Homeಕರ್ನಾಟಕ‘ಈದಿನ’ ಮಾಧ್ಯಮ ಮೆಗಾ ಸರ್ವೇ: ಕಾಂಗ್ರೆಸ್‌ಗೆ 132-140 ಸ್ಥಾನ - ಸ್ಪಷ್ಟ ಬಹುಮತ

‘ಈದಿನ’ ಮಾಧ್ಯಮ ಮೆಗಾ ಸರ್ವೇ: ಕಾಂಗ್ರೆಸ್‌ಗೆ 132-140 ಸ್ಥಾನ – ಸ್ಪಷ್ಟ ಬಹುಮತ

- Advertisement -
- Advertisement -

‘ಈದಿನ’ ಮಾಧ್ಯಮ ಮಾಡಿರುವ ಮೆಗಾ ಸರ್ವೇ ಇಂದು (ಗುರುವಾರ) ಪ್ರಕಟವಾಗಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದೆ. 132ರಿಂದ 140 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

“ಕಾಂಗ್ರೆಸ್‌ಗೆ ಸ್ಪಷ್ಟವಾದ ಮತ್ತು ಯಾವುದೇ ಆತಂಕಕ್ಕೆ ಎಡೆಯಿಲ್ಲದ ರೀತಿಯ ಬಹುಮತ ಲಭ್ಯವಾಗಲಿದೆ ಎಂದು ಈ ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನೊಂದು ಆಪರೇಷನ್‌ ಕಮಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಹಾಗೆ 113ಅನ್ನು ಸಲೀಸಾಗಿ ದಾಟಲಿದೆ ಎಂದು ತೋರುತ್ತಿದೆ” ಎಂದು ‘ಈದಿನ’ ವರದಿ ಪ್ರಕಟಿಸಿದೆ.

“ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯಿಂದ ಸಿಕ್ಕಿರುವ ಸಂಖ್ಯೆಗಳು ಹೇಳುತ್ತಿವೆ” ಎಂದು ‘ಈದಿನ’ ಹೇಳಿದೆ.

“ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ” ಎಂದು ಅಭಿಪ್ರಾಯ ತಾಳಿದೆ.

2018ರಲ್ಲಿ ಕಾಂಗ್ರೆಸ್‌ 38.1% ಮತದಾರರನ್ನು ಸೆಳೆದಿತ್ತು, ಬಿಜೆಪಿ 36.3%, ಜೆಡಿಎಸ್‌ 18.3%, ಇತರರು 7.4% ಮತಗಳನ್ನು ಪಡೆದಿದ್ದರು. ಈ ಬಾರಿ ಕಾಂಗ್ರೆಸ್‌ 43%, ಬಿಜೆಪಿ 33%, ಜೆಡಿಎಸ್‌ 16%, ಇತರರು 8% ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ನುಡಿದಿದೆ.

ಕಾಂಗ್ರೆಸ್‌ಗೆ 132-140 ಸ್ಥಾನ, ಬಿಜೆಪಿಗೆ 57- 65 ಸ್ಥಾನ, ಜೆಡಿಎಸ್‌ಗೆ 19-25 ಸ್ಥಾನ, ಇತರರು 1-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದಿದೆ ಸರ್ವೇ. ಉತ್ತರ ಕರ್ನಾಟಕದಲ್ಲಿ ಮಿಕ್ಕವರನ್ನು ಕಾಂಗ್ರೆಸ್‌ ಗುಡಿಸಿ ಹಾಕಲಿದ್ದು ದಕ್ಷಿಣ ಕರ್ನಾಟಕದಲ್ಲೂ ಮುನ್ನಡೆ ಗಳಿಸಲಿದೆ ಎಂದಿದೆ.

ಹೈದ್ರಾಬಾದ್ ಕರ್ನಾಟಕದಲ್ಲಿನ 50 ಸ್ಥಾನಗಳ ಪೈಕಿ ಕಾಂಗ್ರೆಸ್‌ 31-37, ಬಿಜೆಪಿ 2-4, ಜೆಡಿಎಸ್‌ 2-4; ಮುಂಬಯಿ ಕರ್ನಾಟಕದಲ್ಲಿನ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 40-46, ಬಿಜೆಪಿ 3-7, ಜೆಡಿಎಸ್‌ 0-2;  ಕರಾವಳಿ ಕರ್ನಾಟಕದಲ್ಲಿನ 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 5-9, ಬಿಜೆಪಿ 10-14, ಜೆಡಿಎಸ್ – 0, ಮಧ್ಯ ಕರ್ನಾಟಕದಲ್ಲಿನ  26 ಸ್ಥಾನಗಳಲ್ಲಿ ಕಾಂಗ್ರೆಸ್‌ 3-7, ಬಿಜೆಪಿ 19-13, ಜೆಡಿಎಸ್‌- 0, ದಕ್ಷಿಣ ಕರ್ನಾಟಕದಲ್ಲಿನ 61 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 26-32, ಬಿಜೆಪಿ 10-14, ಜೆಡಿಎಸ್‌ 15-19, ಬೆಂಗಳೂರು ನಗರದಲ್ಲಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 16-20, ಬಿಜೆಪಿ 6-10, ಜೆಡಿಎಸ್‌ 1-3 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ದೃಢಪಡಿಸಿದೆ.

ಈ ಅಭಿಪ್ರಾಯ ಹೊಂದಿರುವವರಲ್ಲಿ ಶೇ.67ರಷ್ಟು ಜನ ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಬಾರಿ ಅವಕಾಶ ಕೊಡಬಾರದೆಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಮ್ಮೆ ಅವಕಾಶ ಕೊಡಬಹುದೆಂಬ ಅನಿಸಿಕೆ ಹೊಂದಿದ್ದಾರೆ. ಬೊಮ್ಮಾಯಿ ಸರ್ಕಾರ ಮುಂದುವರಿಯಬಾರದು ಎಂದು 67% ಜನರು ಅಭಿಪ್ರಾಯ ತಾಳಿದ್ದಾರೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ.

ಎಬಿಪಿ ಸಿ-ವೋಟರ್‌ ಸಮೀಕ್ಷೆಯಲ್ಲೂ ಕಾಂಗ್ರೆಸ್‌ಗೆ ಬಹುಮತ

ಎಬಿಪಿ ಸಿ–ವೋಟರ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಪಕ್ಷ 115 – 127 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗಿದೆ. ಆಡಳಿತರೂಢ ಬಿಜೆಪಿ ಪಕ್ಷ 68 – 80 ಸ್ಥಾನಗಳನ್ನು ಗೆಲ್ಲಬಹುದು, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ 23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಿ–ವೋಟರ್ ಸಮೀಕ್ಷೆ ಹೇಳುತ್ತಿದೆ.

‘ಟಿವಿ9 ಕನ್ನಡ ಸಿವೋಟರ್’ ಸಮೀಕ್ಷೆಯಲ್ಲೂ ಕಾಂಗ್ರೆಸ್ ಮೈಲುಗೈ

‘ಟಿವಿ9 ಕನ್ನಡ ಸಿವೋಟರ್’ ಸಮೀಕ್ಷೆಯ ವರದಿ ಪ್ರಕಾರ, ಕಾಂಗ್ರೆಸ್ ಪಕ್ಷವು 106 ರಿಂದ 116 ಸ್ಥಾನ ಗಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿ 79ರಿಂದ 89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜೆಡಿಎಸ್​​ಗೆ 24 ರಿಂದ 34 ಸ್ಥಾನ ದೊರೆತರೆ ಇತರರು 0 ಯಿಂದ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ. ಪ್ರತಿಪಕ್ಷ ಕಾಂಗ್ರೆಸ್ ಶೇ. 40 ರಷ್ಟು ಮತಹಂಚಿಕೆ ಪಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ಶೇ. 33.9 ಮತ್ತು ಜೆಡಿಎಸ್ ಶೇ. 18.8ರಷ್ಟು ಮತ ಹಂಚಿಕೆ ಪಡೆಯಲಿದೆ ಎಂದು ‘ಟಿವಿ9 ಕನ್ನಡ’ ಮತ್ತು ‘ಸಿವೋಟರ್’ ಸಮೀಕ್ಷಾ ವರದಿ ತಿಳಿಸಿದೆ.

ಜನ್‌ಕೀ ಬಾತ್‌ನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ

ಜನ್‌ ಕೀ ಬಾತ್‌ ಸಮೀಕ್ಷೆಯ ಪ್ರಕಾರ ಬಿಜೆಪಿ 98ರಿಂದ 109 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪ್ರತಿಪಕ್ಷ ಕಾಂಗ್ರೆಸ್‌ 89ರಿಂದ 97 ಸ್ಥಾನಗಳೊಂದಿಗೆ 2ನೇ ಅತಿದೊಡ್ಡ ಪಕ್ಷ ಎನಿಸಿಕೊಳ್ಳಲಿದೆ. ಜೆಡಿಎಸ್‌ 25ರಿಂದ 29 ಸ್ಥಾನಗಳನ್ನಷ್ಟೇ ಗಳಿಸಲಿದೆ. ಇತರರು ಕೇವಲ 1 ಸ್ಥಾನ ಪಡೆಯಲಿದ್ದಾರೆ. 224 ಸದಸ್ಯಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಬೇಕಿದ್ದರೆ ಕನಿಷ್ಠ 113 ಸ್ಥಾನ ಗಳಿಸಬೇಕಿದ್ದು, ಈ ಬಾರಿ ಆ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಸಮೀಕ್ಷೆ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...