Homeಕರ್ನಾಟಕಸೌಜನ್ಯಾ ಪ್ರಕರಣ: ಚಲೋ ಬೆಳ್ತಂಗಡಿಗೆ ಚಾಲನೆ

ಸೌಜನ್ಯಾ ಪ್ರಕರಣ: ಚಲೋ ಬೆಳ್ತಂಗಡಿಗೆ ಚಾಲನೆ

- Advertisement -
- Advertisement -

ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಧರಣಿ ಬೆಳ್ತಂಗಡಿಯಲ್ಲಿ ಆರಂಭಗೊಂಡಿದೆ.

ಜನಪರ ಸಂಘಟನೆಗಳ ಒಕ್ಕೂಟ ದ.ಕ. ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ, ಕರ್ನಾಟಕ ಇದರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನಪರ ಸಂಘಟನೆಗಳು ಒಟ್ಟಾಗಿ ‘ಚಲೋ ಬೆಳ್ತಂಗಡಿ’ ಧರಣಿಗೆ ಕರೆ ಕೊಟ್ಟಿದೆ.

ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಜನಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಚಲೋ ಬೆಳ್ತಂಗಡಿ ಮಹಾಧರಣಿಗೆ ಚಾಲನೆ ನೀಡಿದ್ದಾರೆ.

ಧರಣಿಗೆ ಚಾಲನೆ ನೀಡಿದ  ಬಳಿಕ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ, ಸೌಜನ್ಯ ಪ್ರಕರಣದಲ್ಲಿ ಉತ್ತಮವಾಗಿ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮುರುಗನ್ ಅವರನ್ನು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ವರ್ಗಾವಣೆ ಮಾಡಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ತನಿಖಾಧಿಕಾರಿಯನ್ನು ಏಕಾಏಕಿ ಬದಲಾಯಿಸಿದ್ದು ಯಾಕೆ ಎಂದು ವಸಂತ ಬಂಗೇರ ಪ್ರಶ್ನಸಿದ್ದಾರೆ.

ತಹಶೀಲ್ದಾರ್ ಕಚೇರಿ ಬಾಗಿಲು ಹಾಕಿರುವ ದಿನ ಸಂಸದ ನಳಿನ್ ಕುಮಾರ್ ಕಟೀಲು ಧರಣಿ ನಡೆಸುತ್ತಾರೆ. ಈ ಬಗ್ಗೆ ಅವರು ಸಂಸತ್ ನಲ್ಲಿ ಮಾತನಾಡಲು ಮೋದಿ ಅವಕಾಶ ನೀಡಲಿಲ್ಲವೇ? ಸಂಸತ್ ನಲ್ಲಿ ಮಾತನಾಡದೆ ಇಲ್ಲಿ ಮಾತನಾಡಿ ಏನು ಪ್ರಯೋಜನ ಎಂದು ಬಂಗೇರ  ಪ್ರಶ್ನಿಸಿದ್ದಾರೆ.

ಈ ವೇಳೆ ಹೋರಾಟ ಸಮಿತಿಯ ಸಂಚಾಲಕ ಬಿ‌ಎಂ ಭಟ್ ಮಾತನಾಡಿ, ಪ್ರೊ.ನರೇಂದ್ರ ನಾಯಕ್, ಕೆ.ನೀಲಾ, ಮೀನಾಕ್ಷಿ ಬಾಳಿ, ಸಬೀಹಾ ಭೂಮಿಗೌಡ, ಮುನೀರ್ ಕಾಟಿಪಳ್ಳ, ದೇವಿ, ಸುರೇಂದ್ರ ರಾವ್, ಗೌರಮ್ಮ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ: ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ವಿಚಿತ್ರ ಆಗ್ರಹ ಮುಂದಿಟ್ಟ ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...