Dushyant Dave, ದುಶ್ಯಂತ್ ದವೆ
PC: Free Press Journal

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್‌ಸಿಬಿಎ) ಅಧ್ಯಕ್ಷ ದುಶ್ಯಂತ್ ದವೆ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಬಾರ್ ಅಸೋಸಿಯೇಷನ್‌ನ ನಾಯಕರಾಗಿ ಮುಂದುವರಿಯುವ ಹಕ್ಕನ್ನು ತಾನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಎಸ್‌ಸಿಬಿಎ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದೆ ಎಂದು ಹೇಳಿರುವ ದುಶ್ಯಂತ್ ದವೆ, “ಹೊಸ ಸಮಿತಿಯ ಆಯ್ಕೆಗೆ ಚುನಾವಣೆ ನಡೆಸಲು ನಾವು ಪ್ರಾಮಾಣಿಕವಾಗಿ ನಿರ್ಧರಿಸಿದ್ದೇವೆ. ಕೆಲವು ಸ್ಥಾನಗಳನ್ನು ಈಗಾಗಲೇ ಕೆಲವು ವಕೀಲರು ಕಾಯ್ದಿರಿಸಿರುವುದರಿಂದ ಚುನಾವಣಾ ಸಮಿತಿ ಘೋಷಿಸಿದ ವೇಳಾಪಟ್ಟಿಯ ಪ್ರಕಾರ ಚುನಾವಣೆ ನಡೆಸಲು ಸಾಧ್ಯವಾಗದಿರಬಹುದು. ಅವರನ್ನು ನಾನು ಅರ್ಥ ಮಾಡಿಕೊಂಡಿದ್ದು, ಅವರೊಂದಿಗೆ ಯಾವುದೇ ಜಗಳವಿಲ್ಲ. ಆದರೆ ಈ ಸಂದರ್ಭಗಳಲ್ಲಿ ಅಧ್ಯಕ್ಷನಾಗಿ ಮುಂದುವರೆಯುವುದು ನೈತಿಕವಾಗಿ ತಪ್ಪಾಗುತ್ತದೆ” ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನೀಡಿದ ಸಹಾಯ ಮತ್ತು ಸಹಕಾರಕ್ಕಾಗಿ ದುಶ್ಯಂತ್ ದವೆ ಎಸ್‌ಸಿಬಿಎಯ ಪ್ರತಿಯೊಬ್ಬ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಹೊರಗೆ ಪ್ರತಿಭಟನೆ: ರೈತರ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ವಕೀಲರು!

ಅಷ್ಟೇ ಅಲ್ಲದೆ, ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಕೂಡಾ ಎಸ್‌ಸಿಬಿಎ ಕಾರ್ಯನಿರ್ವಾಹಕ (ಹಿರಿಯ) ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

“ನಾವು ಎಲ್ಲಾ ಸಮಸ್ಯೆಗಳನ್ನು ದಾಟಿ ಗಣನೀಯ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದೇವೆ, ಇದರಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸದಸ್ಯರಲ್ಲಿ ಹೆಚ್ಚಿನ ಜನರಿಗೆ ಸಹಾಯ ಮಾಡಿದ್ದೇವೆ. ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಭೀಕರ ಗಲಭೆಯಲ್ಲಿ ಬಲಿಯಾದವರಿಗೆ ಸಹಾಯ ಮಾಡಲು ನಾವು ಅಭೂತಪೂರ್ವ ಚಾಲನೆ ನೀಡಿದ್ದೇವೆ. ಹೆಚ್ಚುವರಿ ಚೇಂಬರ್‌ಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ನ್ಯಾಯಾಧೀಶರ ಸಮಿತಿಯಿಂದ ಲಿಖಿತ ಒಪ್ಪಿಗೆ ಪಡೆದಿದ್ದೇವೆ. ನಾವು ಲೈಬ್ರರಿ ಒನ್ ಅನ್ನು ನವೀಕರಿಸಿದ್ದು, ಎಲ್ಲಾ ಗ್ರಂಥಾಲಯಗಳಲ್ಲಿ ಸಾಕಷ್ಟು ರಿಪೇರಿ ಮಾಡಿದ್ದೇವೆ” ಎಂದು ಚಂದರ್ ಉದಯ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ವಿವಾದಿತ ಮೂರು ಕೃಷಿ ಕಾಯ್ದೆಗಳಿಗೆ ಸಾಂವಿಧಾನಿಕ ಸವಾಲಿನ ಸಂದರ್ಭದಲ್ಲಿ ದುಶ್ಯಂತ್ ದವೆ ಇತ್ತೀಚೆಗೆ ಕೆಲವು ರೈತ ಸಂಘಗಳನ್ನು ಸುಪ್ರೀಂಕೋರ್ಟ್‌‌ನಲ್ಲಿ ಪ್ರತಿನಿಧಿಸಿದ್ದರು. ಈ ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ನ್ಯಾಯಾಲಯವು ತಡೆಹಿಡಿದಿತ್ತು.

ಇದನ್ನೂ ಓದಿ: ಗುಜರಾತ್‌: ಬ್ರಾಹ್ಮಣ ವಿರೋಧಿ ಬರಹಕ್ಕೆ ದಲಿತ ವಕೀಲನ ಹತ್ಯೆ – SIT ತನಿಖೆಯಲ್ಲಿ ಬಹಿರಂಗ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here