Homeಕ್ರೀಡೆಕ್ರಿಕೆಟ್ನಂ.1 ಬೌಲರ್‌ ಸ್ಥಾನಕ್ಕೆ ಮರಳಿದ ಮೊಹಮ್ಮದ್‌ ಸಿರಾಜ್‌

ನಂ.1 ಬೌಲರ್‌ ಸ್ಥಾನಕ್ಕೆ ಮರಳಿದ ಮೊಹಮ್ಮದ್‌ ಸಿರಾಜ್‌

- Advertisement -
- Advertisement -

ಭಾರತದ ವೇಗದ  ಬೌಲರ್‌ ಮೊಹಮ್ಮದ್‌ ಸಿರಾಜ್‌ ಎಷ್ಯಕಪ್‌ ಪೈನಲ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನಡೆಸಿದ್ದು, ಇದರ ಬೆನ್ನಲ್ಲೇ ಅವರು ಏಕದಿನ ಪಂದ್ಯದಲ್ಲಿ ನಂ.1ಬೌಲರ್‌ ಸ್ಥಾನಕ್ಕೆ ಮರಳಿದ್ದಾರೆ.

ಅಕ್ಟೋಬರ್‌ 5ರಂದು ನಡೆಯಲಿರುವ ಐಸಿಸಿ ವರ್ಲ್ಡ್‌ ಕಪ್‌ ಹೊಸ್ತಿಲಲ್ಲೇ  ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬುಧವಾರ ಎಂಟು ಸ್ಥಾನಗಳನ್ನು ಮೇಲೇರಿ ಏಕದಿನಗಳ ಬೌಲಿಂಗ್‌ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ.

ಶಿರಾಜ್‌ ಅದ್ಬುತ ಬೌಲಿಂಗ್‌ ಪ್ರದರ್ಶನದ ಮೂಲಕ ಏಶ್ಯಕಪ್‌ ಫೈನಲ್‌ನಲ್ಲಿ 50 ರನ್‌ಗೆ ಶ್ರೀಲಂಕಾವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ 2023ರ ಜನವರಿ ಹಾಗೂ ಮಾರ್ಚ್ ನಡುವೆ ಅಗ್ರ ಸ್ಥಾನದಲ್ಲಿದ್ದರು. ನಂತರ ನಂ.1 ಸ್ಥಾನ ಆಸ್ಟ್ರೇಲಿಯದ ಜೋಶ್ ಹೇಝಲ್ ವುಡ್ ಪಾಲಾಗಿತ್ತು. ಇದೀಗ ಸಿರಾಜ್‌ ಮರಳಿ ನಂ.1 ಸ್ಥಾನವನ್ನು ಪಡೆದಿದ್ದಾರೆ.

ಸಿರಾಜ್ 12.2 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ ನಂತರ ಟ್ರೆಂಟ್ ಬೌಲ್ಟ್, ರಶೀದ್ ಖಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್‌ಗಳನ್ನು ಸಿರಾಜ್‌  ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ಏಶ್ಯಕಪ್ ಫೈನಲ್‌ನಲ್ಲಿ 21 ರನ್‌ಗೆ 6 ವಿಕೆಟ್ ಕಬಳಿಸಿದ್ದ ಸಿರಾಜ್ ಶ್ರೀಲಂಕಾವನ್ನು 50 ರನ್‌ಗೆ ಆಲೌಟ್ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಒಂದೇ ಓವರ್‌ನಲ್ಲಿ ನಾಲ್ಕು-ವಿಕೆಟ್‌ಗಳನ್ನು ಕಬಳಿಸಿದ್ದ ಸಿರಾಜ್ ಇತಿಹಾಸ ನಿರ್ಮಿಸಿದ್ದರು.

ಅಫ್ಘಾನಿಸ್ತಾನದ ಸ್ಪಿನ್ ಜೋಡಿ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ಅವರು ಕೂಡ ತಮ್ಮ ಶ್ರೇಯಾಂಕಗಳನ್ನು ಕ್ರಮವಾಗಿ ನಂ. 4 ಮತ್ತು 5 ನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇದನ್ನು ಓದಿ: “ಒಂದು ದೇಶ ಒಂದು ಚುನಾವಣೆ”: ಇದು ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳ ಮೊತ್ತವೋ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...