರಲಿ ಎಂದು ಹೇಳಿದ್ದರು.

ಈ ವಿಚಾರವಾಗಿ ನೀರಜ್ ಚೋಪ್ರಾ  ಅವರು ಟ್ವಿಟರ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದರು. ಆ ವಿಡಿಯೋದಲ್ಲಿ ”ಎಲ್ಲರಿಗೂ ನಮಸ್ಕಾರ ಮೊದಲಿಗೆ ನನ್ನನ್ನು ಬೆಂಬಲಿಸಿದ, ಪ್ರೀತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೆಲ್ಲರೂ ಪ್ರೋತ್ಸಾಹಿಸಿದ ರೀತಿಗೆ ಖುಷಿಯಾಗುತ್ತಿದೆ. ಅದೇ ರೀತಿ ಈಗ ಒಂದು ವಿವಾದ ಅದೇ ರೀತಿ ನಾನು ಟೋಕಿಯೋ ಒಲಿಂಪಿಕ್ಸ್‌ ಜಾವಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಆರ್ಶದ್ ನದೀಮ್ ಅವರ ಬಳಿಯಿದ್ದ ಜಾವೆಲಿನ್‌ ಪಡೆದು ಎಸೆದೆ. ಇದನ್ನು ದೊಡ್ಡ ವಿವಾದ ಮಾಡುತ್ತಿದ್ದಾರೆ. ಇದೊಂದು ಅತ್ಯಂತ ಸರಳ ಹಾಗೂ ಸಹಜ ಪ್ರಕ್ರಿಯೆ. ಜಾವಲಿನ್‌ ಪಟು ತಮ್ಮದೇ ಆದ ಜಾವಲಿನ್‌ ಹೊಂದಿರುತ್ತಾರೆ. ಅದನ್ನು ಬೇರೆಯವರು ಸಹ ಬಳಸುತ್ತಾರೆ. ಅದೇ ರೀತಿ ನನ್ನ ಜಾವೆಲಿನ್ ಹಿಡಿದುಕೊಂಡು ಆರ್ಶದ್ ನದೀಂ ಅಭ್ಯಾಸ ನಡೆಸುತ್ತಿದ್ದರು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಈಗ ನನ್ನ ಸ್ಪರ್ಧೆಯಿದೆ ಎಂದು ಅವರ ಬಳಿಯಿದ್ದ ನನ್ನ ಜಾವೆಲಿನ್ ಪಡೆದುಕೊಂಡು ನನ್ನ ಸ್ಪರ್ಧೆ ಪೂರ್ತಿಗೊಳಿಸಿದೆ. ಇದು ಅಂತಹ ದೊಡ್ಡ ವಿಷಯ ಕೂಡ ಅಲ್ಲ. ನನಗೆ ದುಖಃವಿದೆ. ನನ್ನ ಮನವಿ ಏನೆಂದರೆ, ಈ ರೀತಿ ಮಾಡಬೇಡಿ. ಕ್ರೀಡೆ ಎಲ್ಲರನ್ನೂ ಒಟ್ಟಾಗಿ ಸಾಗುವುದನ್ನು ಕಲಿಸುತ್ತದೆ. ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಮಾತುಗಳು ನಮಗೆ ಹಿಂಸೆಯಾಗದಿರಲಿ” ಎಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...