Homeಮುಖಪುಟಶಬಾನಾ ಅಜ್ಮಿ ಜೀವಕ್ಕೆ ಅಪಾಯವಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ: ಜಾವೇದ್‌ ಅಖ್ತರ್‌

ಶಬಾನಾ ಅಜ್ಮಿ ಜೀವಕ್ಕೆ ಅಪಾಯವಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ: ಜಾವೇದ್‌ ಅಖ್ತರ್‌

- Advertisement -
- Advertisement -

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತದಲ್ಲಿ ಹಿರಿಯ ನಟ ಶಬಾನಾ ಅಜ್ಮಿ ಗಾಯಗೊಂಡ ನಂತರ, ಅವರ ಪತಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್, ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಅವರು ಮುಂಬೈನ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯಕೀಯ ಪರೀಕ್ಷೆಗಳು ಸಕಾರಾತ್ಮಕವಾಗಿವೆ ಎಂದು ತಿಳಿಸಿದ್ದಾರೆ.

ಜಾವೇದ್ ಬಾಲಿವುಡ್ ಹಂಗಾಮಾ ಜೊತೆ ಮಾತನಾಡಿ “ಚಿಂತಿಸಬೇಡಿ. ಅವಳು ಐಸಿಯುನಲ್ಲಿದ್ದಾಳೆ ಆದರೆ ಎಲ್ಲಾ ಸ್ಕ್ಯಾನ್ ವರದಿಗಳು ಸಕಾರಾತ್ಮಕವಾಗಿವೆ. ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ ಎಂದು ತೋರುತ್ತದೆ. ಶಬಾನಾ ತನ್ನ ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ನಟಿಗೆ ಅಪಾಯವಿಲ್ಲ ಎಂದು ಧಿರುಭಾಯ್ ಅಂಬಾನಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಕೋಕಿಲಾಬೆನ್  ಡಾ.ಸಂತೋಷ್ ಶೆಟ್ಟಿ ಹೇಳಿದ್ದಾರೆ.

ಶನಿವಾರ, ಖಲಾಪುರ ಟೋಲ್ ಬೂತ್ ಬಳಿ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಜ್ಮಿ ಕಾರು ಟ್ರಕ್‌ಗೆ ಗುದ್ದಿದರಿಂದ ಅವರು ಗಾಯಗೊಂಡಿದ್ದರು. ಅವರ ಹಿಂದೆ ಪ್ರತ್ಯೇಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಾವೇದ್ ಯಾವುದೇ ಹಾನಿಗೊಳಗಾಗಲಿಲ್ಲ.

ಶಬಾನಾ ಚಾಲಕ ಅಮ್ಲೇಶ್ ಯೋಗೇಂದ್ರ ಕಾಮತ್ ವಿರುದ್ಧ ಟ್ರಕ್ ನ ಚಾಲಕ ರಾಜೇಶ್ ಪಾಂಡುರಾಂಗ್ ಶಿಂಧೆ ದೂರು ದಾಖಲಿಸಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ. “ಕಾರಿನ ಚಾಲಕರ ದುಡುಕಿನ ಚಾಲನೆಯಿಂದಾಗಿ, ಕಾರು ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು ಅದು ಅಪಘಾತಕ್ಕೆ ಕಾರಣವಾಯಿತು” ಎಂದು ಎಫ್‌ಐಆರ್ ನಲ್ಲಿ ಬರೆಯಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್‌ನಲ್ಲಿ “ಅಪಘಾತದಲ್ಲಿ ಅಜ್ಮಿಶಬಾನಾ ಜಿ ಗಾಯಗೊಂಡ ಸುದ್ದಿ ದುಃಖಕರವಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು. “ಶಬಾನಾ ಅಜ್ಮಿ ಜಿ ಅವರ ಅಪಘಾತವನ್ನು ತಿಳಿದುಕೊಂಡೆ. ಅವರ ತ್ವರಿತ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅನಿಲ್ ಕಪೂರ್, ಟಬು ಮತ್ತು ಸತೀಶ್ ಕೌಶಿಕ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಶನಿವಾರ ರಾತ್ರಿ ಶಬಾನಾ ಅವರನ್ನು ಭೇಟಿಯಾಗಲು ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ಧಾವಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...