Homeಮುಖಪುಟಮಣಿಪುರ: ಭದ್ರತಾ ಅಧಿಕಾರಿಗಳ ವೇಷದಲ್ಲಿ ದುಷ್ಕರ್ಮಿಗಳಿಂದ ಸುಲಿಗೆ, ಬೆದರಿಕೆ

ಮಣಿಪುರ: ಭದ್ರತಾ ಅಧಿಕಾರಿಗಳ ವೇಷದಲ್ಲಿ ದುಷ್ಕರ್ಮಿಗಳಿಂದ ಸುಲಿಗೆ, ಬೆದರಿಕೆ

- Advertisement -
- Advertisement -

ಮಣಿಪುರದಲ್ಲಿ ದುಷ್ಕರ್ಮಿಗಳು ಭದ್ರತಾ ಅಧಿಕಾರಿಗಳಂತೆ ಶಸ್ತ್ರಸಜ್ಜಿತರಾಗಿ ಸ್ಥಳಿಯರನ್ನು ಸುಲಿಗೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಶಾಂತಿ ಮರುಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಕಾರ್ಯದರ್ಶಿ (ಗೃಹ) ಮಹಾರಬಮ್ ಪ್ರದೀಪ್ ಸಿಂಗ್ ಅವರು, ”ದುಷ್ಕರ್ಮಿಗಳು ಪೊಲೀಸ್ ಕಮಾಂಡೋಗಳ ವೇಷ ಧರಿಸಿ ಓಡಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಅವರು ಸುಲಿಗೆ ಮತ್ತು ಬೆದರಿಕೆಯೊಡ್ಡುತ್ತಿದ್ದಾರೆ. ಪೊಲೀಸರು ಪ್ರಾಮಾಣಿಕವಾಗಿ ಶಾಂತಿ ಸ್ತಾಪಿಸುವ ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಅಡ್ಡಿಯುಂಟು ಮಾಡಲಾಗುತ್ತಿದೆ” ಎಂದು ಹೇಳಿದರು.

ಮಣಿಪುರದ ವಿವಿಧ ಕಣಿವೆ ಜಿಲ್ಲೆಗಳಲ್ಲಿ ಸುಲಿಗೆ ಮತ್ತು ಬೆದರಿಕೆಗಳಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಬಂದಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಹಲವಾರು ವ್ಯಾಪಾರಿಗಳು ಮತ್ತು ಉದ್ಯಮಿಗಳು ಈ ಸಶಸ್ತ್ರ ದುಷ್ಕರ್ಮಿಗಳ ಸುಲಿಗೆ ಬೇಡಿಕೆಗಳ ವಿರುದ್ಧ ದೂರು ನೀಡಿದ್ದಾರೆ. ವಿವಿಧ ಬಟ್ಟೆಗಳಿಗೆ 5-10 ಲಕ್ಷದವರೆಗಿನ ಬೇಡಿಕೆ ಇಡಲಾಗಿದೆ, ಅಷ್ಟು ಹಣ ನೀಡುವುದು ಅಸಾಧ್ಯ ಎಂದು ಅಪರಿಚಿತ ಉದ್ಯಮಿಯೊಬ್ಬರು ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

”ಹಣ ನೀಡದಿದ್ದರೆ ಗ್ರೆನೇಡ್‌ ದಾಳಿ ನಡೆಸಲಾಗುತ್ತದೆ ಎಂದು ಬೆದರಿಕೆಯೊಡ್ಡಲಾಗುತ್ತದೆ. ಕೆಲವೊಮ್ಮೆ ಈ ಉಗ್ರರು ಭದ್ರತಾ ಪಡೆಗಳ ವೇಷದಲ್ಲಿ ಬರುತ್ತಾರೆ. ಮಣಿಪುರದ ಹೊರಗಿನ ವ್ಯಾಪಾರಿಗಳು ಸಹ ನಮ್ಮೊಂದಿಗೆ ವ್ಯಾಪಾರ ಮಾಡಲು ಬರುತ್ತಿಲ್ಲ ಏಕೆಂದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ” ಎಂದು ತೌಬಲ್‌ನ ಇನ್ನೊಬ್ಬ ಅಪರಿಚಿತ ವ್ಯಾಪಾರಿ ಪತ್ರಿಕೆಗೆ ತಿಳಿಸಿದರು.

ಮೇ 3 ರಿಂದ ಕುಕಿಗಳು ಮತ್ತು ಮೈತೈಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಷ್ಟೇಅಲ್ಲದೆ ಅತ್ಯಾಚಾರ, ಕೊಲೆ ಮತ್ತು ಪೊಲೀಸ್ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಪ್ರಕರಣಗಳು ನಡೆದಿವೆ.

ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಯೋಧನಿಗೆ ಅಪಹರಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...